Home » Ladies Finger: ಬೆಂಡೆಕಾಯಿ ಲೋಳೆಯಾಗದಂತೆ ಅಡುಗೆ ಮಾಡಲು, ಈ ಟಿಪ್ಸ್​ ಫಾಲೋ ಮಾಡಿ !

Ladies Finger: ಬೆಂಡೆಕಾಯಿ ಲೋಳೆಯಾಗದಂತೆ ಅಡುಗೆ ಮಾಡಲು, ಈ ಟಿಪ್ಸ್​ ಫಾಲೋ ಮಾಡಿ !

1 comment
Ladies Finger

Ladies finger: ನಾವು ಸೇವಿಸುವ ತರಕಾರಿಗಳಲ್ಲಿ ಬೆಂಡೆಕಾಯಿ(ladies finger) ಕೂಡ ಒಂದು. ಬೆಂಡೆಕಾಯಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ. ಮುಖ್ಯವಾಗಿ ಪಿಷ್ಟ, ಸಾರಜನಕ, ಕೊಬ್ಬು, ಸುಣ್ಣ, ರಂಜಕ, ಕಬ್ಬಿಣ, ಮ್ಯಾಗ್ನೀಷಿಯಂ, ‘ಎ’ ಜೀವಸತ್ವ, ‘ಬಿ1’ ಜೀವಸತ್ವ, ‘ಬಿ2’ ಜೀವಸತ್ವ, ನಯಾಸಿನ್, ‘ಸಿ’ ಜೀವಸತ್ವ, ಪೊಟ್ಯಾಷಿಯಂ, ಆಕ್ಯಾಲಿಕ್ ಆಮ್ಲ,ಗಳಂತಹ ಪೌಷ್ಟಿಕಾಂಶಗಳು ಬೆಂಡೆಕಾಯಿ ಮೂಲಕ ನಮಗೆ ದೊರೆಯುತ್ತವೆ .

ಬೆಂಡೆಕಾಯಿಂದ ಹಲವಾರು ವಿಧವಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಪ್ರಮುಖವಾಗಿ ಪಲ್ಯ, ಸಂಬಾರು, ಬೆಂಡೆಗೊಜ್ಜು, ಬೆಂಡೆಕಾಯಿ ರಸಂ, ಬೆಂಡೆಕಾಯಿ ಸಾಸಿವೆ, ಬೆಂಡೆಕಾಯಿ ಫ್ರೈ, ಬೆಂಡೆ ಬಜೆ, ಬೆಂಡೆಕಾಯಿ ಬಾಳಕ, ಬೆಂಡೆ ಹುಳಿ ಇತ್ಯಾದಿ.

ಆದರೆ ಈ ಬೆಂಡೆಕಾಯಿಯ ಅಡುಗೆ ಮಾಡುವಾಗ ಲೋಳೆ ಲೋಳೆ ಬರುವುದು ಕೆಲವರಿಗೆ ದೊಡ್ಡ ಸಮಸ್ಯೆ ಆಗಿದೆ. ಈ ಸಮಸ್ಯೆ ಇಲ್ಲಿ ಪರಿಹಾರ (Kitchen Tips) ತಿಳಿಸಲಾಗಿದೆ.

ಮೊದಲು ನೀವು ಬೆಂಡೆಕಾಯಿ ಅಡುಗೆ ಮಾಡುವ ಮೊದಲು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನಂತರ ಒದ್ದೆಯಾದ ಬೆಂಡೆಕಾಯಿಯನ್ನು ಒಣಗಿರುವ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಬೇಕು.

ನಂತರ ಬಾಣಲೆಗೆ ಕೊಂಚ ಅಡುಗೆ ಎಣ್ಣೆಯನ್ನು ಹಾಕಿ, ಚಿಕ್ಕದಾಗಿ ಕತ್ತಿರಿಸಿದ ಬೆಂಡೆಕಾಯಿಯನ್ನು ಬಾಣಲೆಗೆ ಹಾಕಿ 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಬೇಕು. ಆ ಬೆಂಡೆಕಾಯಿಯು ಕಂದು ಬಣ್ಣಕ್ಕೆ ಬರಬೇಕು. ಆಗ ಲೋಳೆ ರಸ ಹೋಗಿರುತ್ತದೆ. ಆದರೆ ಬೆಂಡೆಕಾಯಿ ಫ್ರೈ ಮಾಡುವಾಗ ಅದಕ್ಕೆ ಮೊದಲೇ ಉಪ್ಪನ್ನು ಹಾಕಬೇಡಿ. ನೀವು ಸಂಪೂರ್ಣ ಎಲ್ಲಾ ಮಸಾಲೆಗಳನ್ನು ಹಾಕಿದ ನಂತರ, ಕೊನೆಯಲ್ಲಿ ಉಪ್ಪನ್ನು ಹಾಕಿ. ಹಾಗೆಯೇ ನಿಂಬೆ ರಸವನ್ನು ಕೂಡ ಹಾಕಬೇಡಿ.

ಆದರೆ ಬೆಂಡೆಕಾಯಿಯನ್ನು ಬೇಯಿಸುವಾಗ ಯಾವುದೇ ಕಾರಣಕ್ಕೂ ಮುಚ್ಚಿಡಬೇಡಿ. ಇದರಿಂದ ಹಬೆ ಹೆಚ್ಚಾಗಿ ಲೋಳೆ ಹಾಗೆಯೇ ಉಳಿದಿರುತ್ತದೆ.

ಇನ್ನು ಬೆಂಡೆಕಾಯಿಯನ್ನು ಫ್ರೈ ಮಾಡುವಾಗ ಕೊಂಚ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿದ್ರೆ ಆಗ ಲೋಳೆ ಆಗೋದಿಲ್ಲ. ಈ ಹಿಟ್ಟನ್ನು ಹಾಕಿ 3 ನಿಮಷವಾದ್ರೂ ಹುರಿಬೇಕು. ಆಗ ಫುಲ್​ ಲೋಳೆ ಹೋಗುತ್ತದೆ.

ಇದನ್ನೂ ಓದಿ:  ಸಿದ್ದು ಕಾರಿನ ಮೇಲೆ ಕೂತ ಕಾಗೆಗೂ, ಡಿಕೆಶಿ ಹೆಲಿಕಾಪ್ಟರ್​ಗೆ ಗುದ್ದಿದ ರಣಹದ್ದಿಗೂ ಇದೆಯಾ ಸಂಬಂಧ! ಭಜರಂಗದಳ ನಿಷೇದಿಸೋದಾಗಿ ಹೇಳಿದ್ದಕ್ಕೆ ಸಿಕ್ಕ ಫಲನಾ ಇದು?

You may also like

Leave a Comment