Home » Boiled Eggs : ಮೊಟ್ಟೆಯನ್ನು ಬೇಯಿಸುವುದು ಗೊತ್ತು , ಆದ್ರೆ ಬೇಯಿಸಿದ್ದನ್ನು ಮತ್ತೆ ಹಸಿ ಮಾಡುವುದು ಗೊತ್ತಾ?! ಇಲ್ಲಿದೆ ನೋಡಿ ಹೊಸ ಆವಿಷ್ಕಾರ

Boiled Eggs : ಮೊಟ್ಟೆಯನ್ನು ಬೇಯಿಸುವುದು ಗೊತ್ತು , ಆದ್ರೆ ಬೇಯಿಸಿದ್ದನ್ನು ಮತ್ತೆ ಹಸಿ ಮಾಡುವುದು ಗೊತ್ತಾ?! ಇಲ್ಲಿದೆ ನೋಡಿ ಹೊಸ ಆವಿಷ್ಕಾರ

1 comment
Boiled Eggs

Boiled Eggs: ಮೊಟ್ಟೆಯಲ್ಲಿ(egg)ಸಾಕಷ್ಟು ಪ್ರೋಟೀನ್ ಅಂಶಗಳು ಇರುವ ಹಿನ್ನೆಲೆ ಮೊಟ್ಟೆ ಸೇವಿಸಲು ಆರೋಗ್ಯ ತಜ್ಞರು(Doctors)ಶಿಫಾರಸ್ಸು ಮಾಡುವುದು ಗೊತ್ತಿರುವ ಸಂಗತಿ. ಅದೇ ರೀತಿ,ದೈನಂದಿನ ಉಪಾಹಾರದಲ್ಲಿ ಅಥವಾ ಊಟದಲ್ಲಿ ನಾವು ಮೊಟ್ಟೆಗಳನ್ನು ಸೇವಿಸುತ್ತೇವೆ. ಮೊಟ್ಟೆಯಲ್ಲಿ ಪ್ರೋಟೀನ್ ಅಂಶಗಳಿರುವ ಹಿನ್ನೆಲೆ ಜಿಮ್ ಮಾಡುವವರು ಬೇಯಿಸಿದ ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸುತ್ತಾರೆ.

ಹಸಿ ಮೊಟ್ಟೆಗಳನ್ನು ಬೇಯಿಸಿದ ರೀತಿಯಲ್ಲೇ ಬೇಯಿಸಿದ ಮೊಟ್ಟೆಗಳನ್ನು(Boiled Eggs)ಮತ್ತೆ ಹಸಿ ಮಾಡಬಹುದು ಎಂಬ ವಿಚಾರ ನಿಮಗೆ ತಿಳಿದಿದೆಯೇ?? ಅರೇ, ಇದು ಹೇಗೆ ಸಾಧ್ಯ ಎಂದು ನೀವು ಅಚ್ಚರಿ ಮೂಡಿಸಬಹುದು. ಈ ರೀತಿಯ ಅಚ್ಚರಿಯ ಆವಿಷ್ಕಾರದ (New Invention)ಕುರಿತ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಇದನ್ನು ಓದಿ: sharmistha mukherjee: ಕಾಂಗ್ರೆಸ್ ಗೆ ಬಿಗ್ ಶಾಕ್- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ ಬಿಚ್ಚಿಟ್ರು ಸ್ಪೋಟಕ ರಹಸ್ಯ !!

ಮೊಟ್ಟೆಯನ್ನು ಬೇಯಿಸಿದಾಗ ಅದರೊಳಗಿನ ದ್ರವ ವಸ್ತು ಗಟ್ಟಿಯಾಗುತ್ತದೆ. ಆದರೆ ಅದನ್ನು ಮತ್ತೆ ಕಚ್ಚಾ ಮಾಡುವುದು ಹೇಗೆ? ಎಂಬ ಕುತೂಹಲ ಹೆಚ್ಚಿನವರನ್ನು ಕಾಡುತ್ತದೆ. ಬೇಯಿಸಿದ ಮೊಟ್ಟೆಗಳನ್ನು ಮತ್ತೆ ಹಸಿ ಮಾಡಬಹುದು ಎಂಬುದನ್ನು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜನರಲ್ ಮೆಡಿಕಲ್ ಸೈನ್ಸಸ್ ಹಾಗೂ ಅಮೆರಿಕದ ಸಂಶೋಧನಾ ಮಂಡಳಿ ಸಂಶೋಧನೆ ನಡೆಸಿದೆ. ವಿಜ್ಞಾನಿಗಳು ಇದನ್ನು ಯೂರಿಯಾದ ಸಹಾಯದಿಂದ ಮಾಡಿದ್ದಾರೆ ಎನ್ನಲಾಗಿದ್ದು, ಯೂರಿಯಾದ ನೆರವಿನಿಂದ ವಿಜ್ಞಾನಿಗಳು ಘನೀಕರಿಸಿದ ಮೊಟ್ಟೆಯ ಪ್ರೋಟೀನ್ ಅನ್ನು ಅದರ ಹಿಂದಿನ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ಪ್ರಕ್ರಿಯೆಯಲ್ಲಿ ಯೂರಿಯಾದ ಜೊತೆಗೆ ಹೆಚ್ಚಿನ ಸಾಮರ್ಥ್ಯದ ಸುಳಿಯ ದ್ರವ ಯಂತ್ರದ ಅವಶ್ಯಕತೆ ಇತ್ತು ಎನ್ನಲಾಗಿದೆ.

You may also like

Leave a Comment