Home » Rakshitha Prem: ಕೊರಗಜ್ಜನ ಭಕ್ತೆ ನಟಿ ರಕ್ಷಿತಾ; ನಟಿ ಬೇಡಿದ ಬೇಡಿಕೆ ಏನು?

Rakshitha Prem: ಕೊರಗಜ್ಜನ ಭಕ್ತೆ ನಟಿ ರಕ್ಷಿತಾ; ನಟಿ ಬೇಡಿದ ಬೇಡಿಕೆ ಏನು?

0 comments
Rakshitha Prem

Rakshita Prem: ತುಳನಾಡಿನ ದೈವ ಕೊರಗಜ್ಜನನ್ನ ನಂಬಿದರೆ ತಮ್ಮ ಇಷ್ಟ ಸಿದ್ಧಿ ಪ್ರಾಪ್ತಿಯಾಗುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿ ಸ್ಯಾಂಡಲ್‌ವುಡ್‌ನ ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್ (Rakshita Prem) ಕೂಡಾ ಒಬ್ಬರು.

ಇದನ್ನೂ ಓದಿ: Congress Government : ಸಿದ್ದರಾಮಯ್ಯ ಸರ್ಕಾರದ 10 ಎಡವಟ್ಟುಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ !!

ಹೌದು, ಕೊರಗಜ್ಜನ ಬಳಿ ತಮಗೇ ಏನು ಬೇಕೋ ಅದನ್ನ ಬೇಡಿಕೊಂಡು ರಕ್ಷಿತಾ ಖುಷಿ ಖುಷಿಯಾಗಿದ್ದಾರೆ.

ದೈವಿಭಕ್ತಿ ಇರೋ ರಕ್ಷಿತಾ ಪ್ರೇಮ್, ತುಳುನಾಡಿನ ಕೊರಗಜ್ಜನ ಆರಾಧನೆ ಹಿಂದಿನಿಂದಲೂ ಮಾಡುತ್ತಾರೆ. ಹಾಗಾಗಿ ತಮಗೆ ಬೇಕಿರೋದನ್ನ ಈ ಅಜ್ಜನ ಬಳಿ ಬೇಡಿಕೊಂಡಿದ್ದಾರೆ. ಅದು ನಿಜಕ್ಕೂ ಈಡೇರಿದೆ. ತಾವು ನಂಬಿದ ಕೊರಗಜ್ಜನ ಆ ಒಂದು ಪವಾಡದ ಕುರಿತು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Praveen Nettaru: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೆರೆ

ಹೌದು, ರಾಪಿಡ್ ರಶ್ಮಿ ನಡೆಸೋ ಜಸ್ಟ್ ಕ್ಯೂರಿಯೆಸ್ ಶೋದಲ್ಲಿ ರಕ್ಷಿತಾ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ, ಮುಖ್ಯವಾಗಿ ಕೊರಗಜ್ಜನ ಬಳಿ ಕಪ್ಪು ಪ್ರಾಣಿಗಳು ಅಂದ್ರೆ ತುಂಬಾನೆ ಇಷ್ಟ ಆಗುತ್ತವೆ. ಸದಾ ಕಾಲ ಕಪ್ಪು ಪ್ರಾಣಿಗಳನ್ನೆ ತೋರಿಸು ಅಂತಲೇ ಕೊರಗಜ್ಜನ ಮುಂದೆ ಆಸೆ ಕೋರಿಕೊಂಡಿದ್ದರು. ಆ ಆಸೆ ನಿಜಕ್ಕೂ ಈಡೇರಿದೆ ಅನ್ನೋದೇ ರಕ್ಷಿತಾ ಪ್ರೇಮ್ ಖುಷಿಯ ಮಾತಾಗಿದೆ.

ಅದಲ್ಲದೆ, ಕಪ್ಪು ಕಾಗೆ, ಕಪ್ಪು ಬೆಕ್ಕು, ಕಪ್ಪು ನಾಯಿ ಹೀಗೆ ಕಪ್ಪು ಬಣ್ಣದ ಪ್ರಾಣಿಗಳು ರಕ್ಷಿತಾ ಪ್ರೇಮ್ ಕಣ್ಣಿಗೆ ಬೀಳ್ತಾನೆ ಇರುತ್ತವೆ ಎಂದು ರಕ್ಷಿತಾ ಪ್ರೇಮ್ ಹೇಳಿಕೊಂಡಿದ್ದಾರೆ. ಈ ಮೂಲಕ ಕೊರಗಜ್ಜ ಎಷ್ಟು ಪವರ್ ಫುಲ್ ಅನ್ನೋದನ್ನ ತಿಳಿಸಿದ್ದಾರೆ.

ಇನ್ನು ರಕ್ಷಿತಾ ಪ್ರೇಮ್ ಅವರು, ನಾನು ನನ್ನ ರೂಟ್ಸ್ ಮತ್ತು ಸಂಸ್ಕಾರಗಳನ್ನ ಎಂದೂ ಬಿಡೋದಿಲ್ಲ, ಮರೆಯೋದಿಲ್ಲ. ಇರೋ ನಂಬಿಕೆಗಳಿಗೆ ಗೌರವ ಕೊಡುತ್ತೇನೆ ಅಂತೇ ಹೇಳಿಕೊಂಡಿದ್ದಾರೆ.

You may also like

Leave a Comment