Home » Consumer Court: ಚಿಕನ್ ಹಾಕದೆ ಚಿಕನ್ ಬಿರಿಯಾನಿ ಕೊಟ್ಟ ಹೊಟೇಲ್ ಮಾಲೀಕ – ಕೋರ್ಟ್ ಮೆಟ್ಟಿಲೇರಿ, ಲಾಯರ್ ಇಲ್ಲದೆ ಭಾರೀ ದಂಡ ಕಕ್ಕಿಸಿದ ಗ್ರಾಹಕ !!

Consumer Court: ಚಿಕನ್ ಹಾಕದೆ ಚಿಕನ್ ಬಿರಿಯಾನಿ ಕೊಟ್ಟ ಹೊಟೇಲ್ ಮಾಲೀಕ – ಕೋರ್ಟ್ ಮೆಟ್ಟಿಲೇರಿ, ಲಾಯರ್ ಇಲ್ಲದೆ ಭಾರೀ ದಂಡ ಕಕ್ಕಿಸಿದ ಗ್ರಾಹಕ !!

1 comment
Consumer Court

Bengaluru News: ಬೆಂಗಳೂರಿನಲ್ಲಿ(Bengaluru News) ಚಿಕನ್ ಇಲ್ಲದೆ ಚಿಕನ್ ಬಿರಿಯಾನಿ ನೀಡಿದ ರೆಸ್ಟೋರೆಂಟ್‌ಗೆ ಗ್ರಾಹಕ ನ್ಯಾಯಾಲಯ (Consumer Court) ಭಾರೀ ದಂಡ ವಿಧಿಸಿದ ಘಟನೆ ನಡೆದಿದೆ. ಯಾವುದೇ ವಕೀಲರಿಲ್ಲದೇ ವಾದ ಮಾಡಿದ ಗ್ರಾಹಕರಿಗೆ 150 ರೂ. ಮರು ಪಾವತಿ ಮಾಡಿ 1 ಸಾವಿರ ರೂಪಾಯಿ ಹಣವನ್ನು ದಂಡವನ್ನಾಗಿ ಪಾವತಿಸುವಂತೆ ಕೋರ್ಟ್ ರೆಸ್ಟೋರೆಂಟ್‌ಗೆ ಆದೇಶ ಹೊರಡಿಸಿದೆ.

ಕೃಷ್ಣಪ್ಪ ಎಂಬುವವರು ಏಪ್ರಿಲ್‌ನಲ್ಲಿ ಹೆಂಡತಿಯೊಂದಿಗೆ ರೆಸ್ಟೋರೆಂಟ್‌ಗೆ ಹೋಗಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿ ಪಾರ್ಸೆಲ್ ತಂದಿದ್ದರಂತೆ. ಆದರೆ, ಮನೆಯಲ್ಲಿ ಪಾರ್ಸೆಲ್ ತೆಗೆದು ನೋಡಿದ ಸಂದರ್ಭ ಅದರಲ್ಲಿ ಮಾಂಸವಿಲ್ಲದ ಬಿರಿಯಾನಿ ಅನ್ನವನ್ನು ನೀಡಲಾಗಿತ್ತು. ಇದನ್ನು ಕಂಡ ಕೃಷ್ಣಪ್ಪ ತಕ್ಷಣ ರೆಸ್ಟೋರೆಂಟ್‌ಗೆ ಕರೆ ಮಾಡಿದ್ದಾಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕರು ಕೆಲವೇ ನಿಮಿಷಗಳಲ್ಲಿ ಆರ್ಡರ್ ಅನ್ನು ಬದಲಾಯಿಸುವ ಭರವಸೆ ನೀಡಿದ್ದರಂತೆ.

ಇದನ್ನು ಓದಿ: Mahadevaiah dead body found: ಬಿಜೆಪಿ ನಾಯಕ ಸಿ ಪಿ ಯೋಗೀಶ್ವರ್ ಭಾವನ ಕೊಲೆ ?! ಕಾಡಿನ ಮಧ್ಯ ಮೂಟೆಯಲ್ಲಿ ಮೃತ ದೇಹ ಪತ್ತೆ !!

ಆದರೆ ಎರಡು ಗಂಟೆಗಳ ಬಳಿಕ ಕೂಡ ರೆಸ್ಟೋರೆಂಟ್ ಚಿಕನ್ ಬಿರಿಯಾನಿ ನೀಡಿಲ್ಲ. ಹೀಗಾಗಿ, ಕೃಷ್ಣಪ್ಪ ಅವರು ರೆಸ್ಟೋರೆಂಟ್‌ಗೆ ನೋಟಿಸ್ ನೀಡಲು ನಿರ್ಧರಿಸಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ರವಾನಿಸಿದರು ಕೂಡ ಮಾಲೀಕರಿಂದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ, ಸಂತ್ರಸ್ತರು ಮೇ ತಿಂಗಳಿನಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಭೇಟಿ ಮಾಡಿ ಉಪಾಹಾರ ಗೃಹದ ಮಾಲೀಕರ ವಿರುದ್ಧ ದೂರು ನೀಡಿ ₹ 30,000 ಪರಿಹಾರ ನೀಡುವಂತೆ ಕೋರಿದ್ದರು.

ಇದನ್ನು ಓದಿ: Adhar Update: ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಕ್ಯಾನ್ಸಲ್- ಸರ್ಕಾರದ ಹೊಸ ಆದೇಶ !! ಯಾಕಾಗಿ ಗೊತ್ತಾ ?

ಕೃಷ್ಣಪ್ಪ ಯಾವುದೇ ವಕೀಲರನ್ನು ನೇಮಕ ಮಾಡದೇ ಸ್ವಂತವಾಗಿ ವಾದ ಮಂಡಿಸಿದ್ದರು. ಅವರ ವಾದವನ್ನು ಪರಿಗಣಿಸಿದ ನ್ಯಾಯಾಧೀಶರು, ರೆಸ್ಟೋರೆಂಟ್ ಗೊತ್ತಿದೋ ಗೊತ್ತಿಲ್ಲದೆಯೋ ತಪ್ಪು ಮಾಡಿದ್ದು, ಗ್ರಾಹಕರಿಗೆ ಸರಿಯಾದ ಸೇವೆಗಳನ್ನು ನೀಡಿಲ್ಲ. ಹೀಗಾಗಿ ಪರಿಹಾರವಾಗಿ 150 ರೂ. ಮರು ಪಾವತಿ ಮತ್ತು 1ಸಾವಿರ ರೂಪಾಯಿ ದಂಡ ವಿಧಿಸಿದೆ.

 

You may also like

Leave a Comment