Gilli Nata: ಗಿಲ್ಲಿ ನಟ ಅವರು ಬಿಗ್ ಬಾಸ್ನಲ್ಲಿ (Bigg Boss) ತಮ್ಮದೇ ಹೊಸ ಛಾಪು ಮೂಡಿಸುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಈಗ ಬಿಗ್ ಬಾಸ್ನಲ್ಲಿ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಆದರೆ ಈ ಗಿಲ್ಲಿ ನಟ ನಿಜವಾದ ಹೆಸರು ನಟರಾಜ್ ಎಂಬುದು. ಹಾಗಿದ್ದರೆ ನಟರಾಜ್ ಗಿಲ್ಲಿ ನಟ ಆಗಿದ್ದು ಹೇಗೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಥೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡುತ್ತಿರುವ ಗಿಲ್ಲಿಯ ನಿಜವಾದ ಹೆಸರು ನಟರಾಜ್. ಮಂಡ್ಯ ಮೂಲದವರು. ಸಾಕಷ್ಟು ಜನರು ಗಿಲ್ಲಿ ನಟ ಫಿನಾಲೆ ಸ್ಪರ್ಧಿ, ಟ್ರೋಫಿ ಗೆಲ್ತೀನಿ ಎಂದು ಹೇಳಿದ್ದರು. ಇದೀಗ ಇಡಿ ನಾಡಿನ ಜನರ ಹಾರೈಕೆ ಕೂಡ ಅದೇ ಆಗಿದೆ ಎಂದು ತಿಳಿದು ಬರುತ್ತಿದೆ. ಅಂದಹಾಗೆ ನಟರಾಜ್ ಅವರು ಮಂಡ್ಯದಲ್ಲಿ ಗಿಲ್ಲಿ ಆಡುತ್ತಿದ್ದರು. ಹೀಗಾಗಿ ಗಿಲ್ಲಿ ಎಂದು ಕರೆಯುತ್ತಿದ್ದರಂತೆ. ಇದೀಗ ಕರ್ನಾಟಕದ ಮನೆ ಮನೆ ಮಾತಾಗಿದೆ.
ನಲ್ಲಿಮೂಳೆ ಸೇರಿದಂತೆ ಕೆಲ ವೆಬ್ ಸಿರೀಸ್‌ಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಒಂದೊಂದು ಕಾನ್ಸೆಪ್ಟ್ ಇಟ್ಟುಕೊಂಡು ಸ್ಕಿಟ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
