Home » Tomato: ಅತ್ಯಧಿಕ ದರ ಹೊಂದಿರೋ ಕೆಂಪುಸುಂದರಿ ಟೊಮೇಟೊ ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುತ್ತಾ? ಸತ್ಯಾಸತ್ಯತೆ ಏನು?

Tomato: ಅತ್ಯಧಿಕ ದರ ಹೊಂದಿರೋ ಕೆಂಪುಸುಂದರಿ ಟೊಮೇಟೊ ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುತ್ತಾ? ಸತ್ಯಾಸತ್ಯತೆ ಏನು?

0 comments
Tomato

Tomato: ಬಹುತೇಕ ಎಲ್ಲಾ ತರಕಾರಿ ಮತ್ತು ಮಸಾಲೆಯುಕ್ತ ಭಕ್ಷ್ಯಗಳನ್ನು ತಯಾರಿಸಲು ಟೊಮೆಟೊಗಳನ್ನು (Tomato) ಬಳಸಲಾಗುತ್ತದೆ. ನಿಜವಾಗಿಯೂ ಹೇಳುವುದಾದರೆ ಭಾರತೀಯ ಅಡುಗೆ ಮನೆ ಟೊಮೆಟೋ ಇಲ್ಲದೆ ಅಪೂರ್ಣ. ಇದರಲ್ಲಿ ರಂಜಕ, ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಟೊಮೇಟೊಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು ಎಂದು ಹಲವರು ಹೇಳುತ್ತಾರೆ. ಇದು ಎಷ್ಟು ನಿಜ ಅನ್ನೋದು ತಿಳಿಯಿರಿ.

ಮೂತ್ರಕೋಶದ ಕಲ್ಲಿದ್ದವರು ಟೊಮೆಟೋವನ್ನು ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಂತೂ ಗ್ಯಾರಂಟಿ. ಟೊಮೆಟೋದಲ್ಲಿರುವ ಆಕ್ಸಲೇಟ್​ ಕಿಡ್ನಿ ಸ್ಟೋನ್​ ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗಾಗಿ ಕಿಡ್ನಿ ಸ್ಟೋನ್ ಇರುವವರು ಹೆಚ್ಚು ಟೊಮೆಟೊ ತಿನ್ನಬಾರದು. ಆದರೆ ಟೊಮೆಟೊಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಕಿಡ್ನಿ ಸ್ಟೋನ್ಸ್ ನಿಮ್ಮ ಮನೆಯಲ್ಲಿ ಯಾರಿಗಾದರೂ ಕಿಡ್ನಿ ಕಲ್ಲುಗಳಿದ್ದರೆ ನೀವು ಗಾಬರಿ ಪಡುವ ಅಗತ್ಯವಿಲ್ಲ.

ಟೊಮೆಟೊಗಳನ್ನು ತಿನ್ನುವುದು ಕೀಲು ನೋವಿನಲ್ಲಿ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಕೀಲು ನೋವಿನ ಸಮಸ್ಯೆ ಇರುವವರು ಟೊಮೆಟೊವನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು.

ಅಸಿಡಿಟಿ ಇರುವವರು ಟೊಮೆಟೊ ತಿಂದರೆ ಹೊಟ್ಟೆ ಉರಿಯಂತಹ ಸಮಸ್ಯೆಗಳು ಬರುತ್ತವೆ. ಅದಕ್ಕಾಗಿಯೇ ಅಸಿಡಿಟಿ ಇರುವವರು ಟೊಮೆಟೊಗಳೊಂದಿಗೆ ಬಹಳ ಜಾಗರೂಕರಾಗಿರಬೇಕು.

ಟೊಮೇಟೊ ತಿನ್ನುವುದರಿಂದ ಕೆಲವರಿಗೆ ಅಲರ್ಜಿ ಸಮಸ್ಯೆಗಳು ಉಂಟಾಗಬಹುದು. ಟೊಮೆಟೊ ಚರ್ಮದ ಅಲರ್ಜಿಯನ್ನು ಉಂಟುಮಾಡಬಹುದು. ತ್ವಚೆಯ ಅಲರ್ಜಿಯ ಸಮಸ್ಯೆ ಇದ್ದಲ್ಲಿ ಟೊಮೆಟೊ ತಿನ್ನಬಾರದು. ಅಂದರೆ ಟೊಮ್ಯಾಟೋಸ್ ಕೆಲವು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ.

ಇನ್ನು ಟೊಮೆಟೊ ರಕ್ತ ಹೆಪ್ಪುಗಟ್ಟುವಿಕೆ ಔಷಧಿಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದು ಕೂಡ ಟೊಮೇಟೊದ ಅತಿಯಾದ ಸೇವನೆಯಿಂದ ಉಂಟಾಗುವ ಸಮಸ್ಯೆ ಆಗಿದೆ.

 

ಇದನ್ನು ಓದಿ: Udupi Case: ಉಡುಪಿ : ಶೌಚಾಲಯದಲ್ಲಿ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬದಲಾವಣೆ ; ತನಿಖಾಧಿಕಾರಿ ಬದಲಾವಣೆ! ಯಾರು ಗೊತ್ತಾ? 

You may also like

Leave a Comment