Beauty tips: ಕೂದಲು ಉದುರುವಿಕೆ ಹಲವರ ಬಹುದೊಡ್ಡ ಸಮಸ್ಯೆ. ಆಹಾರ ಪದ್ಧತಿಯ ವ್ಯತ್ಯಾಸ, ಸುತ್ತಮುತ್ತಲಿನ ಮಾಲಿನ್ಯ, ಸರಿಯಾದ ಜೀವನ ಶೈಲಿಯನ್ನು ಪಾಲಿಸದೆ ಇರುವುದು ಹೀಗೆ ನಾನಾ ಕಾರಣಗಳಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ಮೊದಲು ವಯಸ್ಸಾದ ಬಳಿಕ ಕೂದಲು ಉದುರಿದರೆ ಇಂದು ಹರೆಯದ ಪ್ರಾಯದಲ್ಲೇ ಕೂದಲು ಉದುರಿ ಅನೇಕರಿಗೆ ಇರಿಸು ಮುರುಸು ಉಂಟು ಮಾಡುತ್ತಿದೆ.
ಇಷ್ಟೇ ಅಲ್ಲದೆ ಇಂದು ಮಾರುಕಟ್ಟೆಗಳಲ್ಲಿ ಸಿಗುವಂತಹ ಅನೇಕ ರಾಸಾಯನಿಕ ಮಿಶ್ರಿತ ಮದ್ದುಗಳನ್ನು ಬಳಸಿ ಇಂದಿನ ಜನಾಂಗದವರು ತಮ್ಮ ಕೂದಲನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದೆಲ್ಲದಕ್ಕೂ ಒಂದು ಪರಿಹಾರವನ್ನು ನಾವು ಹೇಳುತ್ತಿದ್ದೇವೆ. ಕೊಬ್ಬರಿ ಎಣ್ಣೆಗೆ ಇದೊಂದು ವಸ್ತುವನ್ನು ನೀವು ಹಾಕಿ ಹಚ್ಚಿದರೆ ಕೂದಲು ಉದುರುವಿಕೆ ಕಡಿಮೆಯಾಗಿ ಅತಿ ವೇಗವಾಗಿ ಕೂದಲು ಉದ್ದವಾಗಿ ಬೆಳೆಯುತ್ತೆ. ಅದುವೇ ಕರಿಬೇವು.
ಹೌದು, ಕರಿಬೇವನ್ನು ನೀವು ಕೊಬ್ಬರಿ ಎಣ್ಣೆಗೆ ಬೆರೆಸಿ ಹಚ್ಚಿದರೆ ಆದಷ್ಟು ಬೇಗ ನಿಮ್ಮ ತಲೆಗೆ ಓದಲು ಉದ್ದವಾಗಿ ಬೆಳೆಯುತ್ತೆ. ಕೊಬ್ಬರಿ ಎಣ್ಣೆ, ಕರಿಬೇವು ಎರಡೂ ಕೂದಲಿಗೆ ತುಂಬಾ ಒಳ್ಳೆಯದು. ಕೊಬ್ಬರಿ ಎಣ್ಣೆ ಕೂದಲಿಗೆ ಪೋಷಣೆ, ತೇವಾಂಶವನ್ನು ನೀಡುತ್ತದೆ. ಜೊತೆಗೆ ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಕರಿಬೇವು ಅಕಾಲಿಕ ಬಿಳಿ ಕೂದಲು, ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಸಮಸ್ಯೆಗಳಿಂದಲೂ ಪರಿಹಾರವನ್ನು ನೀಡುತ್ತದೆ. ಕರಿಬೇವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಉದ್ದವಾಗಿ, ಕಪ್ಪಾಗಿ, ದಟ್ಟವಾಗಿ ಬೆಳೆಯುತ್ತದೆ.
