Home » ಆಗಸ್ಟ್ 1ರಿಂದಲೇ ಔಷಧಗಳ ಮೇಲೆ ಕಾಣಿಸಿಕೊಳ್ಳಲಿದೆ ಕ್ಯೂಆರ್ ಕೋಡ್ | ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದ ಹಿಂದಿರುವ ಪ್ರಯೋಜನ ಏನು ಗೊತ್ತಾ?

ಆಗಸ್ಟ್ 1ರಿಂದಲೇ ಔಷಧಗಳ ಮೇಲೆ ಕಾಣಿಸಿಕೊಳ್ಳಲಿದೆ ಕ್ಯೂಆರ್ ಕೋಡ್ | ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದ ಹಿಂದಿರುವ ಪ್ರಯೋಜನ ಏನು ಗೊತ್ತಾ?

0 comments

ಔಷಧಿಗಳ ಎಲ್ಲಾ ಮಾಹಿತಿಯನ್ನು ಪತ್ತೆ ಹಚ್ಚುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ತೆಗೆದುಕೊಂಡಿದ್ದು, ಹೆಚ್ಚು ಮಾರಾಟ ಮಾಡುವ ಔಷಧಗಳ ಬ್ರ್ಯಾಂಡ್ಗಳಲ್ಲಿ ಕ್ಯೂಆರ್ ಕೋಡ್ಗಳು ಅಥವಾ ಬಾರ್ಕೋಡ್ಗಳನ್ನು  ಕಡ್ಡಾಯಗೊಳಿಸಲು ಯೋಚಿಸಿದೆ.

ಈ ಕ್ಯೂಆರ್ ಕೋಡ್ಗಳು ವಿಶಿಷ್ಟ ಉತ್ಪನ್ನ ಗುರುತಿನ ಕೋಡ್, ಔಷಧದ ಸರಿಯಾದ ಮತ್ತು ಸಾಮಾನ್ಯ ಹೆಸರು, ಬ್ರಾಂಡ್ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ಬ್ಯಾಚ್ ಸಂಖ್ಯೆ, ಉತ್ಪಾದನಾ ದಿನಾಂಕ, ಮುಕ್ತಾಯದ ದಿನಾಂಕ ಮತ್ತು ಉತ್ಪಾದನಾ ಪರವಾನಗಿ ಸಂಖ್ಯೆ ಸೇರಿದಂತೆ ಔಷಧಿಗಳ ಎಲ್ಲಾ ಮಾಹಿತಿಯನ್ನು ಹೊಂದಿರುತ್ತವೆ ಎನ್ನಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ತಿಂಗಳು ಟಾಪ್ 300 ಬ್ರಾಂಡ್ಗಳ ಔಷಧಿಗಳ ಮೇಲೆ ಬಾರ್ಕೋಡ್ಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಭಾರತದಾದ್ಯಂತದ ಔಷಧಿ ಮಳಿಗೆಗಳಲ್ಲಿ ಈ ಕ್ರಮವು ಈ ಮೂರು ಯೋಜನೆಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದುಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹೊಸ ಕ್ರಮ ಆಗಸ್ಟ್ 1, 2023 ರಿಂದ ಜಾರಿಗೆ ಬರಲಿದೆ.

ಈ ಕ್ರಮವು ಉತ್ಪಾದನೆ ಮತ್ತು ಪೂರೈಕೆ ಸರಪಳಿಯ ಮೂಲಕ ಅಧಿಕೃತತೆ ಮತ್ತು ಪತ್ತೆಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಮೂಲಕ ನಕಲಿ ಔಷಧಿ  ಮಾರಾಟಗಾರರ ಜಾಲ ಪತ್ತೆ ಹಚ್ಚಬಹುದಾಗಿದೆ.

You may also like

Leave a Comment