Nose Hair : ಗಡ್ಡ, ಮೀಸೆ ಹಾಗೂ ತಲೆಕೂದಲನ್ನು ಬೋಳಿಸಿದಂತೆ ಮೂಗಲ್ಲಿರುವ ಕೂದಲನ್ನು ಕೂಡ ತೆಗೆಸುವುದು ಸಾಮಾನ್ಯ. ಆದರೆ ಮೂಗಲ್ಲಿ ಇರುವ ಕೂದಲನ್ನು ತೆಗೆಯಲು ಅದಕ್ಕೆ ಅದರದ್ದೆ ಆದ ವಿಧಾನಗಳಿವೆ. ಕೆಲವರು ಮೂಗು ಒಳಗಿರುವ ಕೂದಲು ಕಾಣಬಾರದೆಂದು ಕೈಯಿಂದ ಕಿತ್ತುಕೊಳ್ಳುವುದುಂಟು. ಆದರೆ ಇದು ಎಷ್ಟು ಡೇಂಜರ್ ಎಂಬುದು ಗೊತ್ತಾ? ನಿಮಗೆ ಮರವಿನ ಕಾಯಿಲೆಯೇ ಬರಬಹುದು.. ಹುಷಾರ್!!
ಹೌದು, ವಯಸ್ಸಾದಂತೆ ದೇಹದ ಉಳಿದ ಭಾಗದ ಕೂದಲುಗಳಂತೆಯೇ ಮೂಗಿನ ಒಳ ಭಾಗದಲ್ಲಿರುವ ಕೂದಲುಗಳು ಕೂಡ ಬೆಳ್ಳಗೆ ಆಗುತ್ತವೆ ಹಾಗೂ ಉದ್ದವಾಗಿ ಮೂಗಿನ ಕೆಳಭಾಗದಿಂದ ಹೊರಗೂ ಇಣುಕುತ್ತವೆ. ಇದು ನೋಡಲು ಅಸಹ್ಯವಾಗಿರುತ್ತದೆ ಎಂದು ಹೆಚ್ಚಿನವರು ಕೈಯಿಂದ ಹಾಕುವುದನ್ನು ಕಿತ್ತುಕೊಳ್ಳುತ್ತಾರೆ. ಆದರೆ ಅಧ್ಯಯನವೊಂದು ಮೂಗಿನ ಒಳೆಗಿನ ಕೂದಲನ್ನು ಎಳೆದು ತೆಗೆಯುವುದರಿಂದ ನೆನಪಿನ ಶಕ್ತಿ ಕಡಿಮೆ ಆಗುವ ಸಮಸ್ಯೆ ಕಾಡಬಹುದು ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಯಸ್, 2022 ರಲ್ಲಿ ಪ್ರಕಟವಾದ ಒಂದು ಅಧ್ಯಯನವು ಮೂಗಿನ ಒಳೆಗಿನ ಕೂದಲನ್ನು ಎಳೆದು ತೆಗೆಯುವುದನ್ನು ಬುದ್ಧಿಮಾಂದ್ಯತೆಗೆ (ನಿರ್ದಿ ಷ್ಟವಾಗಿ ಆಲ್ಝೈಮರ್) ಸಂಬಂಧಿಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ನೀವು ಪ್ರತಿದಿನ ನಿಮ್ಮ ಬೆರಳುಗಳಿಂದ ನಿಮ್ಮ ಮೂಗನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ, ಅದು ಅಭ್ಯಾಸವಾಗುತ್ತದೆ, ಇದು ಮೂಗಿನ ರಕ್ತಸ್ರಾವ, ಸೋಂಕು ಗಳು, ಅಂಗಾಂಶ ಹಾನಿ ಮತ್ತು ಆಲ್ಝೈಮರ್ ಕಾಯಿಲೆಯಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಮೂಗಿನ ಕೂದಲು ತೆಗೆಯುವುದು ಮೂಗಿನ ಲೋಳೆಪೊರೆಯನ್ನು ಹಾನಿ ಗೊಳಿಸುತ್ತದೆ, ಬ್ಯಾಕ್ಟೀರಿಯಾವು ಘ್ರಾಣ ನರವನ್ನು ತಲುಪಲು ಮತ್ತು ಮೆದುಳಿಗೆ ಪ್ರವೇಶಿಸಲು ಸುಲಭವಾಗುತ್ತದೆ. ಮೂಗಿನೊಳಗಿನ ತೆಳುವಾದ ಒಳಪದರಕ್ಕೆ ಹಾನಿಯಾಗುವುದರಿಂದ ಬ್ಯಾಕ್ಟೀರಿಯಾ ಗಳು ಮೆದುಳನ್ನು ತಲುಪಲು ಸುಲಭವಾಗುತ್ತದೆ. ಹೀಗಾಗಿ ಮೂಗಲ್ಲಿರುವ ಕೂದಲನ್ನು ಕಿತ್ತುಕೊಂಡರೆ ಮೆದುಳಿಗೆ ಹಾನಿಯಾಗಿ ಮರವಿನ ಕಾಯಿಲೆ ಬರುವುದಂತೂ ಖಂಡಿತ ಎಂದು ಸಂಶೋಧಕರು ತಿಳಿಸಿದ್ದಾರೆ.
