Home » Health tips: ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ? ನೀವು ಒಂದ್ಸಲ ಟ್ರೈ ಮಾಡಿ ನೋಡಿ

Health tips: ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ? ನೀವು ಒಂದ್ಸಲ ಟ್ರೈ ಮಾಡಿ ನೋಡಿ

0 comments

Health tips: ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಎಷ್ಟೋ ಸಂಪ್ರದಾಯಗಳು ಕೇವಲ ಸಂಪ್ರದಾಯಗಳಾಗಿರುವುದಿಲ್ಲ ಅವು ಉತ್ತಮ ಆರೋಗ್ಯದ ಗುಟ್ಟಾಗಿರುತ್ತವೆ. ಕೇವಲ ಹಬ್ಬಗಳಲ್ಲಿ ಎಣ್ಣೆ ಹಚ್ಚಿ ಸ್ನಾನ ಮಾಡುವುದನ್ನು ನಾವು ಇಂದು ನೋಡಬಹುದು, ಆದರೆ ಪ್ರತಿ ಸ್ನಾನಕ್ಕೂ ಮುಂಚೆ ಎಣ್ಣೆ ಹಚ್ಚುವುದರಿಂದ ಒಂದಷ್ಟು ಉಪಯೋಗಗಳಿವೆ. ಅವುಗಳನ್ನು ತಿಳಿದುಕೊಳ್ಳೋಣ.

ಈ ರೀತಿಯಾಗಿ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ತ್ವಚೆಯು ಒಣಗದೆ ತೇವದಿಂದ ಕೂಡಿರುತ್ತದೆ. ಹಾಗೂ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದಾಗಿ ವಾತದ ಸಮಸ್ಯೆ, ಮೂಳೆಯಲ್ಲಿನ ನೋವುಗಳು ದೂರವಾಗುತ್ತದೆ.

ಇನ್ನು ಎಣ್ಣೆಯ ಮಸಾಜ್ ನಿಂದಾಗಿ ಒತ್ತಡ ಕಡಿಮೆಯಾಗಿ ನರಮಂಡಲಗಳಿಗೆ ಶಾಂತಿ ನೀಡುತ್ತದೆ. ಇನ್ನು ಇದರಿಂದಾಗಿ ರಕ್ತದ ಚಲನೆ ಸರಾಗವಾಗಿ ಆಗುವುದರ ಜೊತೆಗೆ ದೇಹದಿಂದ ಆಲಸ್ಯ ಹೊರಟುಹೋಗಿ ದೇಹದ ತೂಕವನ್ನು ಇಳಿಸಲು ಸಹಕಾರಿಯಾಗಿದೆ.

ಹಾಗೂ ದೇಹದಲ್ಲಿನ ಉಷ್ಣತೆಯ ಅಂಶಗಳು ಹೊರಟುಹೋಗುವ ಮೂಲಕ ವಿಶ್ರಾಂತಿ ಸಿಗುತ್ತದೆ. ಹಾಗೂ ದೇಹ ಶುದ್ಧತೆಯ ಜೊತೆಗೆ, ಕೂದಲು ಉದುರುವುದು ಕಡಿಮೆಯಾಗಿ ಕೂದಲು ಬಲವಾಗಲು ಸಹಕಾರಿಯಾಗುತ್ತದೆ.

ಮತ್ತು ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಉತ್ತಮ ನಿದ್ರೆಯು ಸಿಗುತ್ತದೆ.

ಇದನ್ನೂ ಓದಿ:Udupi: ಆನ್ಲೈನ್ ನಲ್ಲಿ ಅಡುಗೆ ಪದಾರ್ಥ ಕೊಳ್ಳಲು ಹೋಗಿ ಮೋಸ ಹೋದ ವ್ಯಕ್ತಿ

You may also like