Home » Boiled Lemon Water : ಈ ಸಮಯದಲ್ಲಿ ನೀವು ಕುದಿಸಿದ ನಿಂಬೆ ನೀರು ಕುಡಿದರೆ ಅತಿ ಉತ್ತಮ

Boiled Lemon Water : ಈ ಸಮಯದಲ್ಲಿ ನೀವು ಕುದಿಸಿದ ನಿಂಬೆ ನೀರು ಕುಡಿದರೆ ಅತಿ ಉತ್ತಮ

0 comments

ಎಲ್ಲರ ಮನೆಯಲ್ಲೂ ನಿಂಬೆ ಹಣ್ಣು ಇದ್ದೇ ಇದೆ. ಇದರ ಪ್ರಯೋಜನ ಹಲವಾರು. ಆರೋಗ್ಯದಿಂದ ಹಿಡಿದು ಮೊಂಡುತನದ ಕಲೆಗಳವರೆಗೆ, ನಿಂಬೆ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲ ಜನರ ಜೀವನ ಶೈಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಸೇವಿಸುವ ಅಭ್ಯಾಸ ಕಂಡು ಬರುತ್ತಿದೆ. ಪ್ರತಿಯೊಬ್ಬರಿಗೂ ನಿಂಬೆಯ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಒಂದು ಸಣ್ಣ ನಿಂಬೆ ಭಾರಿ ಸಮಸ್ಯೆಯನ್ನೇ ಪರಿಹರಿಸುತ್ತದೆ ಎಂದರೆ ತಪ್ಪಾಗಲಾರದು.

ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಸತ್ವಗಳು ಅಗಾಧವಾಗಿದೆ. ಇದೇ ಕಾರಣದಿಂದ ಬಹುತೇಕರ ಮನೆಯಲ್ಲಿ ನಿಂಬೆ ಸದಾ ಇರುತ್ತದೆ. ಆದರೆ ನಿಮಗೆ ಗೊತ್ತೇ? ನಿಂಬೆ ಹಣ್ಣನ್ನು ಕುದಿಸಿ ಅದರ ನೀರನ್ನು ಕುಡಿದರೆ ಅದ್ಭುತ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.

ಹೌದು, ಸಂಶೋಧಕರು ಹೇಳುವ ಪ್ರಕಾರ ನಿಂಬೆಯ ನಿಜವಾದ ಸಾರ ಅಥವಾ ಪೌಷ್ಟಿಕ ಸತ್ವಗಳು ಅಡಗಿರುವುದು ಅದರ ಸಿಪ್ಪೆ ಮತ್ತು ತೊಳೆಗಳಲ್ಲಿ. ಆತುರಾತುರವಾಗಿ ಅಲ್ಪ ಸ್ವಲ್ಪ ಹಿಂಡಿ ನಿಜವಾದ ನಿಂಬೆ ಸತ್ವವನ್ನೇ ನಾವು ಮನೆಯಿಂದ ಆಚೆಗೆ ಬಿಸಾಡುತ್ತಿದ್ದೇವೆ. ಕುದಿಸಿದ ನಿಂಬೆ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ರೋಗನಿರೋಧಕ ಶಕ್ತಿ ಹೆಚ್ಚಿಸಲು ಉತ್ತಮ ಔಷಧ. ಏಕೆಂದರೆ ಇದರಲ್ಲಿರುವ ವಿಟಮಿನ್ ಸಿ ದೇಹವನ್ನು ನಿರ್ವಿಷಗೊಳಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕರೋನಾದ ಹೊಸ ರೂಪಾಂತರಗಳನ್ನು ತಪ್ಪಿಸಲು, ನೀವು ಮನೆಯೊಳಗೆ ಇದ್ದುಕೊಂಡು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಕುದಿಸಿದ ನಿಂಬೆ ನೀರು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ವೈರಲ್ ಸೋಂಕಿನ ವಿರುದ್ಧ ಹೋರಾಡಲು ಇದು ಪರಿಣಾಮಕಾರಿಯಾಗಿದೆ.

ಅಲ್ಲದೇ, ಬೇಯಿಸಿದ ನಿಂಬೆ ನೀರನ್ನು ಕುಡಿಯುವುದು ನಿಮ್ಮ ತೂಕವನ್ನು ಇಳಿಕೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ನಿಂಬೆ ನೀರನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ದೇಹದ ಕೊಬ್ಬು ತ್ವರಿತವಾಗಿ ಕರಗಲಾರಂಭಿಸುತ್ತದೆ ಮತ್ತು ದೇಹವು ನಿರ್ಜಲಿಕರಣದಿಂದ ಕೂಡಲೇ ಹೊರಬರುತ್ತದೆ. ಇದಲ್ಲದೇ ಕುದಿಸಿದ ನಿಂಬೆ ನೀರಿನ ಸೇವನೆಯು ಬಿಪಿಯನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ಇಷ್ಟೆಲ್ಲಾ ಆರೋಗ್ಯ ಪ್ರಯೋಜನವಾಗಿರುವ ನಿಂಬೆ ನೀರನ್ನು ಮಾಡಲು, ಮೊದಲಿಗೆ ಎಲ್ಲಾ ನಿಂಬೆ ಹಣ್ಣುಗಳನ್ನು ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಈಗ ಶುಚಿಯಾದ ನಿಂಬೆ ಹಣ್ಣುಗಳನ್ನು ಅರ್ಧಕ್ಕೆ ಹೋಳುಗಳನ್ನಾಗಿ ಮಾಡಿ. ಒಲೆಯ ಮೇಲೆ ಒಂದು ಸ್ಟೀಲ್ ಪಾತ್ರೆಯಲ್ಲಿ ನೀರನ್ನು ಸ್ವಲ್ಪ ಸಮಯದ ಕಾಲ ಕುದಿಸಿ. ಕುದಿಯುತ್ತಿರುವ ನೀರಿಗೆ ನಿಂಬೆ ಹಣ್ಣಿನ ಹೋಳುಗಳನ್ನು ಹಾಕಿ ಸುಮಾರು 5 ರಿಂದ 6 ನಿಮಿಷಗಳ ಕಾಲ ಮತ್ತೊಮ್ಮೆ ಕುದಿಸಿ. ಈಗ ಗ್ಯಾಸ್ ಸ್ಟವ್ ಆರಿಸಿ ನಿಂಬೆಯ ನೀರನ್ನು ಸ್ವಲ್ಪ ಹೊತ್ತಿನ ತನಕ ತಣ್ಣಗಾಗಲು ಬಿಡಿ.

ಉಗುರು ಬೆಚ್ಚಗಿರುವ ಮಟ್ಟಿಗೆ ನೀರು ಆರಿದ ತನಕ ನಿಂಬೆ ಹಣ್ಣುಗಳನ್ನು ಚೆನ್ನಾಗಿ ಹಿಂಡಿ ನೀರಿನಿಂದ ಬೇರ್ಪಡಿಸಿ. 1 ಕಪ್ ತೆಗೆದುಕೊಂಡು ಅದಕ್ಕೆ ಈ ನೀರನ್ನು ಸೋಸಿಕೊಳ್ಳಿ. ಮಿಕ್ಕ ನೀರನ್ನು ಮತ್ತೊಮ್ಮೆ ಬಳಸಲು ಎತ್ತಿಡಿ. ಉಗುರು ಬೆಚ್ಚಗಿನ ನಿಂಬೆ ರಸಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿ ಚೆನ್ನಾಗಿ ಕದಡಿ ನಂತರ ಕುಡಿಯಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಮ್ಮ ಮುಖದ ಮೇಲಿನ ನಸುಕಂದು ಮಚ್ಚೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ನಿಂಬೆ ನೀರು ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ಗುಣಪಡಿಸುತ್ತದೆ.

You may also like

Leave a Comment