Home » Milk: 45 ವರ್ಷ ಮೇಲ್ಪಟ್ಟವರು ಇನ್ನು ಕುಡಿಯಂಗಿಲ್ವಾ ಹಾಲು? ಸಂಶೋಧನೆಯಲ್ಲಿ ಅಚ್ಚರಿ ಸತ್ಯ ಬಯಲು

Milk: 45 ವರ್ಷ ಮೇಲ್ಪಟ್ಟವರು ಇನ್ನು ಕುಡಿಯಂಗಿಲ್ವಾ ಹಾಲು? ಸಂಶೋಧನೆಯಲ್ಲಿ ಅಚ್ಚರಿ ಸತ್ಯ ಬಯಲು

0 comments

Milk: ಇತ್ತೀಚಿಗೆ ನಡೆಯುತ್ತಿರುವ ಸಂಶೋಧನೆಗಳು ಮನುಷ್ಯರ ಜೀವನಕ್ಕೆ ಕುತ್ತು ತರುವಂತಹ ವಿಚಾರಗಳ ಕುರಿತು ಕೆಲವೊಂದು ಸತ್ಯಗಳನ್ನು ಬಯಲು ಮಾಡುತ್ತಿವೆ. ಅಂತೆಯೇ, ಕೆಲವು ವರ್ಷಗಳ ಹಿಂದೆ ನಡೆದ ಸಂಶೋಧನೆ ಎಂದು 45 ವರ್ಷ ಮೇಲ್ಪಟ್ಟವರು ಹಾಲನ್ನು ಕುಡಿಯುವ ಹಾಗಿಲ್ಲ ಅವರಲ್ಲಿ ಹೃದಯ ಸಂಬಂಧಿ ಹಾಗೂ ಪಾರ್ಶ್ವ ವಾಯು ರೀತಿಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಿತ್ತು.  ಈ ಬಗ್ಗೆ ಇತ್ತೀಚಿಗೆ ನಡೆದ ಸಂಶೋಧನೆ ಎಂದು ಅಚ್ಚರಿಯ ಸತ್ಯವನ್ನು ಬಯಲು ಮಾಡಿದೆ.

ಹೌದು, ಹಾಲು ಕುಡಿಯುವುದರಿಂದ ಹೃದಯ ಕಾಯಿಲೆ ಅಥವಾ ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ ಇಂದು ಹೇಳಲಾಗಿತ್ತು. ಆದರೆ ಇದೀಗ ಈ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎನ್ನಲಾಗಿದೆ. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ವಯಸ್ಸಾದ ಪುರುಷರ ಆಹಾರ ಪದ್ಧತಿಯನ್ನು ಸುಮಾರು ಎರಡು ದಶಕಗಳ ಕಾಲ ಸೂಕ್ಷ್ಮವಾಗಿ ಗಮನಿಸಲಾಯಿತು. ನಂತರದ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ.

ಸೌತ್ ವೇಲ್ಸ್ ಪ್ರದೇಶದ 45 ರಿಂದ 59 ವರ್ಷ ವಯಸ್ಸಿನ ಪುರುಷರ ಮೇಲೆ 20 ವರ್ಷಗಳ ಕಾಲ ಸಂಶೋಧನೆ ಈ ಸಂಶೋಧನೆ 1970 ರಿಂದ ಮುಂದುವರೆಯಿತು. ಸುಮಾರು 20 ವರ್ಷಗಳ ಕಾಲ ಅವರ ಆಹಾರ ಪದ್ಧತಿ, ಅನಾರೋಗ್ಯ ಸಮಸ್ಯೆಗಳು, ಸಾವುಗಳಿಗೆ ಸಂಬಂಧಿಸಿದ ವಿವರಗಳನ್ನು ಸಂಶೋಧಕರು ಸಂಗ್ರಹಿಸಿದರು. ಹಾಲನ್ನು ಎರಡು ಗುಂಪುಗಳಾಗಿ ವಿಂಗಡಿಸುವ ಮೂಲಕ ವಿಶ್ಲೇಷಣೆಯನ್ನು ಮಾಡಲಾಯಿತು.

ಹೆಚ್ಚು ಹಾಲು ಕುಡಿಯುವ ಪುರುಷರಲ್ಲಿ ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ. ಈ ಅಧ್ಯಯನವು ರಕ್ತ ಪರಿಚಲನೆ ಕಡಿಮೆಯಾಗುವುದರಿಂದ ಪಾರ್ಶ್ವವಾಯು ಬರುವ ಅಪಾಯ ತುಂಬಾ ಕಡಿಮೆ ಎಂದು ಕಂಡುಹಿಡಿದಿದೆ. ಅಲ್ಲದೆ ಹಾಲು ಕುಡಿಯುವುದರಿಂದ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಿಗಲಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

You may also like