Home » Health Tips : ಪಪ್ಪಾಯಿ ಹಣ್ಣಿನ ಅತಿಯಾದ ಸೇವನೆಯಿಂದ ಉಂಟಾಗಬಹುದು ಆರೋಗ್ಯ ಸಮಸ್ಯೆ!

Health Tips : ಪಪ್ಪಾಯಿ ಹಣ್ಣಿನ ಅತಿಯಾದ ಸೇವನೆಯಿಂದ ಉಂಟಾಗಬಹುದು ಆರೋಗ್ಯ ಸಮಸ್ಯೆ!

0 comments

Papaya side effects :ಆರೋಗ್ಯಕರ ಜೀವನ ಎಂದರೆ ಉತ್ತಮ ಆರೋಗ್ಯ ಮತ್ತು ಒಳ್ಳೆಯ ಮನಸ್ಸು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಬಯಸಿದರೆ, ಪ್ರತಿದಿನ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸುವುದು ಮುಖ್ಯ. ಆರೋಗ್ಯಕರ ಜೀವನಶೈಲಿ ರೋಗಗಳನ್ನು ತಡೆಯುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಒಳ್ಳೆಯ ಅಭ್ಯಾಸಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ಸದೃಢವಾಗಿರಲು ಸಹಾಯ ಮಾಡುತ್ತದೆ.

ಅಂತೆಯೇ ಉತ್ತಮ ಆಹಾರ ಸೇವನೆ ಕೂಡ ಆರೋಗ್ಯಯುತ ವ್ಯಕ್ತಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಇಂತಹ ಉತ್ತಮ ಆಹಾರಗಳಲ್ಲಿ ಪಪ್ಪಾಯಿ (Papaya) ಕೂಡ ಒಂದು. ಪಪ್ಪಾಯಿ ಹಣ್ಣನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೂಕ ಇಳಿಕೆಯಿಂದ ಹಿಡಿದು, ಋತುಚಕ್ರ ಸಮಸ್ಯೆ ಪರಿಹಾರದವರೆಗೆ ಪಪ್ಪಾಯಿ ಹಣ್ಣನ್ನು ತಿನ್ನಲಾಗುತ್ತದೆ. ಪಪ್ಪಾಯಿ ಹಣ್ಣು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪಪ್ಪಾಯಿ ಹಣ್ಣಿನ ಜೊತೆಗೆ ಅದರ ಎಲೆ ಮತ್ತು ಬೀಜಗಳು ಅನೇಕ ರೋಗಗಳ ವಿರುದ್ಧ ಹೋರಾಟ ಮಾಡುತ್ತವೆ. ಜೊತೆಗೆ ಪಪ್ಪಾಯಿ ಹಣ್ಣು ದೇಹಕ್ಕೆ ರಕ್ಷಣೆಯಾಗಿ ಕೆಲಸ ಮಾಡುತ್ತದೆ.

ಆದ್ರೆ, ಅತಿಯಾದರೆ ಅಮೃತವು ವಿಷ ಆಗಬಹುದು ಎನ್ನುವಂತೆ ಯಾವುದೇ ಆಹಾರವಾಗಲಿ ಅತಿಯಾಗಿ ಸೇವನೆ ಮಾಡಿದ್ರೆ ಅದು ಆರೋಗ್ಯಕ್ಕೆ ದುಷ್ಪರಿಣಾಮ ಉಂಟು ಮಾಡಬಹುದು. ಹೌದು. ಪಪ್ಪಾಯಿ ಹಣ್ಣು ಕೂಡ ಹಾಗೆಯೇ. ಈ ಪಪ್ಪಾಯ ಹಣ್ಣನ್ನು ಈ ಕೆಲವೊಂದು ಸಮಯಗಳಲ್ಲಿ ಸೇವಿಸಬಾರದು (papaya side effects) . ಯಾವೆಲ್ಲ ಸಮಸ್ಯೆ ಇರೋರು ಸೇವನೆ ಮಾಡಬಾರದು ಎಂಬುದನ್ನು ತಿಳಿಯೋಣ.

ಕಾಮಾಲೆ ಮತ್ತು ಆಸ್ತಮಾ :
ಕಾಮಾಲೆ ಮತ್ತು ಅಸ್ತಮಾ ರೋಗಿಗಳು ಪಪ್ಪಾಯ ತಿನ್ನಬಾರದು. ತಜ್ಞರ ಪ್ರಕಾರ, ಪಪ್ಪಾಯ ಹಣ್ಣಿನಲ್ಲಿರುವ ಪಪೈನ್ ಮತ್ತು ಬೀಟಾ ಕ್ಯಾರೋಟಿನ್ ಈ ಎರಡೂ ಕಾಯಿಲೆಗಳಿಗೆ ಹಾನಿಕಾರಕವಾಗಿದೆ.

ಗರ್ಭಾವಸ್ಥೆಯಲ್ಲಿ :
ಗರ್ಭಾವಸ್ಥೆಯಲ್ಲಿ ಪಪ್ಪಾಯಿಯನ್ನು ತಿನ್ನುವುದು ಹಾನಿಕಾರಕವಾಗಿದೆ. ಏಕೆಂದರೆ ಅದರಲ್ಲಿರುವ ಪಾಪೈನ್ ದೇಹದ ಜೀವಕೋಶ ಪೊರೆಯನ್ನು ಹಾನಿಗೊಳಿಸುತ್ತದೆ. ಹುಟ್ಟಲಿರುವ ಮಗುವಿನ ಬೆಳವಣಿಗೆಗೆ ಇದು ಬಹಳ ಮುಖ್ಯ. ಅದಕ್ಕಾಗಿಯೇ ಗರ್ಭಿಣಿಯರು ಪಪ್ಪಾಯಿ ತಿನ್ನದಂತೆ ಸಲಹೆ ನೀಡಲಾಗುತ್ತದೆ.

ಲೋ ಬ್ಲಡ್ ಶುಗರ್ :
ಲೋ ಬ್ಲಡ್ ಶುಗರ್ ಇರುವವರು ಪಪ್ಪಾಯಿಯನ್ನು ತಿನ್ನಲೇಬಾರದು. ಒಂದು ವೇಳೆ ಇವರು ಪಪ್ಪಾಯವನ್ನು ತಿಂದರೆ ಸಮಸ್ಯೆಗಳು ಹೆಚ್ಚಾಗಬಹುದು. ಮಧುಮೇಹ ರೋಗಿಗಳೂ ವೈದ್ಯರ ಸಲಹೆಯಿಲ್ಲದೆ ಪಪ್ಪಾಯಿಯನ್ನು ಸೇವಿಸಬಾರದು. ಪಪ್ಪಾಯಿಯಲ್ಲಿ ನಾರಿನಂಶ ಹೆಚ್ಚಿರುತ್ತದೆ ಮತ್ತು ಕಡಿಮೆ ಸಕ್ಕರೆ ಅಂಶವಿರುತ್ತದೆ. ಆದ್ದರಿಂದ ಲೋ ಬ್ಲಡ್ ಶುಗರ್ ಇರುವವರಿಗೆ ಈ ಹಣ್ಣು ಸೂಕ್ತವಾದುದಲ್ಲ.

ಸ್ಕಿನ್ ಅಲರ್ಜಿ :
ಯಾವುದೇ ರೀತಿಯ ಚರ್ಮದ ಅಲರ್ಜಿ ಇರುವವರು ಪಪ್ಪಾಯಿ ತಿನ್ನಬಾರದು. ಇದರ ಬಳಕೆಯಿಂದ ತಲೆನೋವು, ತಲೆಸುತ್ತು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ಪಪ್ಪಾಯಿ ತಿಂದ ನಂತರ ಯಾವತ್ತೂ ಔಷಧಿಯನ್ನು ತೆಗೆದುಕೊಳ್ಳಬೇಡಿ :
ಪಪ್ಪಾಯಿಯನ್ನು ತಿಂದ ತಕ್ಷಣ ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಕೆಲವು ಔಷಧಿಗಳಲ್ಲಿರುವ ರಾಸಾಯನಿಕ ಪಪ್ಪಾಯಿಯೊಂದಿಗೆ ಬೆರೆತು ಬಹಳ ಬೇಗನೆ ರಿಯಾಕ್ಟ್ ಮಾಡುತ್ತದೆ. ಮಾತ್ರವಲ್ಲ ಇದರಿಂದಾಗಿ ದೇಹದಿಂದ ರಕ್ತಸ್ರಾವವಾಗುವ ಅಪಾಯವಿರುತ್ತದೆ.

ಇದನ್ನೂ ಓದಿ :Morning Habits : ಬೆಳಿಗ್ಗೆ ಬ್ರಶ್ ಮಾಡದೇ ನೀರು ಕುಡಿಯುವುದು ಒಳ್ಳೆಯದೋ? ಕೆಟ್ಟದೋ? ತಜ್ಞರು ಏನು ಹೇಳುತ್ತಾರೆ?

You may also like

Leave a Comment