Home » ತನ್ನ ಮನೆ ಬಣ್ಣಕ್ಕೆ ತಕ್ಕ ಹಾಗೇ ಐಷರಾಮಿ ಕಾರಿನ ಬಣ್ಣ ಬದಲಾಯಿಸಿದ ನಟಿ| ಕಾರಿಗೆ ಪೇಂಟ್ ಮಾಡಲು ಈಕೆ ಖರ್ಚು ಮಾಡಿದ್ದು ಬರೋಬ್ಬರಿ ರೂ.75 ಲಕ್ಷ

ತನ್ನ ಮನೆ ಬಣ್ಣಕ್ಕೆ ತಕ್ಕ ಹಾಗೇ ಐಷರಾಮಿ ಕಾರಿನ ಬಣ್ಣ ಬದಲಾಯಿಸಿದ ನಟಿ| ಕಾರಿಗೆ ಪೇಂಟ್ ಮಾಡಲು ಈಕೆ ಖರ್ಚು ಮಾಡಿದ್ದು ಬರೋಬ್ಬರಿ ರೂ.75 ಲಕ್ಷ

0 comments

ಕಾರುಗಳೆಂದರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಕೆಲವರು ತಮಗೆ ಇಷ್ಟವಾದ ಬಣ್ಣದ ರೀತಿಯಲ್ಲಿ ಖರೀದಿ ಮಾಡುತ್ತಾರೆ. ಇನ್ನು ಕೆಲವರು ಸಂಖ್ಯೆ ನೋಡಿ ಖರೀದಿ ಮಾಡುತ್ತಾರೆ. ಹಾಗೆಯೇ ಕೆಲವರು ಕಾರುಗಳನ್ನು ತಮಗಿಷ್ಟದ ರೀತಿಯಲ್ಲಿ ಮೋಡಿಫೈ ಮಾಡಿಕೊಳ್ಳುತ್ತಾರೆ ಕೂಡಾ. ಆದರೆ ಇಲ್ಲೊಬ್ಬ ನಟಿ ತಮ್ಮ ಮನೆಯ ಬಣ್ಣಕ್ಕೆ ಹೊಂದಿಕೆಯಾಗುವಂತ ಮೂರು ಕಾರುಗಳ ಬಣ್ಣ ಬದಲಾಯಿಸಿದ್ದಾರೆ. ಇದಕ್ಕಾಗಿ ಅವರು ಖರ್ಚು ಮಾಡಿದ್ದು 75 ಲಕ್ಷ ರೂ.

ಅಮೆರಿಕಾದ ಫ್ಯಾಶನ್ ದಿವಾ, ರಿಯಾಲಿಟಿ ಸ್ಟಾರ್ ಕಿಮ್ ಕಾರ್ಡಶಿಯನ್ ಸೂಪರ್ ಮಾಡೆಲ್. ಈಕೆಗೆ ಅತಿರಂಜಿತ ಅಭಿರುಚಿ ಎಲ್ಲದರಲ್ಲಿ. ಇದಕ್ಕೇನೇ ಈಕೆ ಹೆಸರುವಾಸಿ.

‘ವೋಗ್’ ತನ್ನ ಸಾಮಾಜಿಕ ಮಾಧ್ಯಮ ಫ್ಲಾಟ್ಫಾರ್ಮ್ ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಕಿಮ್ ತನ್ನ ಬಂಗಲೆ ಮತ್ತು ಮೂರು ಕಾರುಗಳನ್ನು ತೋರಿಸುತ್ತಿರುವ ಚಿತ್ರಣವಿದೆ.

ತನ್ನ ಮೂರು ಐಷರಾಮಿ ಕಾರುಗಳ‌ ಬಣ್ಣವನ್ನು ಈಕೆ ತನ್ನ ಬಂಗಲೆಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಬೂದು ಬಣ್ಣದಲ್ಲಿ ಪೇಂಟ್ ಮಾಡಿದ್ದಾಳೆ. ಈ ಕಾರುಗಳು ಯಾವುದು ಗೊತ್ತೇ ? ಲ್ಯಾಂಬೋರ್ಗಿನಿ ಉರುಸ್, ಮರ್ಸಿಡಿಸ್ ಮೇಬ್ಯಾಕ್ ಎಸ್ 600 ಮತ್ತು ರೋಲ್ಸ್ ರಾಯ್ಸ್ ಘೋಸ್ಟ್. ಇದಕ್ಕಾಗಿ ಈಕೆ ಖರ್ಚು ಮಾಡಿದ್ದು ಬರೋಬ್ಬರಿ 1 ಲಕ್ಷ ಡಾಲರ್. ಈ ಕಾರುಗಳ ಪೇಟಿಂಗ್ ಕೆಲಸವನ್ನು ಪ್ಲಾಟಿನಂ ಮೋಟಾರ್ ಸ್ಪೋರ್ಟ್ಸ್ ನಿರ್ವಹಿಸಿದ್ದು, ಹಾಗೂ ಈ ಕೆಲಸ ಪೂರ್ಣಗೊಳಿಸಲು ತೆಗೆದುಕೊಂಡ ಸಮಯ ಒಂದು ತಿಂಗಳು.

ಇದು ಕಿಮ್ ಅವರ ಇಷ್ಟದ ಕಾರುಗಳಲ್ಲಿ ಕೆಲವು ಎಂದು ಹೇಳಲಾಗುತ್ತಿದ್ದು, ಹಾಗಾಗಿ ಕಿಮ್ ಅವರು ವೈಯುಕ್ತಿಕವಾಗಿ ಪೇಂಟ್ ಕೆಲಸದ ನಿಗಾ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

You may also like

Leave a Comment