4
ಭಾರತೀಯ ಆಹಾರದಲ್ಲಿ ಹಲವಾರು ಶತಮಾನದಿಂದಲೂ ಬೆಳ್ಳುಳ್ಳಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಲೇ ಬಂದಿದೆ. ಬೆಳ್ಳುಳ್ಳಿಯು ಆಹಾರದ ರುಚಿಯನ್ನು ಹೆಚ್ಚು ಮಾಡುವುದಲ್ಲದೇ ಆರೋಗ್ಯದ ದೃಷ್ಟಿಯಲ್ಲೂ ಉಪಯೋಗಕಾರಿಯಾಗಿದೆ.
ಆದರೆ ಅತಿಯಾದ ಬೆಳ್ಳುಳ್ಳಿ ಸೇವನೆಯು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
✓ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದು ಎದೆಯುರಿ, ವಾಕರಿಕೆ ಮತ್ತು ವಾಂತಿಗೆ ಕಾರಣವಾಗುತ್ತದೆ.
✓ ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರು ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಬೇಕು ಅಥವಾ ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
✓ ದೇಹದ ದುರ್ವಾಸನೆಯೊಂದಿಗೆ ಹೋರಾಡುವ ಜನರು ಇದನ್ನು ತಿನ್ನಬಾರದು.
✓ ಅಸಿಡಿಟಿ ಸಮಸ್ಯೆ ಹೊಂದಿರುವ ಜನರು ಬೆಳ್ಳುಳ್ಳಿಯಿಂದ ದೂರವಿರಬೇಕು.
✓ ಭೇದಿಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಪ್ಪಿಸಬೇಕು.
✓ ಗರ್ಭಿಣಿಯರು ಬೆಳ್ಳುಳ್ಳಿಯನ್ನು ಅತಿಯಾಗಿ ತಿನ್ನಬಾರದು.
