Home » Dakshina Kannada: ಮತ್ತೆ ಲಗ್ಗೆ ಇಟ್ಟ ಮಹಾಮಾರಿ; ದ.ಕ ಜಿಲ್ಲೆಯಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್‌ ಪತ್ತೆ!! ಎಲ್ಲೆಡೆ ಅಲರ್ಟ್‌!!

Dakshina Kannada: ಮತ್ತೆ ಲಗ್ಗೆ ಇಟ್ಟ ಮಹಾಮಾರಿ; ದ.ಕ ಜಿಲ್ಲೆಯಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್‌ ಪತ್ತೆ!! ಎಲ್ಲೆಡೆ ಅಲರ್ಟ್‌!!

by Mallika
1 comment
Dakshina Kannada

Mangaluru: ಮತ್ತೆ ಕೊರೊನಾ ಲಗ್ಗೆ ಇಟ್ಟಿದೆ. ಇದೀಗ ಈ ಕೊರೊನಾ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದಕ್ಷಿಣ ಕನ್ನಡದಲ್ಲಿ ಮತ್ತೆರಡು ಪಾಸಿಟಿವ್‌ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಮೂರಕ್ಕೇರಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋ ಸಹಜ ಖಾಯಿಲೆಗೆ ಚಿಕಿತ್ಸೆಗೆಂದು ಬಂದಿದ್ದ 83 ವರ್ಷದ ಮಹಿಳೆಯೊಬ್ಬರ ಸ್ವಾಬ್‌ ಸಂಗ್ರಹಿಸಿ ಟೆಸ್ಟ್‌ಗೆ ಕಳುಹಿಸಲಾಗಿತ್ತು. ರಿಪೋರ್ಟ್‌ ಬಂದಿದ್ದು, ಕೊರೊನಾ ಪಾಸಿಟಿವ್‌ ಎಂದು ದೃಢಪಟ್ಟಿದೆ. ಹಾಗಾಗಿ ಮಹಿಳೆಯನ್ನು ಸುಳ್ಯದಲ್ಲಿಯೇ ಹೋಮ್‌ ಐಸೋಲೇಷನ್‌ ಮಾಡಲಾಗಿದೆ.

ಇದನ್ನು ಓದಿ: Kundapura: 7 ನೇ ತರಗತಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹ್ಯೆ! ಕಾರಣವೇನು?

ಇನ್ನೊಂದು ಪ್ರಕರಣದ 40 ವರ್ಷದ ವ್ಯಕ್ತಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ವೆನ್ಲಾಕ್‌ ಆಸ್ಪತ್ರೆಗೆ ಇವರನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಮೂಲದ 82 ವರ್ಷದ ವ್ಯಕ್ತಿ ಕೊರೊನಾ ಪಾಸಿಟಿವ್‌ ಆಗಿದ್ದರೆಂದು ವರದಿಯಾಗಿತ್ತು.

You may also like

Leave a Comment