Home » Diabetes: ಇದೊಂದು ಎಲೆಯನ್ನು ಬೆಳಗ್ಗೆ ಕುದಿಸಿ ಕುಡಿಯಿರಿ ಸಾಕು- ಸಂಜೆ ಯೊಳಗೆ ಶುಗರ್ ನಿಯಂತ್ರಣಕ್ಕೆ ಬರುತ್ತೆ !!

Diabetes: ಇದೊಂದು ಎಲೆಯನ್ನು ಬೆಳಗ್ಗೆ ಕುದಿಸಿ ಕುಡಿಯಿರಿ ಸಾಕು- ಸಂಜೆ ಯೊಳಗೆ ಶುಗರ್ ನಿಯಂತ್ರಣಕ್ಕೆ ಬರುತ್ತೆ !!

0 comments
Diabetes

Diabetes: ಸಕ್ಕರೆ ಕಾಯಿಲೆ ಇಂದು ಜನರಿಗೆ ಒಂದು ದೊಡ್ಡ ತಲೆನೋವಾಗಿದೆ. ಏಕೆಂದರೆ ಇದು ಒಮ್ಮೆ ಬಂದರೆ ಹೋಗುವ ಕಾಯಿಲೆ ಅಲ್ಲ. ಹಾಗಾಗಿ ಇದು ಹೆಚ್ಚು ಕಡಿಮೆ ಆಗದಂತೆ ನಿಯಂತ್ರಣ ಮಾಡಿಕೊಳ್ಳುವುದು ಮಧುಮೇಹ ಇರುವ ವ್ಯಕ್ತಿಯ ಪ್ರತಿದಿನದ ಕೆಲಸ ಆಗಿಬಿಡುತ್ತದೆ. ಈ ಮಧುಮೇಹದಿಂದ ಮುಕ್ತಿ ಹೊಂದಲು ಅನೇಕರು ಹಲವಾರು ವಿಧಾನ ಅನುಸರಿಸುತ್ತಾರೆ. ಅಂತೆಯೇ ಈ ಪರಿಹಾರಗಳಲ್ಲಿ ಪಲಾವ್ ಎಲೆ ಕೂಡಾ ಸೇರಿದೆ. ಮಧುಮೇಹದ(Diabetes)ನಿಯಂತ್ರಣದಲ್ಲಿ ಪಲಾವ್ ಎಲೆ ಮುಖ್ಯ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: Dharmasthala: ಧರ್ಮಸ್ಥಳ ಭಕ್ತಾದಿಗಳಿಗೊಂದು ಮಹತ್ವದ ಎಚ್ಚರಿಕೆ !!

ಹೌದು, ನಮ್ಮ ಲೋಕಲ್ ಭಾಷೆಯಲ್ಲಿ ಪಲಾವ್ ಎಲೆಗಳು ಎಂದು ಕರೆಯಲ್ಪಡುವ ಬೇ ಲೀಫ್ ಅಥವಾ ಬೇ ಎಲೆಗಳನ್ನು, ಹೆಚ್ಚಾಗಿ ರೈಸ್ ಬಾತ್ ಮಾಡುವಾಗ, ಉದಾಹರಣೆಗೆ ರೈಸ್ ಬಾತ್‌ಗಳಾದ ಪಲಾವ್, ಟೊಮೆಟೊ ಬಾತ್ ಮತ್ತು ಇತರ ರೈಸ್ ಐಟಂಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಹೆಚ್ಚಾಗಿ ನಾವು ತಯಾರು ಮಾಡುವ ತಿಂಡಿಯ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುವ ಈ ಎಲೆಗಳು, ನಮಗೆ ಗೊತ್ತೇ ಆಗದ ರೀತಿಯಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಅಂತೆಯೇ ಪಲಾವ್ ಎಲೆ ಶುಗರ್ ನಿಯಂತ್ರಿಸಲು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಮಧುಮೇಹದಲ್ಲಿ ಪಲಾವ್ ಎಲೆಯನ್ನು ಸೇವಿಸುವುದು ಹೇಗೆ? :

ಮಧುಮೇಹವನ್ನು ನಿಯಂತ್ರಿಸಲು, ಪಲಾವ್ ಎಲೆಯ ನೀರನ್ನು ಸೇವಿಸಬಹುದು. ಇದಕ್ಕಾಗಿ, ಬಾಣಲೆಯಲ್ಲಿ ಒಂದು ಲೋಟ ನೀರನ್ನು ಬಿಸಿ ಮಾಡಿ. ಈ ನೀರಿಗೆ 2-3 ಪಲಾವ್ ಎಲೆಗಳನ್ನು ಸೇರಿಸಿ ಸುಮಾರು 5 ನಿಮಿಷಗಳ ಕಾಲ ಕುದಿಸಿ. ನಂತರ, ಅದನ್ನು ಫಿಲ್ಟರ್ ಮಾಡಿ ಉಗುರುಬೆಚ್ಚಗಿರುವಾಗಲೇ ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

You may also like

Leave a Comment