Home » Dengue: ಗಮನಿಸಿ, ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ! ಪೋಷಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಗೈಡ್‌ಲೈನ್ಸ್‌ ಬಿಡುಗಡೆ!!!

Dengue: ಗಮನಿಸಿ, ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ! ಪೋಷಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಗೈಡ್‌ಲೈನ್ಸ್‌ ಬಿಡುಗಡೆ!!!

by Mallika
2 comments
Dengue

Dengue: ಕಳೆದ ಒಂದು ತಿಂಗಳಿನಿಂದ ಬೆಂಗಳೂರು ನಗರದಲ್ಲಿ ಗರಿಷ್ಠ ಡೆಂಗ್ಯೂ( Dengue) ದಾಖಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿಯೇ ಹೆಚ್ಚು ಕೇಸ್‌ಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಂತೂ ಡೆಂಗ್ಯೂ ಪ್ರಕರಣ ದಾಖಲೆ ಮಟ್ಟದಲ್ಲಿ ದಾಖಲಾಗಿವೆ. ಇದು ಮತ್ತೆ ಕೊರೊನಾ ವೈರಸ್‌ನಂತರ ಪರಿಸ್ಥಿತಿ ಉಂಟು ಮಾಡುತ್ತದೆಯೇ ಎಂಬ ಭೀತಿ ಉಂಟಾಗಿದೆ. ನಗರದಲ್ಲಿ ಕಳೆದ 17 ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಅಂದರೆ 3,018 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಕೇರಳದಲ್ಲಿ ನಿಫಾ ಕಾಟ ಹೆಚ್ಚಾಗಿದೆ. ಇತ್ತ ಅಸ್ಸಾಂ, ಒಡಿಶಾ, ರಾಜಸ್ಥಾ, ತಮಿಳಿನಾಡಿನ ಕೆಲ ಭಾಗದಲ್ಲಿ ಸ್ಕ್ರಬ್‌ ಟೈಫಸ್‌ ಹಾವಳಿ ಶುರುವಾಗಿದೆ. ಇನ್ನು ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ ಹೆಚ್ಚಿದೆ. ಹಾಗಾಗಿ ಆರೋಗ್ಯ ಇಲಾಖೆ ಮಕ್ಕಳ ಆರೋಗ್ಯದ ಬಗ್ಗೆ ಕೇರ್‌ ತೆಗೆದುಕೊಳ್ಳಲು ಮನವಿ ಮಾಡಿದೆ. ಹಾಗಾಗಿ ಪೋಷಕರಿಗೆ ಕೆಲವೊಂದು ಗೈಡ್‌ಲೈನ್ಸ್‌ ಪಾಲಿಸಲು ಸೂಚಿಸಲಾಗಿದೆ. ಅದ್ಯಾವುದೆಂದು ಈ ಕೆಳಗೆ ನೀಡಲಾಗಿದೆ.

ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಇದ್ದರೆ ಶಾಲೆಗೆ ಕಳುಹಿಸಬೇಡಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಸೊಳ್ಳೆ ಕಾಟದಿಂದ ಮಕ್ಕಳನ್ನು ದೂರ ಇಡಲು ಸಲಹೆ ನೀಡಿದೆ.
ಕೈ ಕಾಲು ಮುಚ್ಚುವಂತ ಬಟ್ಟೆ ಧರಿಸಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಎಂದು ಸೂಚಿಸಲಾಗಿದೆ.
ಲೋಶನ್‌ ಕ್ರೀಮ್‌ಗಳನ್ನು ಕೈ ಕಾಲುಗಳ ಭಾಗಕ್ಕೆ ಬಳಕೆ ಮಾಡುವಂತೆ ಹೇಳಲಾಗಿದೆ.
ಸಣ್ಣ ಜ್ವರ ಕಾಣಿಸಿದರೂ ನಿರ್ಲಕ್ಷ್ಯವಹಿಸದಂತೆ ಪೋಷಕರಿಗೆ ಎಚ್ಚರಿಕೆಯಿಂದ ಇರಲು ತಿಳಿಸಿದೆ.
ಡೆಂಗ್ಯೂ ಶಾಕ್‌ಗೆ ಮಕ್ಕಳು ಹೋಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.
ಹಾಗೆನೇ ಇತರ ವೈರಸ್‌ಗಳ ಬಗ್ಗೆ ಕೂಡಾ ಜಾಗೃತಿವಹಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ಆಧ್ಯಾತ್ಮಿಕ ಚಿಂತನೆ ಹೆಚ್ಚಳ! ಪ್ರಮುಖ ವ್ಯಕ್ತಿಗಳ ಸಂಪರ್ಕದಿಂದ ಮನಸ್ಸು ಉಲ್ಲಾಸ!!!

You may also like

Leave a Comment