Home » Mango Recipes: ಮಾವಿನಹಣ್ಣಿಂದ ಎಷ್ಟೆಲ್ಲಾ ರುಚಿಯಾದ ವೆರೈಟಿ ತಿನಿಸು ತಯಾರಿಸಬಹುದು ನೋಡಿ!

Mango Recipes: ಮಾವಿನಹಣ್ಣಿಂದ ಎಷ್ಟೆಲ್ಲಾ ರುಚಿಯಾದ ವೆರೈಟಿ ತಿನಿಸು ತಯಾರಿಸಬಹುದು ನೋಡಿ!

1 comment
Mango Recipes

Mango Recipes : ಬೇಸಿಗೆ ಕಾಲ ಶುರು ಆಗೋದೆ ತಡ ಮಾರುಕಟ್ಟೆಯಲ್ಲಿ ಮಾವಿನದ್ದೆ ದರ್ಭಾರು, ಹಣ್ಣುಗಳ ರಾಜ ಮಾವು ವೆರೈಟಿ ವೆರೈಟಿ ಯಾಗಿ ಜನರ ಕಣ್ಣನ್ನು ಕುಕ್ಕುತ್ತದೆ. ಈ ಬೇಸಿಗೆಯಲ್ಲಿ ದಿನಕ್ಕೊಂದಾದರು ಮಾವು ತಿನ್ನುವುದೇ ಮಜಾ.

ಪ್ರತಿದಿನ ಮಾವನ್ನು (mango) ಒಂದೇ ರೀತಿ ತಿಂದರೆ ಬೋರ್ ಆಗಬಹುದು, ಹಾಗಿದ್ದಲ್ಲಿ ದಿನಕ್ಕೊಂದು ವೆರೈಟಿ ರೀತಿ ಮಾಡಿ ತಿನ್ನಿರಿ. ಮ್ಯಾಂಗೋ ಶೇಕ್(mango shake), ಮ್ಯಾಂಗೋ ಐಸ್ ಕ್ರೀಮ್(mango ice cream) , ಮ್ಯಾಂಗೋ ಲಸ್ಸಿ (mango lassi) ಹೀಗೆ ನಾನತರಹ ರೆಸಿಪಿ ಮಾಡಿ ಸವಿಯಿರಿ. ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ತಿನ್ನಬಹುದಾದ ರೆಸಿಪಿ (Mango Recipes) ಇಲ್ಲಿದೆ ನೋಡಿ.

ಮ್ಯಾಂಗೋ ಚೆನ್ನಾ ಖೀರ್ – ನೀವು ಹೊಸ ಹೊಸ ರುಚಿಯನ್ನು ಬಯಸುವುದಾದರೆ, ನಿಮಗೆ ಈ ಮ್ಯಾಂಗೋ ಚೆನ್ನಾ ಖೀರ್ ಬೆಸ್ಟ್. ಈ ಖೀರ್ ಅನ್ನು ಕಾಟೇಜ್ ಚೀಸ್ ಚೆನ್ನಾ ಎಂದು ಕರೆಯುತ್ತಾರೆ. ನೀವು ಈ ರೆಸಿಪಿ ನೋಡಿದರೆ ಬಾಯಲ್ಲಿ ನೀರು ಬರುವುದು ಖಂಡಿತ. ಮೊದಲು ಗಂಟುಗಳು ಇಲ್ಲದಂತೆ ಸ್ಮೂತ್ ಮಿಕ್ಚರ್ ಆಗುವವರೆಗೆ ಮಿಕ್ಸ್ ಮಾಡಿ. ನಂತರ ಸಣ್ಣಗೆ ಕತ್ತರಿಸಿದ ಡ್ರೈ ಫ್ರೂಟ್ಸ್ (dry fruits) , ನಟ್ (nat) ಗಳಿಂದ ಅಲಂಕಾರ ಮಾಡಿರಿ, ನೀವು ಬಯಸಿದ ಮ್ಯಾಂಗೋ ಚೆನ್ನಾ ಖೀರ್ ರೆಡಿ. ಇದನ್ನು ಸ್ವಲ್ಪ ಸಮಯದ ವರೆಗೆ ರೆಫ್ರಿಜರೇಟರ್‌ (Refrigerator) ನಲ್ಲಿ ಇಡಿ.

ಮ್ಯಾಂಗೋ ಐಸ್ ಕ್ರೀಮ್ – ಮನೆಯಲ್ಲಿಯೇ ಆರೋಗ್ಯಕರ ಐಸ್ ಕ್ರೀಮ್ ತಯಾರಿಸಲು ಇಲ್ಲಿದೆ ರೆಸಿಪಿ. ಮೊದಲು ಒಂದು ಬೌಲ್ ಗೆ ಹೆವಿ ಕ್ರೀಮ್(cream), ಕಂಡನ್ಸಡ್ ಮಿಲ್ಕ್ ( milk) ಮತ್ತು ವೆನಿಲಾ ಡ್ರಾಪ್ಸ್ (venila drops) ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದರ ಜೊತೆಗೆ ಮ್ಯಾಂಗೋ ಪ್ಯೂರಿ ಮಿಕ್ಸ್ ಮಾಡಿ. ಈ ಎಲ್ಲಾ ಮಿಶ್ರಣವನ್ನು ಒಂದು ಕಂಟೇನರ್ ಗೆ ಸೇರಿಸಿ ಫ್ರೀಜರ್‌ನಲ್ಲಿ (fridge) ಸೆಟ್ ಆಗುವವರೆಗೆ ಇಡಿ. ಸ್ವಲ್ಪ ಸಮಯದ ನಂತರ ಮಿಶ್ರಣವನ್ನು ತಿರುವಿ ಮತ್ತೆ ಫ್ರೀಜರ್‌ನಲ್ಲಿಡಿ. ಬಳಿಕ ಸಣ್ಣ ಸಣ್ಣ ಮಾವಿನ ತುಂಡುಗಳನ್ನು ಮಿಶ್ರಣದ ಮೇಲೆ ಹಾಕಿರಿ. ನಿಮ್ಮ ಮ್ಯಾಂಗೋ ಐಸ್ ಕ್ರೀಮ್ (mango ice cream) ರೆಡಿ.

ಮಾವಿನಹಣ್ಣಿನ ಸಲಾಡ್ – ಉತ್ತಮ ಆರೋಗ್ಯಕ್ಕಾಗಿ ಸುಲಭವಾಗಿರುವ ಸಲಾಡ್ (salad) ತಯಾರು ಮಾಡಿ. ಎರಡರಿಂದ ಮೂರು ಹಣ್ಣುಗಳನ್ನು ಬಳಸಿ ಈ ಸಲಾಡ್ ರೆಡಿ ಮಾಡಿ. ಮೊದಲು ಮಾವು(mango) ನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಬೌಲ್ ಗೆ ಹಾಕಿರಿ. ಇದರ ಜೊತೆ ಸೌತೆಕಾಯಿ ಸಣ್ಣ ತುಂಡುಗಳು, ಮತ್ತು ಕೆಂಪು ಈರುಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿ. ಇದಕ್ಕೆ ಸ್ವಲ್ಪ ನಿಂಬೆರಸ, ಜೇನುತುಪ್ಪ, ಉಪ್ಪು, ಬ್ಲಾಕ್ ಪೆಪ್ಪರ್ ಹಾಕಿರಿ. ನಿಮಗೆ ಸಲಾಡ್(salad) ಕೂಲ್ ಆಗಿ ಇರಬೇಕು ಎಂದರೆ ರೆಫ್ರಿಜರೇಟರ್ (Refrigerator) ಇಟ್ಟು ನಂತರ ತಿನ್ನಿರಿ.

ಮ್ಯಾಂಗೋ ಕೊಕನಟ್‌ ಕರಿ – ನಿಮ್ಮ ಮನೆಯಲ್ಲಿ ಮ್ಯಾಂಗೋ (mango) ಮತ್ತು ಕೊಕನಟ್ (cocount) ಇದ್ದಾರೆ ಕೇರಳದ ಫೇಮಸ್ ಫುಡ್ ಅನ್ನು ನೀವು ಕೂಡ ತಯಾರಿಸಬಹುದು. ಮೊದಲು ಮಾವಿನ ಹಣ್ಣು, ಗಟ್ಟಿ ತೆಂಗಿನಹಾಲು (cocountmilk) ಮತ್ತು ರುಚಿಯಾದ ಮಸಾಲೆಗಳನ್ನು ರೆಡಿ ಇಟ್ಟುಕೊಳ್ಳಿ. ಮಿಕ್ಸಿಯಲ್ಲಿ ಮಾವಿನಹಣ್ಣು, ತೆಂಗಿನಹಾಲು, ಏಲಕ್ಕಿ, ಚೆಕ್ಕೆ, ಲವಂಗದೊಂದಿಗೆ ನಿಮಗೆ ಬೇಕಾದ ಸುವಾಸನೆಭರಿತ ಸಾಂಬಾರ ಪದಾರ್ಥಗಳನ್ನು ಸೇರಿಸಿ ಬ್ಲೆಂಡ್ (blend) ಮಾಡಿ ಒಂದು ಬೌಲ್ ಗೆ ಹಾಕಿ. ನಂತರ ಇದಕ್ಕೆ ಸಾಸಿವೆ, ಕರಿಬೇವು, ಇಂಗು ಸೇರಿಸಿ ಒಗ್ಗರಣೆ ಹಾಕಿ, ಇದಾದ ಮೇಲೆ ಮಾವಿನ ಸಣ್ಣ ತುಂಡುಗಳಿಂದ ಕರಿಯನ್ನು ಅಲಂಕರಿಸಿ. ನೀವು ಇದನ್ನು ಅನ್ನ, ರೊಟ್ಟಿ ಮತ್ತು ಚಪಾತಿ ಜೊತೆಗೆ ತಿನ್ನಿರಿ.

ಈ ವಿಭಿನ್ನ ರುಚಿಕಾರ ರೆಸಿಪಿ ಗಳಿಂದ ನಿಮ್ಮ ಬಾಯಲ್ಲಿ ನೀರು ಬರುವುದು ಖಂಡಿತಾ. ಬೇಸಿಗೆ ಸಮಯದಲ್ಲಿ ನೀವು ಈ ರೆಸಿಪಿ ಮಾಡಿ ಸವಿರುಚಿ ಸವಿಯಿರಿ.

You may also like

Leave a Comment