Home » Lucky Plants: ವರ್ಷಾಂತ್ಯಕ್ಕೆ ಮನೆಯಲ್ಲಿ ಈ ಗಿಡಗಳನ್ನು ನೆಡಿ – ಹೊಸ ವರ್ಷಕ್ಕೆ ನಿಮ್ಮ ಸಂಪತ್ತು ಹೇಗೆ ಏರಿಕೆ ಕಾಣುತ್ತೆ ನೋಡಿ

Lucky Plants: ವರ್ಷಾಂತ್ಯಕ್ಕೆ ಮನೆಯಲ್ಲಿ ಈ ಗಿಡಗಳನ್ನು ನೆಡಿ – ಹೊಸ ವರ್ಷಕ್ಕೆ ನಿಮ್ಮ ಸಂಪತ್ತು ಹೇಗೆ ಏರಿಕೆ ಕಾಣುತ್ತೆ ನೋಡಿ

1 comment
Lucky Plants

Lucky Plants: ಕೆಲವೊಂದು ಸಸ್ಯಗಳನ್ನು ಅದೃಷ್ಟ ಸಸ್ಯಗಳು ಎಂದೇ ಕರೆಯುತ್ತಾರೆ. ಈ ಅದೃಷ್ಟ ಸಸ್ಯಗಳು (Lucky Plants) ಎಲ್ಲರ ಮನೆಯನ್ನು ಅಲಂಕರಿಸುವ ಜೊತೆಗೆ ಅದೃಷ್ಟ ತಂದುಕೊಡುತ್ತದೆಯಂತೆ. ಇನ್ನೇನು ಹೊಸ ವರ್ಷ 2024 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಹೊಸ ವರ್ಷದಲ್ಲಿ ಕೆಲವು ಸಸ್ಯಗಳನ್ನು ಮನೆಗೆ ತರುವುದರಿಂದ ಸಂತೋಷ, ಶಾಂತಿ ಮತ್ತು ಮಂಗಳಕರ ಫಲಿತಾಂಶಗಳನ್ನು ತರುತ್ತದೆ. ಇದರ ಹೊರತಾಗಿ ವ್ಯಕ್ತಿಯು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ ಎನ್ನಲಾಗಿದೆ. ನೀವೂ ಕೂಡ ಹೊಸ ವರ್ಷದಲ್ಲಿ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಿಸಬೇಕಿಲ್ಲ ಎಂದಾದರೆ ಹೊಸ ವರ್ಷದ ದಿನ ಮನೆಯಲ್ಲಿ ಈ ಕೆಳಗಿನ ಗಿಡಗಳನ್ನು ನೆಡಿ.

ಮಲ್ಲಿಗೆ ಗಿಡ:
ವಾಸ್ತು ಶಾಸ್ತ್ರದ ಪ್ರಕಾರ ಹೊಸ ವರ್ಷದಲ್ಲಿ ಮಲ್ಲಿಗೆ ಗಿಡವನ್ನು ಮನೆಗೆ ತರುವುದು ಶುಭ. ಇದರ ಹೂವುಗಳು ಕುಟುಂಬದ ಸದಸ್ಯರ ಆಲೋಚನೆಗಳು ಮತ್ತು ಭಾವನೆಗಳನ್ನು ಧನಾತ್ಮಕವಾಗಿಸಲು ಸಹಾಯ ಮಾಡುತ್ತದೆ.

ಪಾರಿಜಾತಗಿಡ :
ಹೊಸ ವರ್ಷದಲ್ಲಿ ಪಾರಿಜಾತಗಿಡವನ್ನು ಮನೆಗೆ ತರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಸ್ಯವು ಮಾನಸಿಕ ಶಾಂತಿಯನ್ನು ನೀಡುತ್ತದೆ. ಪಾರಿ ಜಾತವನ್ನು ಮನೆಯ ಮಧ್ಯದಲ್ಲಿ ಅಥವಾ ಹಿಂಭಾಗದಲ್ಲಿ ನೆಡಬೇಕು.

ಶಮಿ ಗಿಡ :
ಹೊಸ ವರ್ಷದಲ್ಲಿ ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಶಮಿ ಗಿಡವನ್ನು ನೆಟ್ಟು ಅದರ ಬಳಿ ಎಣ್ಣೆಯ ದೀಪವನ್ನು ಹಚ್ಚಿ. ಇದನ್ನು ಮಾಡುವುದರಿಂದ ಶನಿ ಕೋಪದಿಂದ ರಕ್ಷಣೆ ಸಿಗುತ್ತದೆ ಎಂದು ನಂಬಲಾಗಿದೆ.

ತುಳಸಿ ಗಿಡ :
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿ ಗಿಡವಿದ್ದರೆ ಲಕ್ಷ್ಮಿ ದೇವಿಯ ವಾಸಸ್ಥಾನವಾಗುತ್ತದೆ. ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಹೊಸ ವರ್ಷದಲ್ಲಿ ತುಳಸಿ ಗಿಡವನ್ನು ಮನೆಯಲ್ಲಿ ನೆಡಿರಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಸಸ್ಯವನ್ನು ಪೂಜಿಸಿ. ಈ ಕೆಲಸವನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಆರ್ಥಿಕ ಲಾಭವನ್ನು ಪಡೆಯುತ್ತಾನೆ.

You may also like

Leave a Comment