Home » Ration Card: APL-BPL ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದೀರಾ? ಈ ದಿನದಂದು ನಿಮ್ಮ ಕೈಸೇರಲಿದೆ ಹೊಸ ಕಾರ್ಡ್‌!!!

Ration Card: APL-BPL ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದೀರಾ? ಈ ದಿನದಂದು ನಿಮ್ಮ ಕೈಸೇರಲಿದೆ ಹೊಸ ಕಾರ್ಡ್‌!!!

by Mallika
0 comments

BPL,APL Ration Card: ಆಹಾರ ಇಲಾಖೆ ಹೊಸ ಎಪಿಎಲ್‌, ಬಿಪಿಎಲ್‌ ರೇಷನ್‌ ಕಾರ್ಡ್‌ಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಜನವರಿ ಮೊದಲ ವಾರವೇ ಹೊಸ ರೇಷನ್‌ ಕಾರ್ಡ್‌ ವಿತರಣೆ ಮಾಡಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಹಾಗಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ಸಿಹಿಸುದ್ದಿ ಎಂದೇ ಹೇಳಬಹುದು.

ಆಹಾರ ಇಲಾಖೆಯು ಶೀಘ್ರವೇ ಪರಿಶೀಲನೆ ಮಾಡಿ ಕಾರ್ಡ್‌ ವಿತರಣೆ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಹಾಗಾಗಿ ಇನ್ನೊಂದು ವಾರದಲ್ಲೇ ಅರ್ಹರಿಗೆ ಪಡಿತರ ಚೀಟಿ ವಿತರಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಬಡ್ಡಿ ದರದಲ್ಲಿ ಏರಿಕೆ, ಕೇಂದ್ರದಿಂದ ಹೊಸ ವರ್ಷಕ್ಕೆ ಮತ್ತೊಂದು ಗಿಫ್ಟ್

ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಹೆಸರು ಬಂದಿದೆಯಾ ಎಂಬುವುದನ್ನು ಈ ರೀತಿ ಚೆಕ್‌ ಮಾಡಬಹುದು. ಮೊದಲಿಗೆ https://ahara.kar.nic.in/WebForms/Show_RationCard.aspx ಇಲ್ಲಿಗೆ ಭೇಟಿ ನೀಡಿ. ಇಲ್ಲಿ ಎಡಭಾಗದಲ್ಲಿ ಕಾಣುವ ಈ ಪಡಿತರ ಚೀಟಿ ಎನ್ನುವ ಮೇಲೆ ಆಯ್ಕೆ ಮಾಡಿ.
ಅಲ್ಲಿ ವಿತರಣೆಯಾಗದ ಹೊಸ ಪಡಿತರ ಚೀಟಿ ಲಿಸ್ಟ್‌ ಇರುತ್ತದೆ.
ನಂತರ ನೀವು ನಿಮ್ಮ ಜಿಲ್ಲೆ ಗ್ರಾಮ ಹಾಗೂ ಮತದಾರ ವಿವರಗಳನ್ನು ನೀಡಿ ಗೋ ಎಂದು ಕ್ಲಿಕ್‌ ಮಾಡಿದರೆ ಲಿಸ್ಟ್‌ ತೆರೆದುಕೊಳ್ಳುತ್ತದೆ.
ವಿತರಣದೇ ಆಗದೇ ಇರುವ ಹೊಸ ರೇಷನ್‌ ಕಾಡ್‌ಗಳ ಪಟ್ಟಿ ಕಾಣುತ್ತದೆ. ಈ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಶೀಘ್ರದಲ್ಲೇ ಕಾರ್ಡ್‌ ಮನೆ ಬಾಗಿಲಿಗೆ ಬರಲಿದೆ ಎಂದರ್ಥ.

You may also like

Leave a Comment