Home » ಶುರುವಾಯ್ತು ರಣ ಬೇಸಿಗೆಯ ಕಾಲ! ಇನ್ನು ಈ ಬೆವರಿನದ್ದೇ ಕಾರುಬಾರು, ಬೆವರಿನ ದುರ್ನಾತ ಹೋಗಲಾಡಿಸಲು ಇದು ಬೆಸ್ಟ್‌!

ಶುರುವಾಯ್ತು ರಣ ಬೇಸಿಗೆಯ ಕಾಲ! ಇನ್ನು ಈ ಬೆವರಿನದ್ದೇ ಕಾರುಬಾರು, ಬೆವರಿನ ದುರ್ನಾತ ಹೋಗಲಾಡಿಸಲು ಇದು ಬೆಸ್ಟ್‌!

0 comments

Excessive sweating  :ಬೇಸಿಗೆಯಲ್ಲಿ ಬೆವರಿನ ವಾಸನೆ ಕಿರಿಕಿರಿ ಉಂಟುಮಾಡುತ್ತದೆ. ಇದನ್ನು ಹೋಗಲಾಡಿಸಲು ಜನರು ಹಲವಾರು ವಸ್ತುಗಳ ಮೊರೆ ಹೋಗುತ್ತಾರೆ. ಈ ಬೆವರು(excessive sweating) ಕಂಕುಳಿನ ಹತ್ತಿರ ಬಟ್ಟೆಯಲ್ಲಿ ಕಪ್ಪು ಚುಕ್ಕೆಯ ಹಾಗೇ ಗೋಚರಿಸುತ್ತದೆ. ಅದರಿಂದ ಸಾಕಷ್ಟು ಇರಿಸುಮುರಿಸು ಉಂಟಾಗುತ್ತದೆ. ಯಾರು ಹತ್ತಿರವೂ ಸುಳಿಯುವಂತಿಲ್ಲ. ಈ ಎಲ್ಲಾ ಸಮಸ್ಯೆಗೆ ಪರಿಹಾರ ಇಲ್ಲಿದೆ. ಬೆವರಿನ ವಾಸನೆ ದೂರು ಮಾಡಲು ಹೀಗೆ ಮಾಡಿ.

ಬೆವರನ್ನು ಕಡಿಮೆ ಮಾಡುವುದು ಹೇಗೆ?
ಡಿಯೋಡ್ರಂಟ್(deodorant) ಬಳಸಿ : ಕಂಕುಳಿನ ದುರ್ನಾತ ಹೋಗಲಾಡಿಸಲು, ಬೆವರನ್ನು ದೂರು ಮಾಡಲು ಡಿಯೋಡ್ರಂಟ್ ಬಳಸಿ. ಇದಕ್ಕೆ ಖನಿಜ ಆಧಾರಿತ ಆರಾರೂಟ್ ಪುಡಿ ಉತ್ತಮ ಡಿಯೋಡ್ರಂಟ್ ಸಹಕಾರಿಯಾಗಿದೆ. ಇದು ನೈಸರ್ಗಿಕವಾದದ್ದಾಗಿದೆ. ಇದನ್ನು ದಿನಕ್ಕೆ ಎರಡು ಬಾರಿ ಬಳಸಿರಿ. ಬೆವರಿನ ದುರ್ನಾತ ದೂರ ಮಾಡಿ.

ಬೆವರನ್ನು ಕಡಿಮೆ ಮಾಡಲು ಸ್ವಲ್ಪ ಸಡಿಲವಾದ ಕಾಟನ್ ಬಟ್ಟೆಗಳನ್ನು ಧರಿಸಿ. ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸಬೇಡಿ. ಇದರಿಂದ ಬೆವರಿನ ವಾಸನೆ ಹೆಚ್ಚಾಗುತ್ತದೆ. ಹಾಗೆ ರೋಸ್ ವಾಟರ್(rose water) ಹಚ್ಚಿ, ಇದರಿಂದ ಕೂಡ ಬೆವರಿನ ಸಮಸ್ಯೆ ದೂರ ಮಾಡಬಹುದು.

ಕೆಲವರಿಗೆ ಕೈ ಕಾಲುಗಳು ಬೆವರುತ್ತದೆ. ಇದಕ್ಕೆ ಒಣಗಿದ ನಿಂಬೆ ಮತ್ತು ಕಿತ್ತಳೆ(orange)ಯ ಸಿಪ್ಪೆಯ ಪೌಡರ್ ಅನ್ನು ಹಚ್ಚಿರಿ. ಅಲ್ಲದೇ, ಸೋಡಿಯಂ ಅಂಶವನ್ನು ಹೊಂದಿರುವ ಟೊಮೆಟೊ ಸೇವನೆ ಕೂಡ ಬೆವರನ್ನು ಕಡಿಮೆ ಮಾಡುತ್ತದೆ. ಹಾಗೇ ಶ್ರೀಗಂಧದ ಪುಡಿಯನ್ನು ನೀರು, ನಿಂಬೆ ರಸ ಅಥವಾ ರೋಸ್ ವಾಟರ್ ನೊಂದಿಗೆ ಬೆರೆಸಿ ಹಚ್ಚಿಕೊಳ್ಳಿ. ಅದು ಒಣಗಿದ ನಂತರ ತೊಳೆಯಿರಿ.

ಬೆವರನ್ನು ದೂರ ಮಾಡಲು ಚಿಕಿತ್ಸೆ(treatment): ಬೆವರಿಗೆ ಟ್ರೀಟ್ಮೆಂಟ್ ಕೂಡ ಇದೆ. ಹೌದು, ಬಿಸಿಲಿಗೆ, ಕೆಲಸದ ಒತ್ತಡದಲ್ಲಿ ಸಾಕಷ್ಟು ಬೆವರಿರುವವರು, ಹೈಪರ್ ಹೈಡ್ರೊಸಿಸ್ ನಿಂದ ಬಳಲುತ್ತಿರುವವರು ಆಂಟಿಪಸ್ಪರನ್ಸ್ (Antiperspirants) ಚಿಕಿತ್ಸೆಯನ್ನು ಪಡೆಯಬಹುದು. ಹಾಗೆಯೇ ಅಯಾಂಟೊಪರಿಸೆಸ್ (Lontophoresis) ಚಿಕಿತ್ಸೆಯೂ ಪಡೆಯಬಹುದು. ಇದು ಬೆವರಿನ ಗ್ರಂಥಿಗಳನ್ನು ಬ್ಲಾಕ್ ಮಾಡುವ ಮೂಲಕ ಬೆವರಿನ ಸಮಸ್ಯೆ ಕಡಿಮೆ ಮಾಡುತ್ತದೆ. ಆಂಟಿಕೋಲನರ್ಜಿಕ್ ಡ್ರಗ್ಸ್ ( Anticholinergic Drugs) Acetylcholine ಎಂಬ ಟ್ರಾನ್ಮಿಟರ್ ಅನ್ನು ಬ್ಲಾಕ್ ಮಾಡಿ, ಬೆವರು ಕಡಿಮೆಯಾಗುತ್ತದೆ. ಹಾಗೇ ಬೊಟೊಕ್ಸ್ (Botox) ಚಿಕಿತ್ಸೆ ಕೂಡ ಬೆವರನ್ನು ಕಡಿಮೆ ಮಾಡುತ್ತದೆ.

You may also like

Leave a Comment