ಚಿಕನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರ ಬಾಯಯಲ್ಲಿ ಖಂಡಿತ ನೀರೂರುವುದು ಸಹಜ. ಆದರೆ ಮಾಂಸಹಾರಿಗಳಿಗೊಂದು ಇಲ್ಲೊಂದು ಬ್ಯಾಡ್ ನ್ಯೂಸ್ ಇದೆ. ಚಿಕನ್ ಶವರ್ಮಾ (Chicken Shawarma) ತಿಂದ ಸ್ವಲ್ಪ ಹೊತ್ತಿನಲ್ಲಿ ಬಾಲಕಿಯೋರ್ವಳು ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಕೆಲ ಹೊತ್ತಿನಲ್ಲೇ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊನೆಗೆ ಸಾವನ್ನಪ್ಪಿರುವುದಾಗಿ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೇ 13ವೈದ್ಯಕೀಯ ವಿದ್ಯಾರ್ಥಿಗಳು ಚಿಕನ್ ಶವರ್ಮಾ ತಿಂದು ತೀರ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ 14ರ ಬಾಲಕಿ ಶವರ್ಮಾ ತಿಂದಿದ್ದು, ಕೂಡಲೇ ಆಕೆಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮನೆಯವರು ತಕ್ಷಣವೇ ತಮಿಳುನಾಡಿನ ನಾಮಕ್ಕಲ್‌ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ. ರೆಸ್ಟೋರೆಂಟ್‌ವೊಂದರಿಂದ ಬಾಲಕಿಯ ತಂದೆ ಈ ಚಿಕನ್ ಶವರ್ಮಾ ತಂದಿದ್ದು, ಬಾಲಕಿ ಇದನ್ನು ತಿಂದ ನಂತರ ಈ ಘಟನೆ ನಡೆದಿದೆ.
ಆದರೆ 13 ವೈದ್ಯಕೀಯ ವಿದ್ಯಾರ್ಥಿಗಳು ಇದೇ ರೆಸ್ಟೋರೆಂಟ್‌ನಿಂದ ಮಾಂಸಾಹಾರ ಸೇವಿಸಿದ್ದು, ಅವರು ಕೂಡಾ ತೀರಾ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗೊಳಗಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಅಧಿಕಾರಿಗಳು ರೆಸ್ಟೋರೆಂಟ್‌ಗೆ ದಾಳಿ ನಡೆಸಿದ್ದಾರೆ. ಹಾಗೂ ಆಹಾರದ ಮಾದರಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿ ಬಳಸಲಾಗಿದ್ದ ಮಾಂಸಾಹಾರ ಪದಾರ್ಥಗಳನ್ನೆಲ್ಲ ಪರೀಕ್ಷೆಗೊಳಪಡಿಸಲಾಗಿದೆ ಎಂದು ಆಹಾರ ಸುರಕ್ಷತಾ ತಂಡ ತಿಳಿಸಿದೆ.
