Home » ಹೆಚ್ಚಿದ ಮಹಾಮಾರಿ ಕೊರೋನ ಪ್ರಕರಣ!! ಕೇರಳ ರಾಜ್ಯದಲ್ಲಿ ಭಾನುವಾರ ಲಾಕ್ ಡೌನ್-ಅಗತ್ಯ ಸೇವೆಗಳಿಗೆ ಅವಕಾಶ

ಹೆಚ್ಚಿದ ಮಹಾಮಾರಿ ಕೊರೋನ ಪ್ರಕರಣ!! ಕೇರಳ ರಾಜ್ಯದಲ್ಲಿ ಭಾನುವಾರ ಲಾಕ್ ಡೌನ್-ಅಗತ್ಯ ಸೇವೆಗಳಿಗೆ ಅವಕಾಶ

0 comments

ಹೆಚ್ಚುತ್ತಿರುವ ಕೋವಿಡ್ ಸೊಂಕಿನ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಆದಿತ್ಯವಾರ (ಸಂಡೆ) ಲಾಕ್ ಡೌನ್ ಹಾಗೂ ಕಠಿಣ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.

ಪೂರ್ವ ನಿಗದಿಯಾದ ಕಾರ್ಯಕ್ರಮಗಳಿದ್ದಲ್ಲಿ 20 ಮಂದಿಗೆ ಮಾತ್ರ ಸೇರಲು ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಅಗತ್ಯ ವಸ್ತುಗಳ ಸೇವೆಯು ರಾತ್ರಿ 09 ರ ವರೆಗೆ ದೊರೆಯಲಿದೆ.ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ ನೀಡಲಾಗಿದ್ದು, ನಿರ್ಬಂಧನೆಯನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಕಟ್ಟು ನಿಟ್ಟಿನ ಕ್ರಮವನ್ನು ಪ್ರತಿಯೊಬ್ಬರೂ ಪಾಲಿಸಲು ಕೋರಲಾಗಿದೆ.

You may also like

Leave a Comment