pressure cooker: ಪ್ರೆಷರ್ ಕುಕ್ಕರ್ ಇದು ಅಡಿಗೆ ಮಾಡಲು ಅತ್ಯಂತ ಸುಲಭದ ವಿಧಾನವಾಗಿದ್ದು, ಕೆಲವೊಂದು ಆಹಾರಗಳನ್ನು ಅದರಲ್ಲಿ ಬೇಯಿಸುವುದರಿಂದ ಅದರ ರುಚಿ ಹಾಗೂ ಶುದ್ಧತೆ ಅಳಿಸಿಹೋಗುತ್ತದೆ.
ಹೌದು ಏಡಿ, ಮೀನು ಹೀಗೆ ಸಮುದ್ರದ ಆಹಾರಗಳನ್ನು ಇದರಲ್ಲಿ ಬೇಯಿಸುವುದರಿಂದ ಅವುಗಳು ದುರ್ವಾಸನೆ ಬರಲು ಪ್ರಾರಂಭಿಸುತ್ತವೆ. ಅನ್ನ ಮಾಡಲು ಬಹಳ ಸುಲಭ ವಿಧಾನ ಕುಕ್ಕರ್, ಆದರೆ ಇದರಲ್ಲಿ ಮಾಡುವುದರಿಂದ ಅನ್ನುವು ಜಿಗುಟಾಗುತ್ತದೆ ಹಾಗೂ ಪಾತ್ರೆಯಲ್ಲಿ ಮಾಡಿದಷ್ಟು ರುಚಿಯೂ ಬರುವುದಿಲ್ಲ.
ಇನ್ನೂ ಹುರಿದ ಆಹಾರಗಳ ತಯಾರಿಕೆಗೆ ಎಣ್ಣೆ ಬೇಕಾಗಿರುವುದರಿಂದ ಅವುಗಳನ್ನು ಕುಕ್ಕರ್ ಗೆ ಹಾಕಬಾರದು. ಇನ್ನೂ ಮೊಟ್ಟೆಗೆ ಕುಕ್ಕರ್ ನೊಳಗಿನ ಒತ್ತಡ ಜಾಸ್ತಿಯಾಗುವುದರಿಂದ ಮೊಟ್ಟೆ ಒಡೆಯುವ ಸಾಧ್ಯತೆ ಇರುತ್ತದೆ.ಇನ್ನು ಪಾಲಕ್ ಸೊಪ್ಪು ಹಾಗೂ ಎಲೆ ಕೋಸು ತುಂಬಾ ಮೃದು ಆದುದರಿಂದ ಅವು ಕೂಡ ಕುಕ್ಕರ್ ನ ಪ್ರೆಶರ್ ಅನ್ನು ತಡೆದುಕೊಳ್ಳುವುದಿಲ್ಲ.
ಇನ್ನೂ ಹಾಲು ಕೂಡ ಪ್ರೆಶರ್ ನಿಂದಾಗಿ ಹಾಳಾಗುತ್ತದೆ ಹಾಗೂ ಹಣ್ಣುಗಳನ್ನು ಬೇಯಿಸುವುದರಿಂದ ಅವು ತಮ್ಮ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳುತ್ತವೆ.
