Indira Kit: ಮುಂದಿನ ವರ್ಷ ಫೆಬ್ರವರಿಗೆ ಇಂದಿರಾ ಕಿಟ್ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಮಾಧ್ಯಮ ಜೊತೆ ಮಾತನಾಡಿದಅವರು “ಜೋಳದ ಖರೀದಿ ಬೆಲೆ ಹಾಗೂ ‘ಇಂದಿರಾ ಕಿಟ್’ ಯೋಜನೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಮಾಧ್ಯಮಕ್ಕೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು” ಎಂದು ಮುನಿಯಪ್ಪ ತಿಳಿಸಿದರು. ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಇರುತ್ತದೆ ಎಂದು ಸಚಿವರು ವಿವರಿಸಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (ಪಿಎಂಜಿಕೆವೈ) ಅಡಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು ಎಂದು ಮುನಿಯಪ್ಪ ಅವರು ಘೋಷಿಸಿದರು. ಈ ಕಿಟ್ಟನ್ನು ‘ಇಂದಿರಾ ಕಿಟ್’ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು. ‘ಈ ಪದಾರ್ಥಗಳನ್ನು ನೀಡುವುದರಿಂದ ನೇರವಾಗಿ ಆ ಕುಟುಂಬಕ್ಕೆ ಸೇರುತ್ತದೆ. ಇದು ಪ್ರೋಟೀನ್ ಸಮೃದ್ಧ ಆಹಾರವಾಗಿದ್ದು, ಮಕ್ಕಳು ಮತ್ತು ಕುಟುಂಬದ ಎಲ್ಲ ಸದಸ್ಯರ ಬೆಳವಣಿಗೆಗೆ ಉಪಯುಕ್ತವಾಗಿದೆ’ ಎಂದು ಅವರು ತಿಳಿಸಿದರು.ಈ ಯೋಜನೆಯನ್ನು ಜನವರಿ ಅಥವಾ ಅಂತಿಮವಾಗಿ ಫೆಬ್ರವರಿ 2025ರ ಹೊತ್ತಿಗೆ ಕಾರ್ಯರೂಪಕ್ಕೆ ತರಲು ಟೆಂಡರ್ ಪ್ರಕ್ರಿಯೆ ಹಾಗೂ ಗುಣಮಟ್ಟದ ಪರಿಶೀಲನೆ ನಡೆಯುತ್ತಿದೆ ಎಂದು ಮುನಿಯಪ್ಪ ಅವರು ಸ್ಪಷ್ಟಪಡಿಸಿದರು.
