Home » Coffee with karan: ನಿಮ್ಮನ್ನು ಕಂಡಾಕ್ಷಣ ಹುಡುಗರು ನೋಡೋದೇನು ?! ಜಾಹ್ನವಿ ಉತ್ತರಕ್ಕೆ ಕರಣ್​ ಜೋಹರ್​ ಶಾಕ್​!

Coffee with karan: ನಿಮ್ಮನ್ನು ಕಂಡಾಕ್ಷಣ ಹುಡುಗರು ನೋಡೋದೇನು ?! ಜಾಹ್ನವಿ ಉತ್ತರಕ್ಕೆ ಕರಣ್​ ಜೋಹರ್​ ಶಾಕ್​!

0 comments

 

Coffee with karan: ಬಾಲಿವುಡ್ ರಂಗದಲ್ಲಿ ಭಾರೀ ಖ್ಯಾತಿ ಗಳಿಸಿರುವ ಸಂದರ್ಶನ ಶೋ ಎಂದರೆ ಅದು ಕರಣ್ ಜೋಹರ್ ನಡೆಸುವ ‘ಕಾಫಿ ವಿತ್ ಕರಣ್'(Coffee with karan)ಎಂಬ ಕಾರ್ಯಕ್ರಮ. ಇಲ್ಲಿ ನಟ, ನಟಿಯರಿಗೆ ನೇರವಾಗಿ ತೀರಾ ಖಾಸಗಿ ಹಾಗೂ ವೈಯಕ್ತಿಕ ವಿಷಯಗಳನ್ನು, ಬೋಲ್ಡ್ ಆದ ಪ್ರಶ್ನೆಗಳನ್ನು, ಲೈಂಗಿಕ ವಿಚಾರಗಳನ್ನು ಕೇಳಲಾಗುತ್ತದೆ. ಅಂತೆಯೇ ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ನಟಿ ಜಾಹ್ನವಿ ಕಪೂರ್’ಗೆ ‘ಹುಡುಗರು ನಿಮ್ಮನ್ನು ಕಂಡಾಕ್ಷಣ ಎಲ್ಲಿ ನೋಡ್ತಾರೆ’ ಎಂದು ಪ್ರಶ್ನಿಸಿದ್ದು, ಆಕೆಯ ಉತ್ತರಕ್ಕೆ ಕರಣ್ ಜೋಹರ್ ಶಾಕ್ ಆಗಿದ್ದಾರೆ.

ಹೌದು, ಕಾಫಿ ವಿತ್​ ಕರಣ್​ (Koffee With Karan) ಮುಂಬರುವ ಸಂಚಿಕೆಯಲ್ಲಿ ನಟಿ ಶ್ರೀದೇವಿಯವರ ಪುತ್ರಿಯರಾದ ಖುದ್ದು ನಟಿಯರಾದ ಜಾಹ್ನವಿ ಕಪೂರ್‌ ( Janhvi Kapoor) ಮತ್ತು ಖುಷಿ ಕಪೂರ್ (Khushi Kapoor) ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಇದರ ಪ್ರೋಮೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಹುಡುಗರು ನಿಮ್ಮನ್ನು ಕಂಡಾಕ್ಷಣ ಎಲ್ಲಿ ನೋಡ್ತಾರೆ ಎಂದು ಕರಣ್ ಅವರು ಕೇಳುತ್ತಾರೆ ಆಗ ಜಾಹ್ನವಿ ‘ಹುಡುಗರೆಲ್ಲಾ ನನ್ನನ್ನು ನೋಡಿದಾಗ ನಿಮ್ಮ ಕಣ್ಣುಗಳು ತುಂಬಾ ಅಟ್ರಾಕ್ಟ್​ ಆಗಿದೆ. ಅದನ್ನೇ ನೋಡುತ್ತೇವೆ ಎನ್ನುತ್ತಾರೆ. ಆದರೆ ನಾನು ಅವರನ್ನು ಸರಿಯಾಗಿ ನೋಡಿದಾಗ ತಿಳಿಯುತ್ತದೆ. ಅವರ ಕಣ್ಣುಗಳು ನನ್ನ ಕಣ್ಣುಗಳನ್ನು ನೋಡುತ್ತಿರುವುದಿಲ್ಲ, ಬದಲಿಗೆ ಅವರ ದೃಷ್ಟಿ ಬೇರೆಲ್ಲೋ ನೆಟ್ಟಿರುತ್ತದೆ ಎಂದು ಧೈರ್ಯವಾಗಿಯೇ ಹೇಳುತ್ತಾರೆ. ಇದನ್ನು ಕೇಳಿ ಖುದ್ದು ಕರಣ್​ ಜೋಹರ್​ ಶಾಕ್​ ಆಗಿದ್ದು, ನಟಿಯ ಧೈರ್ಯದ ಉತ್ತರ ಕೇಳಿ ಗಹಗಹಿಸಿ ನಕ್ಕಿದ್ದಾರೆ.

You may also like

Leave a Comment