Hair Care: ಮಕ್ಕಳಿಂದ ಹಿಡಿದು ವೃದ್ದರ ತನಕ ಅನೇಕ ಮಂದಿಗೆ ಕೂದಲು ಉದುರುವ ಸಮಸ್ಯೆ ಇರುವವರಿಗೆ ಇಲ್ಲಿದೆ ಸುಲಭ ಉಪಾಯ. ಹೌದು, ಗಂಡು-ಹೆಣ್ಣು, ಸಣ್ಣವರು, ದೊಡ್ಡವರು ಎನ್ನುವ ಬೇಧ ಭಾವ ಇಲ್ಲದೆ ಎಲ್ಲರಲ್ಲಿಯೂ ಕೂಡ ಕಂಡುಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಕೂದಲಿನ ಸಮಸ್ಯೆಗೆ ದುಬಾರಿ ಖರ್ಚು ಮಾಡುವ ಬದಲು, ಕೆಲವೊಂದು ಮನೆಮದ್ದುಗಳ ಸಹಾಯದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಹೌದು, ಅದಕ್ಕಾಗಿ ನೀವು ಕರಿಬೇವಿನ ಎಲೆಗಳ ಮೂಲಕ ಕೂದಲ ಆರೈಕೆ (Hair Care) ಮಾಡಬೇಕು. ಹೌದು, ಆಯುರ್ವೇದ ತಜ್ಞರ ಪ್ರಕಾರ, ಕೂದಲಿಗೆ ಕರಿಬೇವಿನ ಎಲೆಗಳ ಸರಿಯಾದ ಬಳಕೆಯು ತುಂಬಾ ಪರಿಣಾಮಕಾರಿ ಎಂದು ತಿಳಿಸುತ್ತದೆ.
ಅಂತೆಯೇ ಕಳೆದ 45 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಯುರ್ವೇದ ವೈದ್ಯ ಭುವನೇಶ್ ಪಾಂಡೆ ಅವರು ಕರಿಬೇವಿನ ಸೊಪ್ಪಿನಿಂದ ಟೋನರ್, ಎಣ್ಣೆ ಮತ್ತು ಪೇಸ್ಟ್ ತಯಾರಿಸಿ ಕೂದಲಿಗೆ ಬಳಸಬಹುದು ಎಂದು ಹೇಳುತ್ತಾರೆ.
ಅದಕ್ಕಾಗಿ ನೀವು ಕರಿಬೇವಿನ ಎಲೆಗಳಿಂದ ಟೋನರ್ ತಯಾರಿಸಲು, ಮೊದಲು ಎಲೆಗಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ. ನಂತರ ಎಲೆಗಳನ್ನು ಸ್ವಲ್ಪ ನೀರಿನೊಂದಿಗೆ ಬೇಯಿಸಿ ಮತ್ತು ಅದರ ರಸವನ್ನು ಸಂಪೂರ್ಣವಾಗಿ ಹೊರತೆಗೆಯಿರಿ. ರಸ ಹೊರತೆಗೆಯುವಾಗ ಬೆಂಕಿ ಉರಿ ಕಡಿಮೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಎಲೆಗಳಿಂದ ಸಾರವನ್ನು ಹೊರತೆಗೆದ ನಂತರ, ಅದನ್ನು ಸಂಪೂರ್ಣವಾಗಿ ಫಿಲ್ಟರ್ ಮಾಡಿ ಮತ್ತು ನಂತರ ಅದನ್ನು ಬಾಟಲಿಯಲ್ಲಿ ತುಂಬಿಸಿ ಮತ್ತು ಕೂದಲಿಗೆ ಟೋನರ್ ಆಗಿ ಬಳಸಿ.
ಇನ್ನು ಕರಿಬೇವಿನ ಎಲೆಗಳಿಂದ ಎಣ್ಣೆಯನ್ನು ತಯಾರಿಸಲು, ಸಾಸಿವೆ ಮತ್ತು ತೆಂಗಿನ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಬೆಂಕಿಯಲ್ಲಿ ಇರಿಸಿ. ಎಣ್ಣೆ ಬಿಸಿಯಾಗಲು ಪ್ರಾರಂಭಿಸಿದಾಗ, ಅದಕ್ಕೆ ಕರಿಬೇವಿನ ಸೊಪ್ಪು ಮತ್ತು ಮೆಂತ್ಯವನ್ನು ಸೇರಿಸಿ. ಸ್ವಲ್ಪ ಸಮಯ ಚೆನ್ನಾಗಿ ಬೇಯಿಸಿದ ನಂತರ, ಎಲೆಗಳ ಸಾರವು ಎಣ್ಣೆಯೊಂದಿಗೆ ಚೆನ್ನಾಗಿ ಬೆರೆತು ಎಲೆಗಳು ಒಡೆಯಲು ಪ್ರಾರಂಭಿಸಿದಾಗ, ನಂತರ ಎಣ್ಣೆಯನ್ನು ಚೆನ್ನಾಗಿ ಫಿಲ್ಟರ್ ಮಾಡಿ ಮತ್ತು ಬಾಟಲ್‌ನಲ್ಲಿ ತುಂಬಿಸಿಡಿ.
ಕರಿಬೇವು ಪೇಸ್ಟ್ ತಯಾರಿಸಲು, ಎಣ್ಣೆಯಲ್ಲಿ ಬೇಯಿಸಿದ ಎಲೆಗಳು ಮತ್ತು ಮೆಂತ್ಯವನ್ನು ಗ್ರೈಂಡರ್ನಲ್ಲಿ ಹಾಕಿ ಮತ್ತು ಇದಕ್ಕೆ ಸ್ವಲ್ಪ ಮೊಸರು ಸೇರಿಸಿ ಚೆನ್ನಾಗಿ ರುಬ್ಬಿದ ನಂತರ, ಕೂದಲಿಗೆ ಔಷಧೀಯ ಕರಿಬೇವಿನ ಎಲೆಗಳ ಪೇಸ್ಟ್ ಸಿದ್ಧವಾಗಿರುತ್ತದೆ. ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಬಹುದಾಗಿದೆ.
