Christina Ashten: ಹಾಲಿವುಡ್ ಮಾದಕ ನಟಿ, ಮಾಡೆಲ್ (Model) ಕಿಮ್ ಕರ್ದಾಶಿಯನ್ (Kim Kardashian) ನಿಮಗೆ ಗೊತ್ತಲ್ಲ. ತುಂಬಾ ಸುಂದರಿ ಮತ್ತು ಸೆಕ್ಸಿ ಎರಡನ್ನೂ ಹುಟ್ಟಿನಿಂದಲೇ ಪಡೆದು ಬಂದಿರುವ ಆಕೆಯನ್ನೇ ಹೋಲುವ ಇನ್ನೊಬ್ಬ ಹುಡುಗಿ ಇದ್ಲು. ಅವಳೇ ಕ್ರಿಸ್ಟೀನಾ ಆಸ್ಟೆನ್ (Christina Ashten ). ಕಿಂ ಜೊತೆ ಯಾವಾಗಲೂ ಹೋಲಿಕೆ ಮಾಡಲ್ಪಡುತ್ತಿದ್ದ ಮಾಡೆಲ್ ಕ್ರಿಸ್ಟೀನಾ ಆಸ್ಟೆನ್ (Christina Ashten ) ತನ್ನ 34 ನೇ ಚಿಕ್ಕ ವಯಸ್ಸಿಗೇ ಇಹಲೋಕ ತ್ಯಜಿಸಿದ್ದಾಳೆ. ಈಕೆಯ ಈ ಅಕಾಲಿಕ ಸಾವಿಗೆ ಕಾರಣ ಆಕೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್ ಸರ್ಜರಿಯೇ (Plastic Surgery) ಎನ್ನುವುದು ದೊಡ್ಡ ವಿಪರ್ಯಾಸ.
ಕ್ರಿಸ್ಟೀನಾ ಆಸ್ಟೆನ್ ಹಾಲಿವುಡ್ ನ ಖ್ಯಾತಿಯೆತ್ತ ಮಾಡೆಲ್ ಕಮ್ ಪೋರ್ನ್ ಸ್ಟಾರ್ ರೀತಿಯಲ್ಲಿ ಕಾಣುವುದಕ್ಕಾಗಿ ಆಕೆ ವಿಪರೀತ ಪ್ಲಾಸ್ಟಿಕ್ ಸರ್ಜರಿಗೆ ಮೊರೆ ಹೋಗಿದ್ದಳು ಎಂದು ಹೇಳಲಾಗುತ್ತಿದ್ದು, ಈಗ ಅದೇ ಆಕೆಯ ಜೀವಕ್ಕೆ ಮುಳುವಾಗಿದೆ.
ಕ್ರಿಸ್ಟೀನಾ ಆಸ್ಟೆನ್ ಕಿಮ್ ಕಾರ್ಡಶಿಯಾನ್ ಜೊತೆ ಹಲವಾರು ವೇದಿಕೆಗಳನ್ನು ಹಂಚಿಕೊಂಡಿದ್ದ ಕ್ರಿಸ್ಟೀನಾ ಥೇಟ್ ಕಿಮ್ ಕರ್ದಾಶಿಯನ್ ಡಿಟ್ಟೋ ಆಗಿ ಕಾಣಿಸಿಕೊಳ್ಳಬೇಕು ಮತ್ತು ಆಕೆಯ ಹಾಗೆಯೇ ಜನಪ್ರಿಯತೆ ಪಡ್ಕೊಬೇಕು ಅನ್ನೋ ಹಂಬಲ ಇತ್ತು. ಆಕೆಯನ್ನು ಹಲವರು ಜೂನಿಯರ್ ಕಿಂ ಅಂತ ಕರೆದಾಗ ಆಕೆಗೆ ಖುಷಿ ಆಗುತ್ತಿತ್ತು. ಈ ಪ್ರಚಾರದ ಆಸೆಯೇ ಆಕೆಯ ಜೀವವನ್ನು ಬಲಿ ಪಡೆದುಕೊಂಡಿದೆ.
ಕಿಮ್ ಕರ್ದಾಶಿಯನ್ ಮಾಡೆಲ್ ಆಗಿದ್ದಳು. ನಂತರ ಆಕೆ ಪೋರ್ನ್ ಸ್ಟಾರ್ ಆಗಿ ಬದಲಾದಳು. ಜತೆಗೆ ಹಾಲಿವುಡ್ ನಲ್ಲಿ ನಟಿ ಹಾಗೂ ಮಾಡೆಲ್. ತನ್ನ ಬೆತ್ತಲೆ ಬಿಸಿ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ. ಕೋಟ್ಯಂತರ ಅಭಿಮಾನಿಗಳು ಕಿಮ್ ಗೆ ಇದ್ದು, ಅದರಂತೆ ತಾನೂ ಅಷ್ಟೇ ಫೇಮಸ್ ಆಗಬೇಕು ಅಂದುಕೊಂಡಿದ್ದಳು ಕ್ರಿಸ್ಟೀನಾ. ಆದರೆ ಆಕೆಯ ವಿಪರೀತ ಸೌಂದರ್ಯದ ಹುಚ್ಚು ಆಕೆಗೆ ಮುಳುವಾಗಿದೆ. ದೇಹಕ್ಕೆ ವಿಪರೀತ ಕತ್ತರಿ ಪ್ರಯೋಗ ನಡೆಸಿದ ಕಾರಣ, ಆರೋಗ್ಯ ಕೆಟ್ಟು ಆಕೆ ಸಾವನ್ನಪ್ಪಿದ್ದಾಳೆ. ದೊಡ್ಡ ಕನಸಿನ ಚಿಕ್ಕಪ್ರಾಯದ ಹುಡುಗಿ ವಿನಾಕಾರಣ ಜೀವ ತೆತ್ತಿದ್ದಾಳೆ.
ದುರದೃಷ್ಟ ಅಂದರೆ ಮೃತ ಕ್ರಿಸ್ಟೀನಾ ಅಂತ್ಯಕ್ರಿಯೆ ಮಾಡಲು ಸಹ ಹಣವಿರಲಿಲ್ಲವಂತೆ. ಆಕೆಯ ಅಂತ್ಯಕ್ರಿಯೆಯನ್ನು ಗೌರವಹಿತವಾಗಿ ನಡೆಸಿಕೊಡಲು ಆಕೆಯ ಕುಟುಂಬವು ಸೋಷಿಯಲ್ ಮೀಡಿಯಾ ಮೂಲಕ ಫಂಡ್ ಸಂಗ್ರಹಿಸಲು ಅವರು ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ವರದಿ ಆಗಿದೆ.
