Home » Tulsi water: ʼಗಿಡಮೂಲಿಕೆಗಳ ರಾಣಿʼ ತುಳಸಿಯನ್ನು ನೀರಿನಲ್ಲಿ ಹಾಕಿ ಕುಡಿಯಿರಿ, ಈ ಆರೋಗ್ಯ ಸಮಸ್ಯೆ ದೂರ ಮಾಡಿ!

Tulsi water: ʼಗಿಡಮೂಲಿಕೆಗಳ ರಾಣಿʼ ತುಳಸಿಯನ್ನು ನೀರಿನಲ್ಲಿ ಹಾಕಿ ಕುಡಿಯಿರಿ, ಈ ಆರೋಗ್ಯ ಸಮಸ್ಯೆ ದೂರ ಮಾಡಿ!

by Mallika
0 comments
Tulsi water

Tulsi water: ತುಳಸಿ ಗಿಡವನ್ನು ಪವಿತ್ರ ಗಿಡವೆಂದು ಪರಿಗಣಿಸಲಾಗುತ್ತದೆ. ಎಲ್ಲರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಆಯುರ್ವೇದ, ಆಧ್ಯಾತ್ಮಿಕವಾಗಿಯೂ ತುಳಸಿಗೆ ವಿಶೇಸ ಸ್ಥಾನವಿದೆ. ತುಳಸಿ ಗಿಡವನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಯ (Tulsi water) ಕುರಿತು ಇಲ್ಲಿದೆ ಮಾಹಿತಿ.

ನೀವು ಪ್ರತಿನಿತ್ಯ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕುಡಿದರೆ ಹಲವಾರು ಆರೋಗ್ಯ ಪ್ರಯೋಜನವನ್ನು ಪಡೆಯುತ್ತೀರಿ. ವಿಟಮಿನ್‌ ಎ, ವಿಟಮಿನ್‌ ಡಿ, ಐರನ್‌, ಫೈಬರ್‌, ಅಲ್ಸೋಲಿಕ್‌ ಆಸಿಡ್‌, ಯುಜೆನಾಲ್‌ ಮುಂತಾದ ಪೋಷಕಾಂಶಗಳು ತುಳಸಿಯಲ್ಲಿ ಅಡಕವಾಗಿದೆ.

ತುಳಸಿ ಎಲೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬಾಯಿಯ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತುಳಸಿ ನೀರಿನಿಂದ ಯಾವಾಗಲೂ ಬಾಯಿ ಮುಕ್ಕಳಿಸಿದರೆ ಒಸಡುಗಳು ಆರೋಗ್ಯವಾಗಿರುವುದರ ಜೊತೆಗೆ ದುರ್ವಾಸನೆ ಕಡಿಮೆ ಮಾಡುತ್ತದೆ. ತುಳಸಿ ಎಲೆಗಳನ್ನು ನೀರಿಗೆ ಹಾಕಿ ಕುಡಿದರೆ ದೇಹದ ಒತ್ತಡ ಕಡಿಮೆಯಾಗುವುದರ ಜೊತೆಗೆ ಉತ್ತಮ ಜೀರ್ಣಕ್ರಿಯೆ ನಿಮಗೆ ಲಭಿಸುತ್ತದೆ.

ಎಲ್ಲರಿಗೂ ಗೊತ್ತಿರುವ ಹಾಗೆ ತುಳಸಿಯನ್ನು ಕೆಮ್ಮು, ಶೀತ ಮತ್ತು ಅಸ್ತಮಾದಂತಹ ಉಸಿರಾಟ ಸಮಸ್ಯೆಗಳನ್ನು ಕಡಿಮೆ ಮಾಡಲು ಉಪಯೋಗಿಸಲಾಗುತ್ತದೆ. ಕಫ, ಉರಿಯೂತ, ಶೀತ ಇವುಗಳನ್ನು ಬುಡಸಮೇತ ತೆಗೆದುಹಾಕುತ್ತದೆ.

ಇವೆಲ್ಲ ಸಾಮಾನ್ಯ ಮಾಹಿತಿಯಾಗಿದ್ದು, ಇವುಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನೀವುಗಳು ತಜ್ಞ ವೈದ್ಯರನ್ನು ಸಂಪರ್ಕಿಸುವುದು ಒಳಿತು

ಇದನ್ನೂ ಓದಿ: Rain Alert: ಎಚ್ಚರ, ಕರಾವಳಿಗರೇ, ಮತ್ತೆ ಅಬ್ಬರಿಸಲಿದ್ದಾನೆ ವರುಣ! ಯೆಲ್ಲೋ ಅಲರ್ಟ್‌ ಘೋಷಣೆ, ಈ ದಿನದಿಂದ!

You may also like