Home » Kolkata: ಆಹಾರ ನುಂಗಲು ಹೆಣಗಾಡುತ್ತಿದ್ದವನ ಅನ್ನನಾಳದಲ್ಲಿ 100ರ ಎರಡು ನೋಟ್ ಪತ್ತೆ!

Kolkata: ಆಹಾರ ನುಂಗಲು ಹೆಣಗಾಡುತ್ತಿದ್ದವನ ಅನ್ನನಾಳದಲ್ಲಿ 100ರ ಎರಡು ನೋಟ್ ಪತ್ತೆ!

by ಹೊಸಕನ್ನಡ
0 comments

Kolkata :ಒಂದು ತಿಂಗಳಿನಿಂದ ಆ ವ್ಯಕ್ತಿಯೊಬ್ಬ ಊಟ ಮಾಡಲು ಹೆಣಗಾಡುತ್ತಿದ್ದ. ಏನಾದರೂ ತಿಂದು, ಅದನ್ನು ನುಂಗುವಾಗ ತುಂಬಾ ಕಷ್ಟಪಡುತ್ತಿದ್ದ. ಯಾಕೆಂದರೆ ಗಂಟಲಲ್ಲಿ ವಿಪರೀತ ಕಾಡುವ ನೋವು. ಇದರೊಂದಿಗೆ ಆತನಿಗೆ ಹೊಟ್ಟೆಯಲ್ಲೂ ನೋವು. ಈ ಬೇನೆಯನ್ನು ತಾಳಲಾರದೆ ಕೊನೆಗಾತ ವೈದ್ಯರ ಮೊರೆಹೋಗಿದ್ದಾನೆ. ಹೀಗೆ ತನ್ನ ಬಳಿ ನೋವಿನ ಬಾದೆಯಿಂದ ಬಳಲುತ್ತ ಬಂದ ವ್ಯಕ್ತಿಯನ್ನು ಪರೀಶೀಲಿಸಿದ ವೈದ್ಯರಿಗೆ ದೊಡ್ಡ ಅಚ್ಚರಿ ಕಾದಿತ್ತು.

ಹೌದು, ವೈದ್ಯರು ಪರಿಶೀಲನೆ ಮಾಡಿದ ವ್ಯಕ್ತಿಯ ಅನ್ನನಾಳದಲ್ಲಿ 100ರೂಗಳ ಎರಡು ನೋಟುಗಳು ಪತ್ತೆಯಾಗಿವೆ. ಅಲ್ಲದೆ ಈ ರೋಗಿಯು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೋಲ್ಕತ್ತಾದ(kolkata) ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿ(Medical Collage) ನ ಆಸ್ಪತ್ರೆಯಲ್ಲಿ ಇಂಥದೊಂದು ಘಟನೆ ನಡೆದಿದೆ.

ಇದನ್ನು ಮನಗಂಡ ವೈದ್ಯರು ಕೂಡಲೇ ಆತನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಿದ್ದ 100 ಎರಡು ನೋಟುಗಳನ್ನು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದ ರೋಗಿ ಚೇತರಿಸಿಕೊಂಡಿದ್ದು, ಬಳಿಕ ವೈದ್ಯರು ಆತನನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೂ ಮೊದಲು ಆತನ ಮಾನಸಿಕ ಸಮಸ್ಯೆಯ ಕುರಿತು ತಪಾಸಣೆ ಮಾಡಿ ಆರೋಗ್ಯ ವೃದ್ಧಿಗೆ ಸಲಹೆ ಸೂಚನೆ ನೀಡಿದ್ದಾರೆ.

ಈ ಕುರಿತು ವೈದ್ಯರು ಮಾಹಿತಿ ನೀಡಿ, ರಾಟ್‌ ಟೂತ್ ಫೋರ್ಸ್ಪ್ ಬಳಸಿ ಎಂಡೋಸ್ಕೋಪಿಕ್ ಮೂಲಕ ಎರಡೂ ನೋಟುಗಳನ್ನು ಒಂದೊಂದಾಗಿ ಹೊಟ್ಟೆಯಿಂದ ತೆಗೆಯಲಾಗಿದೆ. ರೋಗಿಯು ಸ್ವಲ್ಪ ಮಾನಸಿಕವಾಗಿದ್ದಾನೆ. ಅಲ್ಲದೆ ಇದೀಗ ನೋವಿನಿಂ ನೋವಿನಿಂದ ಪಾರಾಗಿದ್ದಾನೆ ಎಂದು ಹೇಳಿದ್ದಾರೆ.

You may also like

Leave a Comment