Heart Attack: ಜನನ ಮರಣಗಳ ಸಂಖ್ಯೆ ಕೆಲವು ದಿನ ಅತಿ ಹೆಚ್ಚು ಅಥವಾ ಅತಿ ಕಡಿಮೆ ಇರುವ ಮಾಹಿತಿಯನ್ನು ನೀವು ಕೇಳಿರಬಹುದು. ಅಂತೆಯೇ ಒಂದು ಅಧ್ಯಯನದ ಪ್ರಕಾರ, ಜನರು ವಾರದ ಉಳಿದ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು (Heart Attack) ಅನುಭವಿಸುವ ಸಾಧ್ಯತೆಯಿದೆ.
ಈಗಾಗಲೇ ಬೆಲ್‌ಫಾಸ್ಟ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ಟ್ರಸ್ಟ್ ಮತ್ತು ಐರ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ವೈದ್ಯರು ಈ ಅಧ್ಯಯನವನ್ನು ಮಾಡಿದ್ದು, ಸದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ(BCS) ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗಿದೆ.
ಈ ಫಲಿತಾಂಶ ಉದ್ದೇಶಕ್ಕಾಗಿ 20,000 ಕ್ಕೂ ಹೆಚ್ಚು ರೋಗಿಗಳನ್ನು ಅಧ್ಯಯನ ಮಾಡಲಾಗಿದ್ದು, ಸೋಮವಾರ ಹೃದಯಾಘಾತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವ ಸಾಧ್ಯತೆ ಇದೆ ಕಂಡುಬಂದಿದೆ.
ಅಧ್ಯಯನದಲ್ಲಿ ಸೋಮವಾರ ಕೆಲಸದ ಆರಂಭದ ದಿನವಾಗಿದೆ ಈ ಒತ್ತಡದಿಂದ ಸೋಮವಾರದಂದು ಹೆಚ್ಚಿನ ಪ್ರಮಾಣದಲ್ಲಿ ಗಂಭೀರ ಹೃದಯಾಘಾತ ಸಂಭವಿಸುವ ಸಾಧ್ಯತೆ ಅಧಿಕ ಎಂದು ಅಧ್ಯಯನ ತಿಳಿಸಿದೆ.
ಮುಖ್ಯವಾಗಿ ಕೊರೋನರಿ ಆರ್ಟಿಲರಿ ಸಂಪೂರ್ಣವಾಗಿ ಬ್ಲಾಕ್ ಆದ ಸಂದರ್ಭದಲ್ಲಿ ಇದು ಉಂಟಾಗುತ್ತದೆ. ಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಸ್ಕುಲಾರ್ ಸೊಸೈಟಿ ಸಮ್ಮೇಳನದಲ್ಲಿ ಅಧ್ಯಯನದ ವರದಿ ಮಂಡಿಸಲಾಗಿದ್ದು, ಕೆಲಸದ ವಾರದಲ್ಲಿ ಆರಂಭದ ದಿನ ಅಂದರೆ ಸೋಮವಾರ ಎಸ್.ಟಿ. -ಸೆಪ್ಟೆಂಟ್ ಎಲಿವೇಶನ್ ಮಯೋಕಾರ್ಡಿಯಲ್ ಇನ್ ಫ್ರಾಕ್ಷನ್ ಹೃದಯಘಾತದ ದರ ಹೆಚ್ಚಾಗಿದೆ ಎಂದು ಗೊತ್ತಾಗಿದೆ. ಭಾನುವಾರ ಕೂಡ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.
ಈಗಾಗಲೇ 2013 ರಿಂದ 2018ರ ನಡುವೆ ಐರ್ಲೆಂಡ್ ನಲ್ಲಿ ಗಂಭೀರ ರೀತಿಯ ಹೃದಯಾಘಾತಕ್ಕೆ ಒಳಗಾದ 10,528 ರೋಗಿಗಳ ದತ್ತಾಂಶಗಳ ವಿಶ್ಲೇಷಣೆ ನಡೆಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ.
ಹೃದಯಾಘಾತ ಎಂದರೆ ವೈದ್ಯಕೀಯ ಅತಿ ತುರ್ತು ಪರಿಸ್ಥಿತಿಯಾಗಿದೆ ಹಾಗೂ ಕ್ಷಣವನ್ನೂ ವಿಳಂಬ ಮಾಡದೇ ರೋಗಿಯನ್ನು ಆಸ್ಪತ್ರೆಗೆ ಅಥವಾ ವೈದ್ಯರ ಬಳಿ ಕರೆದೊಯ್ಯಬೇಕಾದ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಹೃದಯಾಘಾತವಾಗಿ ಸಾವು ಎದುರಾಗುವ ಮೊದಲು ದೇಹ ಹಲವಾರು ಸೂಚನೆಗಳನ್ನು ನೀಡುತ್ತದೆ ಹಾಗೂ ವೈದ್ಯರು ಈ ಸೂಚನೆಗಳಿಂದ ಹೃದಯಾಘಾತದ ಇತರ ಮಾಹಿತಿಗಳನ್ನು ಪಡೆಯುತ್ತಾರೆ.
ಬೆಲ್ ಫಾಸ್ಟ್ ಹೆಲ್ತ್ ಅಂಡ್ ಸೋಷಲ್ ಕೇರ್ ಟ್ರಸ್ಟ್ ಅಂಡ್ ರಾಯಲ್ ಕಾಲೇಜ್ ಆಫ್ ಸರ್ಜನ್ ಸಂಶೋಧಕರು ವಿಕೃತ ಅಧ್ಯಯನ ಕೈಗೊಂಡಿದ್ದು, ಎಸ್.ಟಿ. ಎಲಿವೇಶನ್ ಮಯೋಕಾರ್ಡಿಯಲ್ ಇನ್ ಫ್ರಾಕ್ಷನ್ ಎಂದು ವೈದ್ಯಕೀಯ ವಲಯದಲ್ಲಿ ಇದು ಪರಿಚಿತವಾಗಿದೆ. ಮಯೋಕಾರ್ಡಿಯಲ್ ಇನ್ ಫ್ರಾಕ್ಷನ್ ಅಂದರೆ ವಿಪರೀತ ಮಾನಸಿಕ ಒತ್ತಡಕ್ಕೆ ಒಳಗಾದಾಗ ಹೃದಯದ ಸ್ನಾಯುಗಳಿಗೇ ಬೇಕಾದ ರಕ್ತವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಹೋಗುವ ಮೂಲಕ ಹೃದಯಾಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚುವುದಾಗಿದೆ.
