Home » Kangana Ranaut controversy: ಕಂಗನಾಗೆ ಕಪಾಳಮೋಕ್ಷ ಮಾಡಿದ ಕೌರ್’ಗೆ ಹೊಸ ಉದ್ಯೋಗ ನೀಡಿದ ವಿಶಾಲ್ ದಾಡ್ಲಾನಿ – ಹಿಂಸೆಗೆ ಪ್ರೋತ್ಸಾಹ ಕೊಟ್ಟ ಬಾಲಿವುಡ್ !

Kangana Ranaut controversy: ಕಂಗನಾಗೆ ಕಪಾಳಮೋಕ್ಷ ಮಾಡಿದ ಕೌರ್’ಗೆ ಹೊಸ ಉದ್ಯೋಗ ನೀಡಿದ ವಿಶಾಲ್ ದಾಡ್ಲಾನಿ – ಹಿಂಸೆಗೆ ಪ್ರೋತ್ಸಾಹ ಕೊಟ್ಟ ಬಾಲಿವುಡ್ !

0 comments
Kangana Ranaut controversy

Kangana Ranaut controversy: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿನಿಮಾ ನಟಿ, ನೂತನ ಸಂಸದೆ ಕಂಗನಾ ರಾಣಾವತ್ ಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದ‌ರ್ ಕೌ‌ರ್ ಅವರನ್ನು ಕೆಲಸದಿಂದ ವಜಾಗೊಳಿಸಿದ ತಕ್ಷಣ ಆಕೆಗೆ ಉದ್ಯೋಗ ನೀಡುವುದಾಗಿ ಬಾಲಿವುಡ್ ಹೇಳಿದೆ. ಹಿಂಸೆಗೆ ಪ್ರಚೋದನೆ ನೀಡುವಂತೆ ಸಂಗೀತ ಸಂಯೋಜಕ, ಗಾಯಕ ವಿಶಾಲ್ ದದ್ದಾನಿ ಭರವಸೆ ನೀಡಿದ್ದಾರೆ.

ರ್ಯಾಪರ್‌ ಚಂದನ್‌ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ; ಕೋರ್ಟ್‌ಗೆ ಕೈ ಕೈ ಹಿಡಿದುಕೊಂಡೇ ಬಂದ ನಿವಿ-ಚಂದನ್‌; ಫೋಟೋ ವೈರಲ್‌

ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ವಿಶಾಲ್ ದಾಡ್ಲಾನಿ, “ಹಿಂಸಾಚಾರವನ್ನು ನಾನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ, ಆದರೆ ಕಾನ್‌ಸ್ಟೆಬಲ್‌ ಕೌರ್ ಅವರ ಸಿಟ್ಟನ್ನು ಅರ್ಥಮಾಡಿಕೊಳ್ಳುತ್ತೇನೆ. ಸಿಐಎಸ್‌ಎಫ್‌ ಕೌರ್ ವಿರುದ್ಧ ಕ್ರಮ ಕೈಗೊಂಡರೆ, ಅವರಿಗೋಸ್ಕರ ಒಂದು ಕೆಲಸ ಕಾಯುತ್ತಿದೆ, ಅದನ್ನು ಅವರು ಒಪ್ಪಿಕೊಳ್ಳಬೇಕಷ್ಟೆ” ಎಂದು ಅವರು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

“ನಿಮ್ಮ ತಾಯಿ ₹100ಕ್ಕೆ ಸಿಗ್ತಾರಾ ಎಂದು ಯಾರಾದರೂ ಕೇಳಿದ್ದರೆ ಆಗ ನೀವೇನು ಮಾಡುತ್ತಿದ್ದಿರಿ ಎಂಬ ಪ್ರಶ್ನೆಯನ್ನು ಯಾರೆಲ್ಲಾ ದುಂಗನಾ (ಕಂಗನಾ) ಅವರ ಪರವಾಗಿದ್ದಿರೋ ಅವರನ್ನು ಕೇಳಬಯಸುತ್ತೇನೆ” ಎಂದು ಮತ್ತೊಂದು ಪೋಸ್ಟ್‌ನಲ್ಲಿ ದದ್ದಾನಿ ಬರೆದಿದ್ದಾರೆ. ಕೌರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿದರೆ, ಆಕೆಗೆ ನನ್ನನ್ನು ಸಂಪರ್ಕಿಸಲು ತಿಳಿಸಿ, ಅವರಿಗೆ ಕೈತುಂಬ ಸಂಬಳದ ಉದ್ಯೋಗ ಖಾತ್ರಿಯನ್ನು ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ.

Ramoji Rao Death: ಫಿಲ್ಮ್ ಸಿಟಿ ಪಿತಾಮಹ ರಾಮೋಜಿ ರಾವ್ ಇನ್ನಿಲ್ಲ

You may also like

Leave a Comment