Home » ಹೊಟ್ಟೆ ನೋವಿಗೆ ಆಯುರ್ವೇದಿಕ್ ಸಲಹೆಗಳು

ಹೊಟ್ಟೆ ನೋವಿಗೆ ಆಯುರ್ವೇದಿಕ್ ಸಲಹೆಗಳು

0 comments

ಈಗಿನ ಜಂಕ್ ಫುಡ್ ಯುಗದಲ್ಲಿ ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ತಿನ್ನುತ್ತಾ ಹೊಟ್ಟೆ ನೋವು, ಉಬ್ಬರಿಸುವುದು, ಎದೆ ನೋವು, ಹುಳಿ ತೇಗು ಈ ರೀತಿಯ  ಅನೇಕ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯವಾಗಿದೆ. ಇದರಿಂದ ಇಡೀ ದಿನ ಹಾಳು ಆಗಿರುತ್ತದೆ. ಅದಕ್ಕಾಗಿ ಹಲವಾರು ವೈದ್ಯರ ಬಳಿ ಹೋಗುವುದು, ಬೇರೆ ಬೇರೆ ಪ್ರಯತ್ನಗಳನ್ನು ಮಾಡುತ್ತಾ ಇರುತ್ತಾರೆ. ನಿಮಗಾಗಿ ಈ ಆಯುರ್ವೇದಿಕ್ ಸಲಹೆಗಳು.

ಜೀರ್ಣ ಕ್ರಿಯೆಗೆ ಮುಖ್ಯ ಕಾರಣವಾಗುವ ಸೋಂಪು. ಈ ಸೋಂಪನ್ನ ಊಟ ಅಥವಾ ತಿಂಡಿ ಆದ ಮಾತ್ರ ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಊಟ ಆದ ನಂತರದಲ್ಲಿ ಬಾಯಲ್ಲಿ ಸ್ವಲ್ಪ ಸೋಂಪು ಕಾಳುಗಳನ್ನು ಹಾಕಿ ಜಗಿದರೆ ಉತ್ತಮ. ಏಕೆಂದರೆ ಇದು ಹೊಟ್ಟೆಯಲ್ಲಿ ಭಾರವಾದ ಆಹಾರದ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಬಿಸಿ ನೀರಿಗೆ ಹಾಕಿ ಕುಡಿಯಬಹುದು.

ಗ್ಯಾಸ್ಟ್ರಿಕ್ ಸಮಸ್ಯೆಗೆ ಮತ್ತು ಹೊಟ್ಟೆ ಉಬ್ಬರ ತೊಂದರೆಗೆ ಇದು ರಾಮಬಾಣ. ಮೊಸರಿನಿಂದ ಮಜ್ಜಿಗೆ ಮಾಡಿ ಅದಕ್ಕೆ ಸ್ವಲ್ಪ ಕಲ್ಲುಪ್ಪು ಮತ್ತು ಇಂಗು ಪೌಡರ್ ಹಾಕಿ ಊಟ ಆದ ನಂತರದಲ್ಲಿ ಕುಡಿಯುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಪಾರಾಗಬಹುದು. ಇದರ ಜೊತೆ ಸ್ವಲ್ಪ ಇಂಗು ಸೇರಿಸಿದರೆ ಇನ್ನು ಸೂಕ್ತ.

ಒಣ ಶುಂಠಿ
ಇದನ್ನು ಬಿಸಿ ಹಾಲು ಅಥವಾ ನೀರಿಗೆ ಹಾಕಿ ಸೇವಿಸಿದರೆ ಉತ್ತಮ. ಹಾಗೆಯೇ ಕಾಲಿ ಹೊಟ್ಟೆಯಲ್ಲಿ ಆಗಾಗ ಒಣ ಶುಂಠಿ ತಿನ್ನುತ್ತಾ ಇದ್ದಾರೆ ಹುಳಿ ತೀಗು ಕಡಿಮೆ ಆಗುತ್ತದೆ. ನಿಮ್ಮ ಜೀವನ ಶೈಲಿಯಲ್ಲಿ ಆಗುವ ಬದಲಾವಣೆ  ನಿಮಗೆ ತಿಳಿಯುತ್ತದೆ.

You may also like

Leave a Comment