4
ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಶರಣ್ಯ ಶಶಿ ಆ.09ರಂದು ಕೊನೆಯುಸಿರೆಳೆದಿದ್ದಾರೆ.
35 ವರ್ಷದ ನಟಿ ಶರಣ್ಯಗೆ 2012 ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. 11 ಮೇಜರ್ ಸರ್ಜರಿಗೆ ಒಳಗಾಗಿದ್ದ ಈ ನಟಿಗೆ ಕಳೆದ ಮೇ 23 ರಂದು ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡಿತ್ತು.
ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೋವಿಡ್ ವಿರುದ್ಧ ಸೆಣಸಿ ಗುಣಮುಖರಾಗಿ ಮನೆಗೆ ವಾಪಾಸ್ ಆಗಿದ್ದರು.
ಕಳೆದ ಕೆಲ ದಿನಗಳ ಹಿಂದೆ ಮತ್ತೆ ಅನಾರೋಗ್ಯದಿಂದ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.
