Home » Food Poison: ಪರೋಟ ತಂದಿತ್ತು ಜೀವಕ್ಕೆ ಕುತ್ತು: ಮರಣೋತ್ತರ ಪರೀಕ್ಷೆ ವೇಳೆ ಬಯಲಾಯಿತು ಸಾವಿನ ಹಿಂದಿನ ರೋಚಕ ಸತ್ಯ!

Food Poison: ಪರೋಟ ತಂದಿತ್ತು ಜೀವಕ್ಕೆ ಕುತ್ತು: ಮರಣೋತ್ತರ ಪರೀಕ್ಷೆ ವೇಳೆ ಬಯಲಾಯಿತು ಸಾವಿನ ಹಿಂದಿನ ರೋಚಕ ಸತ್ಯ!

1 comment
Food Poison

Food Poison: ಕೊಯಮತ್ತೂರಿನಲ್ಲಿ ಪರೋಟ ತಿಂದ ಕೆಲ ಹೊತ್ತಲ್ಲೇ ಯುವಕನೊಬ್ಬ ಮೃತಪಟ್ಟ(Death)ಆಘಾತಕಾರಿ ಘಟನೆ ವರದಿಯಾಗಿದೆ. ವಿದ್ಯಾರ್ಥಿ ಪರೋಟ (Parota)ತಿಂದ ಬಳಿಕ ಅಲರ್ಜಿಯ ರಿಯಾಕ್ಸನ್ನಿಂದ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತ ಯುವಕನನ್ನು ತಿರ್ಪ್ಪೂರ್ ಜಿಲ್ಲೆಯ ಕನಕಂಪಾಳ್ಯಂ ಪಟ್ಟಣದ ಕರುವಾಯುರಪ್ಪನ್ ನಗರದ ನಿವಾಸಿ ರಾಮಸಾಮಿ ಅವರ ಮಗನಾದ(Son)ಹೇಮಚಂದ್ರನ್ (19) ಎಂದು ಗುರುತಿಸಲಾಗಿದೆ. ಹೇಮಚಂದ್ರನ್ ಸುಲೂರು ಬಳಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದನಂತೆ. ಈತ ಕನಕಂಪಾಳ್ಯಂ ಪಟ್ಟಣದ ಬಾಡಿಗೆ ಮನೆಯಲ್ಲಿ ಸ್ನೇಹಿತರೊಂದಿಗೆ ವಾಸವಿದ್ದ. ಬುಧವಾರ ರಾತ್ರಿ ಹೇಮಚಂದ್ರನ್ ಮತ್ತು ಆತನ ಸ್ನೇಹಿತರು ಊಟಕ್ಕೆಂದು ಪರೋಟ ತಂದು ಸೇವಿಸಿದ್ದರು ಎನ್ನಲಾಗಿದ್ದು, ಗುರುವಾರ ಮುಂಜಾನೆ ವೇಳೆಗೆ ಹೇಮಚಂದ್ರನ್ ಎಚ್ಚರಗೊಂಡಾಗ ಉಸಿರಾಟದ ಸಮಸ್ಯೆ ಎದುರಾಗಿದೆ. ಇದಾದ ಕೆಲವೇ ಹೊತ್ತಲ್ಲಿ ಆತ ಕುಸಿದುಬಿದ್ದಿದ್ದಾನೆ ಎನ್ನಲಾಗಿದೆ. ಹೀಗಾಗಿ, ಆತನನ್ನು ಸ್ನೇಹಿತರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು ಆದರೆ ಅಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಈ ಪ್ರಕರಣದ ಕುರಿತಂತೆ ಸುಲೂರು ಪೊಲೀಸರು ಹೇಮಚಂದ್ರನ್ ದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್)ಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 174 ಸಿಆರ್ಪಿಸಿ (ಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ವರದಿ ನಡೆಸಿದ ಸಿಎಂಸಿಎಚ್ ವೈದ್ಯರೊಬ್ಬರ ಪ್ರಕಾರ, ವಿದ್ಯಾರ್ಥಿ ಪರೋಟ ಸೇವಿಸಿದ್ದು ಸಾವಿಗೆ ಕಾರಣವಾಗಿದ್ದು, ಶ್ವಾಸಕೋಸದ ಒಳಗೆ ಮೈದಾ ಅಂಶಗಳು ಪತ್ತೆಯಾಗಿದೆ ಎನ್ನಲಾಗಿದೆ. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಿ ಜೀವ ಹೋಗಿರುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: Silk Saree Caring Tips: ರೇಷ್ಮೆ ಸೀರೆಯನ್ನು ಹೀಗೆ ಇಸ್ತ್ರಿ ಮಾಡಿ, ಇಲ್ಲದಿದ್ದರೆ ಬೇಗ ಹಾಳಾಗುತ್ತೆ!

You may also like

Leave a Comment