Pitta Headache: ಮಾನವನ ದೇಹದಲ್ಲಗೋ ಪ್ರತಿಯೊಂದು ವ್ಯತ್ಯಾಸಕ್ಕೂ ಖಾಯಿಲೆಗೂ ಒಂದೊಂದು ಮನೆಮದ್ದುಗಳಿವೆ. ಈಗಿನವರು ಥಟ್ ಅನ್ನೋ ಪರಿಹಾರಕ್ಕಾಗಿ ಇಂಗ್ಲೀಷ್ ಮೆಡಿಸಿನ್ ಬಳಿ ಹೋಗುತ್ತಾರೆ, ಆದರೆ ಎಲ್ಲದಕ್ಕೂ ರಾಮಬಾಣ ಆಯುರ್ವೇದ ಹಾಗೂ ಹಿಂದಿನಿಂದ ನಡೆದು ಬಂದ ಆಹಾರ ಪದ್ಧತಿಯಾಗಿದೆ.
ಪಿತ್ತಕ್ಕೂ ಕೂಡ ಕೆಲವು ಆಹಾರಗಳು ರಾಮಬಾಣವಾಗಿದ್ದು, ಅವು ಹೀಗಿವೆ: ಇಲ್ಲಿ ಕೇವಲ ಒಂದೇ ವಿಧಕ್ಕೆ ಹೊಂದಿಕೊಳ್ಳದೆ ಕಹಿ ಸಿಹಿ ಸೇರಿದಂತೆ ಸಂಕೋಚಕ ಆಹಾರವು ಬಹು ಮುಖ್ಯ ಪಾತ್ರ ವಹಿಸುತ್ತೆ.
ಆಗಾಗ ಊಟ ಮಾಡುವ ಜೊತೆಗೆ ನೈಸರ್ಗಿಕ ಸಿಹಿಯಾದ ಖರ್ಜೂರ, ಬೆಲ್ಲದ ಸೇವನೆ ಸಹಕಾರಿಯಾಗಿದ್ದು, ತಂಪು ಪದಾರ್ಥಗಳಾದ ಕಲ್ಲಂಗಡಿ,ಸೌತೆಕಾಯಿ ತರಹದ ಹಸಿರು ಆಹಾರ ಪಿತ್ತದ ತೀವ್ರತೆ ಕುಂದಿಸಿ, ದೇಹದಲ್ಲಿನ ಉಷ್ಣತೆಯನ್ನು ಕಡಿಮೆಯಾಗಿಸುತ್ತದೆ. ಅಡುಗೆಯಲ್ಲಿ ಅರಸಿನ, ಕೊತ್ತಂಬರಿ, ಜೀರಿಗೆ ಸೇರಿಸುವುವು ಹಾಗೂ ಸೇಬು, ಒಣ ದ್ರಾಕ್ಷಿ ಹಾಲು ತುಪ್ಪವು ಕೂಡ ಇಲ್ಲಿ ಸಹಾಯ ಮಾಡುತ್ತದೆ.
ಅಲೋವೆರ ಹಾಗೂ ಪುದಿನ ಟೀ ದೇಹವನ್ನು ತಂಪಾಗಿಸಲು ಸಹಾಯಕವಾದರೆ, ಹಸುವಿನ ತುಪ್ಪ ದೇಹದ ಉಷ್ಣತೆಯನ್ನು ಕಡಿಮೆಯಾಗಿಸುವ ಮೂಲಕ ಪಿತ್ತವನ್ನು ತೊಲಗಿಸಲು ಸಹಕಾರಿ. ಜೊತೆಗೆ ತೆಂಗಿನ ಎಣ್ಣೆ ಇಂದ ನೆತ್ತಿಗೆ ಮಸಾಜ್ ಮಾಡಿದರೆ ಮತ್ತು ಶ್ರೀ ಗಂಧದ ಪೇಸ್ಟ್ ಅನ್ನು ಹಣೆಗೆ ಹಚ್ಚುವುದರಿಂದಲೂ ಪಿತ್ತ ನಿವಾರಣೆಯಾಗುತ್ತದೆ.
