Home » ಜೇನುತುಪ್ಪವನ್ನು ಇರುವೆಗಳಿಂದ ರಕ್ಷಿಸಲು ಈ ಟ್ರಿಕ್ ಮಾಡಿ!

ಜೇನುತುಪ್ಪವನ್ನು ಇರುವೆಗಳಿಂದ ರಕ್ಷಿಸಲು ಈ ಟ್ರಿಕ್ ಮಾಡಿ!

0 comments

ಮನೆಯಲ್ಲಿ ಏನಾದರೂ ಸಿಹಿವಸ್ತು ಇಟ್ಟ ತಕ್ಷಣ ಎಲ್ಲಿಂದಲೋ ಬಂದ ಇರುವೆ ಗುಂಪುಗಳು ಮುತ್ತಿಗೆ ಹಾಕುವುದನ್ನು ನೋಡಿದ್ದೇವೆ. ಅಡುಗೆಮನೆಯಲ್ಲಿ ವಿಶೇಷವಾಗಿ ಜೇನುತುಪ್ಪ ಮತ್ತು ಸಕ್ಕರೆ ಡಬ್ಬಿಗಳಲ್ಲಿ ಇರುವೆ ಕಂಡು ಬರೋದು ಸಾಮಾನ್ಯ.

ಸಕ್ಕರೆಯಿಂದ ಇರುವೆಗಳನ್ನು ಸುಲಭವಾಗಿ ತೆಗೆದುಹಾಕಬಹುದು ಆದರೆ ಜೇನುತುಪ್ಪದಿಂದ ತೆಗೆಯೋದು ಕಷ್ಟ. ಏಕೆಂದರೆ ಜೇನುತುಪ್ಪ ಒದ್ದೆಯಾಗಿರುತ್ತೆ. ಹಾಗಾದರೆ ಜೇನಿನಲ್ಲಿ ಇರುವೆ ತುಂಬಿಕೊಂಡರೆ ಅವುಗಳನ್ನು ನಿವಾರಣೆ ಮಾಡೋದು ಹೇಗೆ? ಜೇನಿಗೆ ಇರುವೆ ಬಾರದಂತೆ ಕಾಪಾಡೋದು ಹೇಗೆ?, ಹಾಗಿದ್ರೆ ಬನ್ನಿ ಇರುವೆಗಳನ್ನು ದೂರವಿಡಲು ಈ ಅಡುಗೆ ಹ್ಯಾಕ್ ಅನ್ನು ಒಮ್ಮೆ ಟ್ರೈ ಮಾಡಿ.

ಜೇನು ತುಪ್ಪದಿಂದ ಇರುವೆಗಳನ್ನು ದೂರವಿರಿಸಲು ನೀವು ಸ್ವಚ್ಛ ಮತ್ತು ಉತ್ತಮ ಸ್ಥಳವನ್ನು ಆಯ್ಕೆ ಮಾಡಿ. ಉದಾಹರಣೆಗೆ ಜೇನುತುಪ್ಪವನ್ನು ಗಾಜಿನ ಕಪಾಟಿನಲ್ಲಿ ಇಡಬಹುದು. ಇಲ್ಲಿ ಇರುವೆಗಳು ಬರುವ ಸಾಧ್ಯತೆ ಕಡಿಮೆ. ಜೇನುತುಪ್ಪವನ್ನು ಬಳಸಿದ ನಂತರ ಜಾರ್ ಅನ್ನು ಸ್ವಚ್ಛವಾಗಿಡಿ. ಅನೇಕ ಬಾರಿ ಜೇನುತುಪ್ಪ ಜಾರ್ ನ ಹೊರ ಮೇಲ್ಮೈಯಲ್ಲಿ ಇರುತ್ತದೆ, ಆದ್ದರಿಂದ ಒದ್ದೆ ಬಟ್ಟೆಯಿಂದ ಮೊದಲು ಜಾರ್ ಅಥವಾ ಪೆಟ್ಟಿಗೆಯನ್ನು ಸ್ವಚ್ಛಗೊಳಿಸಿ ಮತ್ತು ಇರುವೆಗಳು ಕಂಪಾರ್ಟ್ ಮೆಂಟ್ ಒಳಗೆ ಹೋಗದಂತೆ ನೀವು ಜಾರ್ ಅನ್ನು ಬಿಗಿಯಾಗಿ ಮುಚ್ಚಿ.

ಇದಕ್ಕಾಗಿ, ನೀವು ಗಾಳಿಯಾಡದ ಕಂಟೇನರ್ ಅಥವಾ ಜಾ‌ರ್ ಬಳಸಬೇಕು. ಅದನ್ನು ಸ್ವಚ್ಛವಾದ ಸ್ಥಳದಲ್ಲಿ ಸಂಗ್ರಹಿಸಿಡುವುದು ಉತ್ತಮ. ಇದರಿಂದ ಇರುವೆಗಳು ಜಾರ್ ಗೆ ಮುತ್ತಿಗೆ ಹಾಕುವ ಸಾಧ್ಯತೆ ಕಡಿಮೆ. ಪ್ಲಾಸ್ಟಿಕ್ ಡಬ್ಬಿ ಬಳಸುವುದನ್ನು ತಪ್ಪಿಸಬೇಕು ಏಕೆಂದರೆ ಅದರಲ್ಲಿರುವ ಜೇನುತುಪ್ಪವು ಬೇಗನೆ ಹಾಳಾಗುತ್ತದೆ.

ಜೇನುತುಪ್ಪಕ್ಕೆ ಸರಿಯಾದ ತಾಪಮಾನ ಸಿಗಬೇಕು. ಅಂದರೆ 70-80 ಡಿಗ್ರಿ ಫ್ಯಾರನ್ ಹೀಟ್ ಅಥವಾ ಸೂರ್ಯನ ಬೆಳಕಿನಿಂದ ದೂರವಿಡಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ ಇರುವೆಗಳು ಮುತ್ತಿಗೆ ಹಾಕೋದಿಲ್ಲ ಮತ್ತು ಅದು ದೀರ್ಘಕಾಲದವರೆಗೆ ತಾಜಾವಾಗಿ ಉಳಿಯುತ್ತದೆ.

ಇರುವೆಗಳು ಬೆಳ್ಳುಳ್ಳಿಯ ವಾಸನೆಯಿಂದ ಓಡಿಹೋಗುತ್ತವೆ. ಹಾಗಾಗಿ ಡಬ್ಬಿಗಳ ಸುತ್ತಲೂ ಬೆಳ್ಳುಳ್ಳಿಯನ್ನು ನೇತುಹಾಕಿ. ಬೇವಿನ ಪರಿಮಳದಿಂದಲೂ ಇವು ಓಡಿಹೋಗುವುದರಿಂದ ನೀವು ಜೇನು ಡಬ್ಬಿಯ ಸುತ್ತಲೂ ಬೇವಿನ ಎಲೆಗಳನ್ನು ಇಡಬಹುದು, ಬೇವಿನ ಎಣ್ಣೆಯನ್ನು ಚಿಮುಕಿಸಬಹುದು. ಇದರ ಗಾಢ ಪರಿಮಳಕ್ಕೆ ಇರುವೆಗಳು ದೂರ ಓಡುತ್ತವೆ.

ಜೇನುತುಪ್ಪದ ಪೆಟ್ಟಿಗೆಯ ಹತ್ತಿರ ಕಾಫಿ ಪುಡಿಯನ್ನು ಹರಡಿ. ಇದರ ಹತ್ತಿರ ಕೂಡ ಇರುವೆಗಳು ಬರುವುದಿಲ್ಲ. ಈ ಹ್ಯಾಕ್ಸ್ ಟ್ರೈ ಮಾಡಿದರೆ ಜೇನಿನ ಡಬ್ಬಿಯ ಹತ್ತಿರ ಇರುವೆಗಳು ಸುಳಿಯದಂತೆ ಮಾಡಬಹುದು.

You may also like

Leave a Comment