Kundapura: ಉಡುಪಿ ಕುಂದಾಪುರದ ಕೋಡಿಯಿಂದ ಕೋಟೇಶ್ವರದ ಕಿನಾರ, ಹಳುವಳ್ಳಿ, ಬೀಜಾಡಿಯವರೆಗೆ ಬೆಳಗ್ಗೆ ರಾಶಿ- ರಾಶಿ ಬೂತಾಯಿ (ಬೈಗೆ) ಮೀನುಗಳು ಕಡಲ ತೀರಕ್ಕೆ ಬಂದಿದೆ. ಅದನ್ನು ಕೊಂಡೊಯ್ಯಲು ಜನ ಮುಗಿ ಬಿದ್ದಿದಾರೆ.
ಬೀಜಾಡಿ, ಕೋಟೇಶ್ವರ, ಕೋಡಿಯವರೆಗಿನ ಕಡಲ ಕಿನಾರೆಯಲ್ಲಿ ಬೆಳಗ್ಗೆ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಏಕ ಕಾಲದಲ್ಲಿ ಬಂದಿದ್ದು, ಅಪಾರ ಪ್ರಮಾಣದ ಮೀನು ದಡಕ್ಕೆ ಬಂದಿದೆ ಅನ್ನುವ ಸುದ್ದಿ ತಿಳಿದು ತೀರದ ಆಸುಪಾಸಿನ ಪರಿಸರದಲ್ಲೆಡೆ ಹಬ್ಬಿದ್ದು ನೂರಾರು ಜನ ಮೀನಿಗಾಗಿ ಮುಗಿಬಿದ್ದರು.ಹತ್ತಾರು ಡಿಸ್ಕೋ ದೋಣಿಯವರು ಏಕ ಕಾಲದಲ್ಲಿ ಬಲೆ ಬಿಟ್ಟಾಗ ದಡದ ಆಸುಪಾಸಿಗೆ ಬಂದ ಬೂತಾಯಿ ಮೀನುಗಳಿಗೆ ವಾಪಸ್ ಹೋಗಲು ಬೇರೆ ದಾರಿ ಇಲ್ಲದೆ, ದಡಕ್ಕೆ ತೇಲಿ ಬರುತ್ತಿವೆ. ಎಲ್ಲಾ ಕಡೆಗಳಲ್ಲಿ ವರ್ಷಕ್ಕೊಮ್ಮೆ ಈ ರೀತಿ ಬೂತಾಯಿ ಮೀನಿನ ರಾಶಿ ಬರುತ್ತವೆ. ಜಾಸ್ತಿ ಹೊತ್ತು ಇರುವುದಿಲ್ಲ. ಒಂದಷ್ಟು ಹೊತು ಇರುತ್ತವೆ. ಅಷ್ಟರಲ್ಲೇ ಹೋದವರಿಗೆ ಬಂಪರ್ ಮೀನಿನ ಲಾಭ. ಸದ್ಯ ತೀರಪ್ರದೇಶದಲ್ಲಿ ರಾಶಿ ರಾಶಿ ಮೀನು ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ.
