KPME: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಸೇರಿ ಇನ್ನು ಮುಂದೆ ಖಾಸಗಿ ಆಸ್ಪತ್ರೆ ಎಂಪಾನೆಲ್ (ನೋಂದಣಿ) ಮಾಡುವಾಗ ಅಥವಾ ನವೀಕರಿಸುವಾಗ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ)ಯಿಂದ ಮಾನ್ಯತೆ ಹೊಂದಿರುವ ಪ್ರಮಾಣಪತ್ರ ಪರಿಗಣಿಸುವುದು ಕಡ್ಡಾಯವೆಂದು ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಆದೇಶದಲ್ಲಿ ಅಸ್ತಿತ್ವದಲ್ಲಿರುವ ಆರೋಗ್ಯ ಯೋಜನೆಯಾದ “ಆರೋಗ್ಯ ಕರ್ನಾಟಕ ಮತ್ತು ಭಾರತ ಸರ್ಕಾರದ ಆರೋಗ್ಯ ಯೋಜನೆ “ಆಯುಷ್ಮಾನ್ ಭಾರತ್’ ಅನು ಸಂಯೋಜಿಸುವ ಮೂಲಕ ಕರ್ನಾಟಕದ ಎಲ್ಲಾ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಆಯುಷ್ಕಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಒದಗಿಸಲು ಅನುಮೋದನೆಯನ್ನು ನೀಡಿ ಆದೇಶಿಸಲಾಗಿದೆ.
ಮುಂದುವರೆದು, ಇದೇ ಆದೇಶದ ಅನುಬಂಧ-6 ರಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳನ್ನು ಎಂಪ್ಯಾನಲ್ ಮಾಡಲು ಮಾನದಂಡಗಳನ್ನು ತಿಳಿಸಲಾಗಿರುತ್ತದೆ.ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಮಾರ್ಗಸೂಚಿಗಳಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳನ್ನು ಎಂಪ್ಯಾನಲ್ ಮತ್ತು ಡಿ – ಎಂಪ್ಯಾನಲ್ ಮಾಡುವಾಗೆ ಪಾಲಿಸಬೇಕಾದ ಮಾನದಂಡಗಳ ಕುರಿತು ತಿಳಿಸಲಾಗಿರುತ್ತದೆ.
ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ಏಕ-ಕಡತದಲ್ಲಿ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ (Fire Safety Certificate) ಗಾಗಿ ಅರ್ಜಿ ಸಲ್ಲಿಸಿದ್ದರೂ ಅದನ್ನು ಪಡೆಯದ ಖಾಸಗಿ ಆಸ್ಪತ್ರೆಗಳ ಎಂಪನೆಲ್ಮೆಂಟ್ ಅನು SAST ಅಡಿಯಲ್ಲಿ ಎರಡು ತಿಂಗಳುಗಳ ಅವಧಿಗೆ ವಿಸ್ತರಿಸಲು ಅನುಮೋದನೆ ಕೋರಿರುತ್ತಾರೆ. ಈ ಬಗ್ಗೆ ಪರಿಶೀಲಿಸಿ ಮೂಲಸೌಕರ್ಯ ಅನುಸರಣೆ, ಪರವಾನಗಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ” ಅಗ್ನಿ ಸುರಕ್ಷತಾ ಪ್ರಮಾಣಪತ್ರ ಮುಂತಾದ ಸುರಕ್ಷತಾ ಅನುಮತಿಗಳಂತಹ ಆಸ್ಪತ್ರೆಯ ಕಾರ್ಯಾಚರಣೆಗೆ ಅಗತ್ಯವಾದ ಎಲ್ಲಾ ಕಡ್ಡಾಯ ಶಾಸನಬದ್ದ ದಾಖಲೆಗಳು ಮತ್ತು ಇತರ ಸುರಕ್ಷತಾ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನಂತರವೇ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು (ಕೆ. ಪಿ. ಎಂ. ಇ) ನೋಂದಣಿಯನ್ನು ನೀಡುವುದರಿಂದ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟೆರಡಿಯಲ್ಲಿ ಹೊಸ ಆಸ್ಪತ್ರೆಗಳನ್ನು ಎಂಪ್ಯಾನಲ್ ಮಾಡುವಾಗ ಅಥವಾ ಎಂಪ್ಯಾನಲೆಂಟ್ ನವೀಕರಿಸುವಾಗ ಕೆ.ಪಿ.ಎಂ.ಇ ಯಿಂದ ಮಾನತೆ ಹೊಂದಿರುವ ನೋಂದಣಿ ಪ್ರಮಾಣಪತ್ರವನ್ನು ಪರಿಗಣಿಸುವುದು ತಾರ್ಕಿಕ, ಪರಿಣಾಮಕಾರಿ ಮತ್ತು ಪಾರದರ್ಶಕ ವಿಧಾನವಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಹೀಗೆ ಕೆ.ಪಿ.ಎಂ.ಇ ಮಾನ್ಯತೆ ಹೊಂದಿರುವ ನೋಂದಣಿ ಪ್ರಮಾಣ ಪತ್ರವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಡಿ ಹೊಸ ಆಸ್ಪತ್ರೆಗಳನ್ನು ಎಂಪ್ಯಾನಲ್ ಮಾಡುವಾಗ ಅಥವಾ ಎಂಪಾನಲ್ಮೆಂಟ್ ನೋಂದಣಿಯನ್ನು ನವೀಕರಿಸುವಾಗ ಕಡ್ಡಾಯಗೊಳಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಲಾಗಿರುತ್ತದೆ.
ಸದರಿ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಸ್ ಅಡಿಯಲ್ಲಿ ಹೊಸ ಆಸ್ಪತ್ರೆಗಳನ್ನು ಎಂಪನೇಲ್ ಮಾಡುವಾಗ ಅಥವಾ ಅಸ್ತಿತ್ವದಲ್ಲಿರುವ ಎಂಪ್ಯಾನೆಲ್ಮೆಂಟ್ಗಳನ್ನು ನವೀಕರಿಸುವಾಗ, ಕೆಪಿಎಂಇ ಯಿಂದ ಮಾನತೆ ಹೊಂದಿರುವ ನೋಂದಣಿ ಪ್ರಮಾಣಪತ್ರವನ್ನು ಶಾಸನಬದ್ಧ ಅವಶ್ಯಕತೆಗಳ ಅನುಸರಣೆಯ ಪುರಾವೆಯಾಗಿ ಪರಿಗಣಿಸಬಹುದಾಗಿದ್ದು, ಇದರಿಂದಾಗಿ ಕಾನೂನುಬದ್ದವಾಗಿ ನಡೆಯುತ್ತಿರುವ ಆಸ್ಪತ್ರೆಗಳನ್ನು ಮಾತ್ರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ ನ ಜಾಲದಲ್ಲಿ (Network) ಸೇರಿಸುವುದನ್ನು ಖಾತ್ರಿಪಡಿಸುತ್ತದೆ. ಇದು ಪರಿಶೀಲನೆಯ ಪುನರಾವರ್ತನೆಯನ್ನು ಕಡಿಮೆ ಮಾಡುತ್ತದೆ ಮತ್ತು ಎಂಪ್ಯಾನಲ್ಮೆಂಟ್ಪ್ರಕ್ರಿಯೆಯನ್ನು ಸರಳೀಕರಣಗೊಳಿಸುತ್ತದೆ. ಈ ಪ್ರಕ್ರಿಯೆಯು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಕರ್ನಾಟಕದ ನಾಗರಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಸರ್ಕಾರದ ವಿಶಾಲ ಗುರಿಯನ್ನು ಸಹ ಪ್ರೋತ್ಸಾಹಿಸುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ SAST ಅಡಿಯಲ್ಲಿ ಹೊಸ ಆಸ್ಪತ್ರೆಗಳನ್ನು ಎಂಪ್ಯಾನೆಲ್ ಮಾಡುವಾಗ ಅಥವಾ ಎಂಪ್ಯಾನೆಲ್ಲೆಂಟ್ ನವೀಕರಿಸುವಾಗ KPME ಯಿಂದ ಮಾನ್ಯತೆ ಹೊಂದಿರುವ ನೋಂದಣಿ ಪ್ರಮಾಣಪತ್ರವನ್ನು ಪರಿಗಣಿಸುವುದನ್ನು ಕಡ್ಡಾಯಗೊಳಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯೂ ಸೇರಿದಂತೆ ಇನ್ನುಮುಂದೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ (SAST) ಅಡಿಯಲ್ಲಿ ಹೊಸ ಆಸ್ಪತ್ರೆಗಳನ್ನು ಎಂಪ್ಯಾನೆಲ್ ಮಾಡುವಾಗ ಅಥವಾ ‘ಎಂಪ್ಯಾನೆಲ್ಲೆಂಟ್ ನವೀಕರಿಸುವಾರ ಕೆ.ಪಿ.ಎಂ.ಇ. (KPME ಯಿಂದ ಮಾನ್ಯತೆ ಹೊಂದಿರುವ ನೋಂದಣಿ ಪ್ರಮಾಣ ಪತ್ರವನ್ನು ಕಡ್ಡಾಯ ಪರಿಗಣಿಸತಕ್ಕದ್ದು.(KPME) ಯಿಂದ ಮಾನ್ಯತೆ ಹೊಂದಿರದ ಆಸ್ಪತ್ರೆ, ಎಂಪ್ಯಾನೆಲ್ಗೊಳಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಜರುಗಿಸತಕ್ಕದ್ದು.
