5
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿದ ನಟ ದರ್ಶನ್ ಅಂಧಾಭಿಮಾನಿಗಳ ಮೇಲೆ ಸೈಬರ್ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆಗ ಪಾಪ, ಅವರು ಬಡ ಹುಡುಗರು ಎಂದು ಕೆಲವರು ಕನಿಕರ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ನಟಿ ರಮ್ಯಾ ಪ್ರತಿಕ್ರಿಯೆಯನ್ನು ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಒಬ್ಬರ ಬಗ್ಗೆ ಕೆಟ್ಟ ಕಮಂಟ್ ಹಾಕುವುದಕ್ಕೂ ಮುಂಚೆ ಯೋಚನೆ ಮಾಡಬೇಕು. ಒಂದು ಮಹಿಳೆ ಬಗ್ಗೆ ಅಶ್ಲೀಲ ಕಮೆಂಟ್ ಹಾಕುವಾಗ ಬಡತನವಿರಲಿಲ್ಲವಾ ಎಂದು ಖಡಕ್ಕಾಗಿ ಪ್ರಶ್ನೆ ಮಾಡಿದ್ದಾರೆ. ಅಶ್ಲೀಲ ಕಾಮೆಂಟ್ ಮಾಡುವವರ ಮೇಲೆ.ಆಕೆ ಕಿಡಿ ಕಾರಿದ್ದು, ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಅಂದಿದ್ದಾರೆ.
