Nighty : ಮನೆಯಲ್ಲಿ ಇರುವ ಮಹಿಳೆಯರು ನೈಟ್ ಡ್ರೆಸ್, ಚೂಡಿದಾರ ಪ್ಯಾಂಟು, ಶರ್ಟು, ಶಾರ್ಟ್ಸ್ ಹಾಕುವುದು ಇಂದಿನ ಟ್ರೆಂಡ್ ಆಗಿದೆ. ಆದರೆ ನೈಟಿ ಹಾಕುವುದು ಗೃಹಿಣಿಯರ ಒಂದು ಫ್ಯಾಶನ್. ಹೆಚ್ಚಿನ ಗೃಹಿಣಿಯರ ಮನೆಯಲ್ಲಿ ಇರುವಾಗ ನೈಟಿಯನ್ನೇ ಧರಿಸುತ್ತಾರೆ. ಆದರೆ ಯಾವಾಗಲೂ ನೈಟಿ ಹಾಕುವ ಮಹಿಳೆಯರೇ ಎಚ್ಚರ..!! ನಿಮ್ಮನ್ನು ಕಾಡಬಹುದು ಈ ಆರೋಗ್ಯ ಸಮಸ್ಯೆಗಳು.
ಹೌದು, ಆರೋಗ್ಯ ತಜ್ಞರು ಯಾವಾಗಲೂ ನೈಟಿಯನ್ನು ಹಾಕುವುದು ಸೂಕ್ತವಲ್ಲ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಲ್ಲದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಅಂದಹಾಗೆ ನೈಟಿಗಳನ್ನು ಸಾಮಾನ್ಯವಾಗಿ ಹಗುರವಾದ, ಸಡಿಲವಾದ ಬಟ್ಟೆಗಳಿಂದ ತಯಾರಿಸಲಾಗುತ್ತದೆ. ಒಂದೇ ಉದ್ದೇಶಕ್ಕಾಗಿ ನೈಟಿಗಳನ್ನು ಧರಿಸುವುದರಿಂದ ಚರ್ಮಕ್ಕೆ ಸರಿಯಾದ ಗಾಳಿ ತಲುಪಲು ಅವಕಾಶವಿಲ್ಲ. ಇದು ಬೆವರು ಸಂಗ್ರಹಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಬಿಸಿ ವಾತಾವರಣದಲ್ಲಿ, ಚರ್ಮ ರೋಗಗಳು ಮತ್ತು ಸೋಂಕುಗಳಿಗೆ ಕಾರಣವಾಗುತ್ತದೆಯಂತೆ.
ಅಲ್ಲದೆ ನೈಟಿಗಳು ರಾತ್ರಿಯಲ್ಲಿ ಧರಿಸಲು ಮಾತ್ರ ತಯಾರಿಸಿದ ಬಟ್ಟೆಗಳಾಗಿವೆ. ಹೊರಗೆ ಹೋಗುವಾಗ ಮತ್ತು ಅಡುಗೆ ಮಾಡುವಾಗ ನೈಟಿಗಳನ್ನು ಧರಿಸುವುದು ಸೂಕ್ತವಲ್ಲ. ಹಾಗೆ ಮಾಡುವುದರಿಂದ ನಿಮ್ಮ ರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಮರ್ವಲ್ಲದೆ ನೈಟಿಗಳನ್ನು ಧರಿಸುವುದರಿಂದ ನಿಮ್ಮ ದೇಹದ ಆಕಾರ ಬದಲಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
