Home » plastic containers: ಈ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಇಡಬಾರದು

plastic containers: ಈ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಇಡಬಾರದು

0 comments

Plastic Containers: ಪ್ಲಾಸ್ಟಿಕ್ ಪಾತ್ರೆ ಇಲ್ಲದ ಅಡುಗೆ ಮನೆ ಇಲ್ಲ. ಅದರಲ್ಲೂ ಅಡುಗೆಮನೆಯಲ್ಲಿ ಆಹಾರ ಸಂಗ್ರಹ ಮಾಡಲು ಹೆಚ್ಚಾಗಿ ಪ್ಲಾಸ್ಟಿಕ್ ಡಬ್ಬ ಅಥವಾ ಪಾತ್ರೆಯನ್ನು (plastic containers) ಉಪಯೋಗಿಸುವುದು ಸಾಮಾನ್ಯ. ಆದರೆ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಎಲ್ಲಾ ಆಹಾರಗಳನ್ನು (Food) ಇಡುವುದು ಸುರಕ್ಷಿತವಲ್ಲ. ಇಂತಹ ಆಹಾರ ಆರೋಗ್ಯಕ್ಕೆ (Health) ಹಾನಿಕಾರಕವಾದ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು.

ಹೌದು, ನ್ಯಾಷನಲ್ ಸ್ಯಾನಿಟೇಶನ್ ಫೌಂಡೇಶನ್ (NSF) ಸಂಶೋಧನೆಯ ಪ್ರಕಾರ, ಕೆಲವು ಪದಾರ್ಥಗಳು ಪ್ಲಾಸ್ಟಿಕ್‌ನೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿಸಿದೆ.

ಬಿಸಿ ಆಹಾರವನ್ನು ನೇರವಾಗಿ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಇಡುವುದರಿಂದ ವಿಷಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತದೆ. ಇನ್ನು ಹಸಿ ಮಾಂಸ ಮತ್ತು ಮೀನು (Fish) ನೈಸರ್ಗಿಕವಾಗಿ ಬ್ಯಾಕ್ಟೀರಿಯಾವನ್ನು ಹೊಂದಿರುವ ಕಾರಣ ಅವುಗಳನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿಟ್ಟು ಫ್ರಿಡ್ಜ್‌ನಲ್ಲಿಡಬೇಡಿ.

ಟೊಮ್ಯಾಟೊ, ಸಿಟ್ರಸ್ ಹಣ್ಣುಗಳು ಮತ್ತು ಬೆರ್ರಿಗಳು ಪ್ಲಾಸ್ಟಿಕ್‌ನೊಂದಿಗೆ ಸೇರಿದಾಗ ರಾಸಾಯನಿಕ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಯಾಕೆಂದರೆ ಇದು ಆಮ್ಲೀಯವಾಗಿವೆ. ಇನ್ನು ಎಣ್ಣೆಯುಕ್ತ ಆಹಾರಗಳು, ಚೀಸ್ ಇತ್ಯಾದಿಗಳು ಪ್ಲಾಸ್ಟಿಕ್‌ನಿಂದ ರಾಸಾಯನಿಕಗಳನ್ನು ಹೀರಿಕೊಳ್ಳುವ ಕಾರಣ ಪ್ಲಾಸ್ಟಿಕ್ ಡಬ್ಬದಲ್ಲಿ ಇವುಗಳನ್ನು ಇಡಬೇಡಿ..

ಇದನ್ನೂ ಓದಿ:Rain: ಅ.5 ರವರೆಗೂ ರಣಭೀಕರ ಮಳೆ!

ಇನ್ನು ಹೆಚ್ಚು ಕೊಬ್ಬಿನಾಂಶವಿರುವ ಆಹಾರಗಳು ಅಥವಾ ಕಾರ್ಬೊನೇಟೆಡ್ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಇಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

You may also like