Cooking Oil: ಆಹಾರ ತಯಾರಿಕೆಯಲ್ಲಿ ಎಣ್ಣೆಗಳ (Cooking Oil) ಪಾತ್ರ ಮಹತ್ತರವಾದುದ್ದು. ಎಣ್ಣೆಯನ್ನು ಬಳಸದೆಯೇ ರುಚಿಕರವಾದ ಅಡುಗೆ ತಯಾರಿಸಲು ಸಾಧ್ಯವಿಲ್ಲ. ಹಿತ-ಮಿತವಾಗಿ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಫಲವನ್ನು ನೀಡುವುದು. ಅದೇ ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು.
ಅಂದಹಾಗೆ, ಒಮ್ಮೆ ಬಳಕೆ ಮಾಡಿದ ಅಡುಗೆ ಎಣ್ಣೆಯನ್ನು ಮತ್ತೊಮ್ಮೆ ಬಿಸಿ ಮಾಡಿ ಅಥವಾ ಕುದಿಸಿ ಮರು ಬಳಕೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಏನಾದರೂ ತೊಂದರೆ ಉಂಟಾಗುವುದೇ ಎಂಬ
ಪ್ರಶ್ನೆ ಹಲವರಿಗಿದೆ. ಒಂದು ಸಲ ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸ್ಬೋದಾ ?! ಯಪ್ಪಾ.. ಇದೆಷ್ಟು ಡೇಂಜರ್ ಗೊತ್ತಾ?
ತೈಲವನ್ನು ಮರುಬಳಕೆ ಮಾಡುವುದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ? ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಬಹುದೇ ಎಂಬ ಪ್ರಶ್ನೆಗೆ ತಜ್ಞರು ಹೌದು ಎನ್ನುತ್ತಾರೆ. ಎಣ್ಣೆಯು ಕೊಬ್ಬನ್ನು ಹೊಂದಿರುತ್ತದೆ. ಅದು ಬಿಸಿಯಾದಾಗ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಮತ್ತೆ ಮತ್ತೆ ಎಣ್ಣೆ ಬಳಸಬಾರದು. ಮೂರ ರಿಂದ ನಾಲ್ಕು ಬಾರಿ ಬಳಕೆ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ, ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಸಿಮಾಡಲಾಗುತ್ತದೆ. ಹಾಗೆ ಕಾಯಿಸಿದಾಗ ಮಾತ್ರ ಎಣ್ಣೆ ಆರೋಗ್ಯಕ್ಕೆ ಹಾನಿಕರ. ಆ ಎಣ್ಣೆಯನ್ನು ಮತ್ತೆ ಬಳಸುವುದು ಒಳ್ಳೆಯದಲ್ಲ. ಅದೇ ಮನೆಯಲ್ಲಿ ಎಣ್ಣೆಯನ್ನು ಕಡಿಮೆ ದರದಲ್ಲಿ ಬಿಸಿಮಾಡಲಾಗುತ್ತದೆ. ಹಾಗಾಗಿ ತೈಲವನ್ನು ಮತ್ತೆ ಮತ್ತೆ ಬಳಸಬಹುದು ಎನ್ನಲಾಗಿದೆ. ಮನೆಯಲ್ಲಿ ನೀವು ಪೂರಿ, ಬಜ್ಜಿ, ಪಕೋಡ ಮಾಡಿದ ಎಣ್ಣೆಯನ್ನು ಮೂರರಿಂದ ನಾಲ್ಕು ಬಾರಿ ಮರುಬಳಕೆ ಮಾಡಬಹುದು.
ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದಲ್ಲಿ ವ್ಯತ್ಯಾಸವಾಗುವುದರ ಜೊತೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಬರುತ್ತದೆ. ಎಣ್ಣೆಯನ್ನು ಪುನಃ ಬಳಸುವುದರಿಂದ ಉರಿಯೂತ, ಸಂಧಿವಾತ, ಹೃದಯ ಸಮಸ್ಯೆ, ರಕ್ತದಲ್ಲಿ ಅಶುದ್ಧತೆ, ಬೊಜ್ಜು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅಲ್ಲದೆ, ಪಿತ್ತಜನಕಾಂಗದ ಕಾಯಿಲೆ, ಮಧುಮೇಹ, ಬೊಜ್ಜುಗಳಂತಹ ಸಮಸ್ಯೆ ಉದ್ಭವವಾಗುತ್ತವೆ.
