Home » Wheat Flour-Maida: ಗೋಧಿ ಹಿಟ್ಟು ಮತ್ತು ಮೈದಾ ಎರಡೂ ಗೋಧಿಯಿಂದಲೇ ತಯಾರಿ! ಆದರೂ ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ ; ಕಾರಣ?!

Wheat Flour-Maida: ಗೋಧಿ ಹಿಟ್ಟು ಮತ್ತು ಮೈದಾ ಎರಡೂ ಗೋಧಿಯಿಂದಲೇ ತಯಾರಿ! ಆದರೂ ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ ; ಕಾರಣ?!

1 comment
Wheat Flour-Maida

Wheat Flour-Maida: ಪ್ರಪಂಚದಾದ್ಯಂತ ಅತೀ ಹೆಚ್ಚು ಬೆಳೆಯುವ ಹಾಗೂ ಉಪಯೋಗಿಸುವ ಧಾನ್ಯ ಗೋಧಿ. ಏಕದಳ ಧಾನ್ಯಕ್ಕೆ ಸೇರಿರುವ ಗೋಧಿಯಲ್ಲಿ ಅನೇಕ ವಿಧಗಳಿವೆ. ಬೇರೆ ಬೇರೆ ದೇಶಗಳಲ್ಲಿ ಇದನ್ನು ಬೆಳೆಯುತ್ತಾರೆ. ಗೋಧಿಯಲ್ಲಿ ಪೌಷ್ಟಿಕಾಂಶ ಅಧಿಕವಾಗಿರುವುದರಿಂದ ಇದರ ಉಪಯೋಗ ಆಹಾರದಲ್ಲಿ ಅತೀ ಅವಶ್ಯಕ. ಇದರಲ್ಲಿ ಹೆಚ್ಚು ನಾರಿನ ಅಂಶಗಳಿವೆ. ಗೋಧಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಗೋಧಿಯಿಂದ ಮಾಡಿದ ಮೈದಾ (Maida) ತಿನ್ನುವುದು ಒಳ್ಳೆಯದಲ್ಲ. ಗೋಧಿ ಹಿಟ್ಟು ಮತ್ತು ಮೈದಾವನ್ನು (Wheat Flour-Maida) ಗೋಧಿಯಿಂದಲೇ ತಯಾರಿಸಲಾಗುತ್ತದೆ. ಆದರೂ ಮೈದಾ (Maida) ತಿನ್ನುವುದು ಒಳ್ಳೆಯದಲ್ಲ. ಯಾಕೆ ಗೊತ್ತಾ?

ಓಟ್ ಮೀಲ್ ಮತ್ತು ಮೈದಾ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ಗೋಧಿ ಹೊಟ್ಟು ತೆಗೆದ ನಂತರ ಗೋಧಿ ಹಿಟ್ಟು ಮೃದುವಾಗಿರುತ್ತದೆ. ಹೀಗಾಗಿ, ಅದರಲ್ಲಿರುವ ಪೋಷಕಾಂಶಗಳು ಹಾಗೆಯೇ ಉಳಿದುಕೊಂಡಿರುತ್ತದೆ. ಗೋಧಿಯನ್ನು ತಿನ್ನೋದರಿಂದ ತೂಕ ಹೆಚ್ಚಾಗುವುದಿಲ್ಲ. ಅದರಲ್ಲಿ ಇರುವ ಕ್ಯಾಲೋರಿ ನಮ್ಮ ದೇಹಕ್ಕೆ ಬೇಕಿರುವಂತದ್ದು. ಮಧುಮೇಹಿಗಳಿಗೆ ಗೋಧಿಯ ಆಹಾರ ಬಹಳ ಒಳ್ಳೆದು. ಅಕ್ಕಿಯಲ್ಲಿರುವ ಗ್ಲೈಸಮಿಕ್, ಸಕ್ಕರೆ ಅಂಶವನ್ನು ರಕ್ತದಲ್ಲಿ ಒಮ್ಮೆಲೇ ಹೆಚ್ಚಿಸುತ್ತದೆ. ಹಾಗಾಗಿ ಚಪಾತಿ ಮಧುಮೇಹಿಗಳಿಗೆ ಬಹಳ ಒಳ್ಳೇದು.

ಮೈದಾ ತಯಾರಿಕೆಯಲ್ಲಿ ಮೇಲಿನ ಪದರಗಳನ್ನು ಮಾತ್ರ ತೆಗೆದುಹಾಕಬೇಕು. ಇಂತಹ ಮೈದಾ ಹಿಟ್ಟಿನಲ್ಲಿ ಪೋಷಕಾಂಶಗಳು ಇರುವುದಿಲ್ಲ. ಬಿಳಿ ಭಾಗದಲ್ಲಿ ಪಿಷ್ಟ (ಸ್ಟಾರ್ಚ್​​) ಇದ್ದು, ಇದು ದೇಹಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ಮೈದಾ ಆರೋಗ್ಯಕ್ಕೆ ಹಾನಿಕಾರಕವೆಂದು ತಜ್ಞರು ಪರಿಗಣಿಸಿದ್ದಾರೆ.

ಮೈದಾ ಸೇವನೆ ದೇಹದಲ್ಲಿ ತೂಕ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಮಧುಮೇಹಿಗಳಿಗೆ ಇದು ಒಳ್ಳೆಯದಲ್ಲ. ಇದರ ಸೇವನೆ ಅತಿಯಾದರೆ ಆರೋಗ್ಯದಲ್ಲಿ ಏರುಪೇರು ಆಗುವ ಸಾದ್ಯತೆ ಹೆಚ್ಚು. ಜೀರ್ಣಕ್ರಿಯೆಗೆ ಸಂಬಂಧಿಸಿದ ರೋಗಗಳು, ಬೊಜ್ಜು ಬರುವುದು ಇತ್ಯಾದಿ. ಅದಕ್ಕಾಗಿಯೇ ಇದನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ.

You may also like

Leave a Comment