Jamun Fruit: ಅತಿಯಾದರೆ ಅಮೃವು ವಿಷವಾಗಿ ಪರಿಣಾಮ ಬೀರುತ್ತೆ ಅನ್ನೋ ಮಾತು ಯಾವಾಗಲು ನೆನಪಿರಲಿ. ಅಂತೆಯೇ ನೇರಳೆ ಹಣ್ಣು ಅತಿಯಾಗಿ ತಿಂದರೆ ಕೆಲವು ಆರೋಗ್ಯ ಸಮಸ್ಯೆಗಳೂ ಸಹ ಎದುರಾಗುತ್ತವೆ. ಜೊತೆಗೆ ಕೆಲವು ಪದಾರ್ಥಗಳ ಜೊತೆಗೆ ನೇರಳೆ ಹಣ್ಣು (Jamun Fruit) ಸೇರಿಸಿ ತಿನ್ನಬಾರದು ಎಂದು ತಜ್ಞರು ತಿಳಿಸಿದ್ದಾರೆ.
ಹೌದು, ನೇರಳೆ ಹಣ್ಣು ಜೊತೆಗೆ ಕೆಲವು ಆಹಾರವನು ಖಂಡಿತಾ ಸೇವಿಸಬಾರದು. ಅವುಗಳು ಯಾವುದೆಂದರೆ ಅರಿಶಿನ. ಹೌದು, ಅರಿಶಿನವು ಉರಿಯೂತದ ಗುಣಲಕ್ಷಣ ಹೊಂದಿದ್ದು, ಉರಿಯೂತ ತೆಗೆದು ಹಾಕಲು ಸಹಾಯ ಮಾಡುತ್ತದೆ. ಆದರೆ ನೇರಳೆ ಹಣ್ಣು ತಿಂದ ಕೂಡಲೇ ಅರಿಶಿನ ಮಿಶ್ರಿತ ಆಹಾರ ತಿನ್ನಬಾರದು.
ನೇರಳೆ ಹಣ್ಣು ತಿಂದ ಕೂಡಲೇ ಹಾಲು ಒಟ್ಟಿಗೆ ಸೇವಿಸಬೇಡಿ. ನೇರಳೆ ಹಣ್ಣು ಜೊತೆ ಹಾಲು ಕುಡಿಯುವುದು ದೇಹಕ್ಕೆ ದೊಡ್ಡ ಹಾನಿ ಉಂಟು ಮಾಡಬಹುದು. ಅವುಗಳನ್ನು ಒಟ್ಟಿಗೆ ಅಥವಾ ಒಂದೇ ಸಮಯದಲ್ಲಿ ತಿಂದರೆ ಇದು ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ.
ಇನ್ನು ಉಪ್ಪಿನಕಾಯಿ ಮತ್ತು ನೇರಳೆ ಇವೆರಡರ ಸಂಯೋಜನೆ ವಿಷದ ಪರಿಣಾಮಕ್ಕೆ ಕಾರಣವಾಗುತ್ತದೆ. ಹುಳಿ ಮತ್ತು ಆಮ್ಲೀಯತೆ ಉಂಟಾಗುತ್ತದೆ. ಅತಿಸಾರ, ಅಜೀರ್ಣ, ಗ್ಯಾಸ್, ಹೊಟ್ಟೆ ನೋವು ಉಂಟಾಗಬಹುದು.
ಅದಲ್ಲದೆ ಖಾಲಿ ಹೊಟ್ಟೆಯಲ್ಲಿ ನೇರಳೆ ಹಣ್ಣು ತಿನ್ನಬೇಡಿ. ಇದು ಹೊಟ್ಟೆ ನೋವು, ಗ್ಯಾಸ್, ಅಸಿಡಿಟಿ ಮತ್ತು ಅತಿಸಾರ ಹೆಚ್ಚಿಸುತ್ತದೆ. ನೇರಳೆ ಹಣ್ಣು ಮಧ್ಯಾಹ್ನ ಅಥವಾ ಸಂಜೆ ಮಾತ್ರ ತಿನ್ನಬೇಕು. ಇಲ್ಲದಿದ್ದರೆ ದೇಹದ ಕಿಬ್ಬೊಟ್ಟೆಯ ಕುಳಿ, ಆಹಾರ ಪೈಪ್, ಕುತ್ತಿಗೆಗೆ ಹಾನಿ ಮಾಡುತ್ತದೆ. ಹೊಟ್ಟೆಯ ಆಮ್ಲವನ್ನು ಹೆಚ್ಚಿಸುತ್ತದೆ.
ಮುಖ್ಯವಾಗಿ ನೇರಳೆ ಹಣ್ಣು ವಿಟಮಿನ್ ಎ ಮತ್ತು ಸಿ ಯ ಉತ್ತಮ ಮೂಲವಾಗಿದೆ. ಈ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ನೇರಳೆ ಹಣ್ಣನ್ನು ತಿನ್ನಲು ಸೂಕ್ತ ಸಮಯ ಮಧ್ಯಾಹ್ನ ಅಥವಾ ಸಂಜೆಯ ಸಮಯ. ಈ ಸಮಯದಲ್ಲಿ ಈ ನೇರಳೆ ಹಣ್ಣನ್ನು ನೀವು ಸೇವನೆ ಮಾಡಬಹದು. ಹಣ್ಣು ತಿನ್ನುವ ಮುನ್ನ ಸರಿಯಾಗಿ ತೊಳೆಯಿರಿ. ಅಲ್ಲದೇ ನೇರಳೆ ಹಣ್ಣನ್ನು ತಿಂದ ನಂತರ ಅದರ ಬೀಜಗಳನ್ನು ಬಿಸಾಡಬೇಡಿ. ಬದಲಿಗೆ ಅದನ್ನು ಒಣಗಿಸಿ ಪೌಡರ್ ಮಾಡಿ ಕೂದಲಿಗೆ ಹೇರ್ ಮಾಸ್ಕ್ ರೀತಿಯಲ್ಲಿ ಬಳಸಬಹುದು. ಇದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ.
CM ಆಗುತ್ತಿದ್ದಂತೆ YSRCP ಪಕ್ಷದ ಕಛೇರಿಯನ್ನು ಧ್ವಂಸ ಮಾಡಿದ ಚಂದ್ರಬಾಬು ನಾಯ್ಡು !!
