Home » ಆ್ಯಪಲ್ ವಾಚ್, ಫಿಟ್ ಬಿಟ್ ಆಯಿತು , ಇನ್ನು ಬಟ್ಟೆಯಿಂದಲೇ ತಿಳಿಯಲಿದೆ ಹೃದಯದ ಬಡಿತ !

ಆ್ಯಪಲ್ ವಾಚ್, ಫಿಟ್ ಬಿಟ್ ಆಯಿತು , ಇನ್ನು ಬಟ್ಟೆಯಿಂದಲೇ ತಿಳಿಯಲಿದೆ ಹೃದಯದ ಬಡಿತ !

0 comments

ಮನುಷ್ಯ ಸಾಮಾನ್ಯವಾಗಿ ತನ್ನ ಮಾನ ಮುಚ್ಚಲು ಬಟ್ಟೆಗಳನ್ನು ಧರಿಸುತ್ತಿದ್ದ ಕಾಲವೊಂದಿತ್ತು. ಆದರೆ ಕಾಲ ಬದಲಾದ ನಂತರ ಸೀಸನ್ ಗೆ ತಕ್ಕ ಹಾಗೇ ಬಟ್ಟೆ ಧರಿಸಲು ಪ್ರಾರಂಭವಾದವು.
ಆದರೆ, ಈಗ ಕೆಲವರು ಧರಿಸುವ ಬಟ್ಟೆಯೂ ಸ್ಟೇಟಸ್ ಸಿಂಬಲ್ ಆಗಿಬಿಟ್ಟಿದೆ. ಇದರ ಮುಂದುವರಿದ ಭಾಗವಾಗಿ, ಈಗ ಅದೇ ಉಡುಪಿನಲ್ಲಿ ನಾವು ನಮ್ಮ ಹೃದಯ ಬಡಿತವನ್ನು ಕೇಳಬಹುದು ಎಂದು ಸಂಶೋಧಕರ ತಂಡವೊಂದು ಹೇಳುತ್ತದೆ.

ಮಾನವನ ಕಿವಿಯ ಆರಿಕಲ್ ನಿಂದ ಸ್ಫೂರ್ತಿ ಪಡೆದು ಸಂಶೋಧಕರು ಈ ಉಡುಪನ್ನು ತಯಾರಿಸಿದ್ದಾರೆ. ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್ ಸಹಯೋಗದೊಂದಿಗೆ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಈ ಅಧ್ಯಯನವನ್ನು ನ್ಯಾಚುರಲ್ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.

ಇಲ್ಲಿಯವರೆಗೆ ನಾವು ಹೃದಯ ಬಡಿತವನ್ನು ಕಂಡುಹಿಡಿಯಲು
Fitbit ಅಥವಾ Apple Watch ಅನ್ನು ಬಳಕೆ ಮಾಡುತ್ತಿದ್ದೆವು. ಈಗ ಈ ಪಟ್ಟಿಗೆ ಮತ್ತೊಂದು ವಸ್ತು ಸೇರ್ಪಡೆಯಾಗಿದೆ. ಇದನ್ನು ಮ್ಯಾಸಚೂಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಂಡುಹಿಡಿದಿದೆ. ನಿಮ್ಮ ಹೃದಯ ಬಡಿತವನ್ನು ತಿಳಿಯಲು ನೀವು ಈ ಉಡುಪನ್ನು ಧರಿಸಿದರೆ ಸಾಕು. ಇದು ಮೈಕ್ರೋಫೋನ್ ಮತ್ತು ಸ್ಪೀಕರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಹೃದಯ ಬಡಿತವನ್ನು ಅಳೆಯುವ ಸಾಧನಗಳನ್ನು ಒಳಗೊಂಡಿದೆ. ಇದರ ಕೆಲಸ ನಿಜಕ್ಕೂ ಮೋಡಿಯೇ ಹೌದು. ಧ್ವನಿಯನ್ನು ಯಾಂತ್ರಿಕ ಕಂಪನಗಳಾಗಿ ಪರಿವರ್ತಿಸುವುದು. ಅಲ್ಲದೆ, ಇದು ಮೈಕ್ರೋಫೋನ್ ಕಾರ್ಯಗಳಂತೆಯೇ ಕಂಪನಗಳನ್ನು ವಿದ್ಯುತ್ ಸಂಕೇತ ಪರಿವರ್ತಿಸುತ್ತದೆ.

You may also like

Leave a Comment