Home » KFC ಸ್ಯಾಂಡ್‌ವಿಚ್‌ ಪ್ಯಾಕೆಟ್‌ನ ಜೊತೆ ಮಹಿಳೆಯೋರ್ವರಿಗೆ ಸಿಕ್ತು 43 ಸಾವಿರ ರೂಪಾಯಿ!

KFC ಸ್ಯಾಂಡ್‌ವಿಚ್‌ ಪ್ಯಾಕೆಟ್‌ನ ಜೊತೆ ಮಹಿಳೆಯೋರ್ವರಿಗೆ ಸಿಕ್ತು 43 ಸಾವಿರ ರೂಪಾಯಿ!

0 comments

ಕಷ್ಟದಲ್ಲಿರೋ ಯಾರಿಗಾದರೂ ಸರಿ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಿಂದಾದರೂ ಹಣ ಬಂದರೆ ಒಳ್ಳೆದಿತ್ತು ಎಂದು ಭಾವಿಸುತ್ತಾರೆ. ಅದರಂತೆ ಇಲ್ಲೊಂದು ಕಡೆ, ಸಾಲದಲ್ಲಿ ಮುಳುಗಿದ್ದ ಮಹಿಳೆಗೆ 43 ಸಾವಿರ ರೂಪಾಯಿ ಸಿಕ್ಕಿದೆ. ಅದು ಕೂಡ ಕೆಎಫ್‌ಸಿಯ (KFC) ಸ್ಯಾಂಡ್‌ವಿಚ್‌ (Sandwich) ಪ್ಯಾಕೆಟ್‌ನಲ್ಲಿ!!

ಅರೇ, ಇದೇನು ಸ್ಯಾಂಡ್‌ವಿಚ್‌ ಜೊತೆ ಹಣನೂ ನೀಡುತ್ತಾರ ಎಂದು ನೀವು ಅಂದುಕೊಂಡ್ರೆ ಅದು ತಪ್ಪು. ಯಾಕಂದ್ರೆ, ಮಹಿಳೆ ಟೇಕ್‌ಅವೇ ಬ್ಯಾಗ್‌ನಲ್ಲಿ ಚಿಕನ್ ಸ್ಯಾಂಡ್‌ವಿಚ್ ಅನ್ನು ಪ್ಯಾಕ್ ಮಾಡಿ ಮನೆಗೆ ತೆಗೆದುಕೊಂಡು ಹೋದ ವೇಳೆ ಬ್ಯಾಗ್ ನಲ್ಲಿ ಆಕಸ್ಮಿಕವಾಗಿ ಹಣ ಸಿಕ್ಕಿದೆ. ಆದ್ರೆ, ಸಾಲದ ಅವಶ್ಯಕತೆ ಇದ್ದರೂ, ಈ ಮಹಿಳೆ ಮಾತ್ರ ಅದನ್ನು ಹಿಂದಿರಿಗಿಸುವ ಕೆಲಸ ಮಾಡಿದ್ದಾರೆ.

ಜೊವಾನ್ನೆ ಆಲಿವರ್ ಜಾರ್ಜಿಯಾ (ಯುಎಸ್‌ಎ) ಮೂಲದವರು. ಮಧ್ಯಾಹ್ನದ ಊಟಕ್ಕೆ ಚಿಕನ್ ಸ್ಯಾಂಡ್ ವಿಚ್ ತಿನ್ನಲು ಆರಂಭಿಸಿದ ಮಹಿಳೆಗೆ ಫುಡ್​ ಪ್ಯಾಕ್​ ಮಾಡಿದ್ದ ಪ್ಯಾಕೆಟ್​ನಲ್ಲಿ ಸ್ಯಾಂಡ್ ವಿಚ್ ಅಡಿಯಲ್ಲಿದ್ದ ಲಕೋಟೆಯಲ್ಲಿ 43 ಸಾವಿರ ರೂ. ಸಿಕ್ಕಿದೆ. ಈ ಹಣವನ್ನು ನೋಡಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ.

ಡಬ್ಲ್ಯುಎಸ್‌ಬಿ ಟಿವಿ ಜೊತೆಗಿನ ಸಂವಾದದಲ್ಲಿ ಅವರು, ನಾನು ನೋಟುಗಳನ್ನು ಎಣಿಸಲು ಪ್ರಾರಂಭಿಸಿದೆ, ಒಟ್ಟು 43 ಸಾವಿರ ರೂ ಅದರಲ್ಲಿತ್ತು. ನಾನು ತಕ್ಷಣ ಅದನ್ನು ಮತ್ತೆ ಲಕೋಟೆಯಲ್ಲಿ ಹಾಕಿದೆ. ನಂತರ ಲಕೋಟೆಯನ್ನು ಮುಚ್ಚಿಟ್ಟೆ. ಅಷ್ಟರಲ್ಲಾಗಲೇ ಅಧಿಕಾರಿಗಳು ಕೂಡ ಅಲ್ಲಿಗೆ ಬಂದಿದ್ದರು ಎಂದಿದ್ದಾರೆ. ಅದೇ ಸಮಯದಲ್ಲಿ, ಜಾಕ್ಸನ್ ಪೋಲಿಸರ ತನಿಖೆಯಲ್ಲಿ ಕೆಎಫ್‌ಸಿಯ ಠೇವಣಿ ಮೊತ್ತವು ಆಕಸ್ಮಿಕವಾಗಿ ಜೊವಾನ್ನೆ ಅವರ ಬ್ಯಾಗ್‌ಗೆ ಹೋಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ಫೇಸ್‌ಬುಕ್‌ನಲ್ಲಿ ಜೋನ್‌ಗೆ ಧನ್ಯವಾದ ಹೇಳಿದ್ದು, ‘ಜೊವಾನ್ನೆ ಸರಿಯಾದ ಕೆಲಸವನ್ನು ಮಾಡಿದ್ದು ಮಾತ್ರವಲ್ಲ, ಮ್ಯಾನೇಜರ್‌ನ ಕೆಲಸವನ್ನು ಸಹ ಉಳಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯ ಪ್ರಾಮಾಣಿಕ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may also like

Leave a Comment