Home » Increase Fertility: ಪುರುಷರೇ ನೀವು ತಂದೆಯಾಗಲು ಬಯಸುವಿರಾ? ಈ ವಿಟಮಿನ್‌ಗಳ ಬಗ್ಗೆ ಗಮನ ಕೊಡಿ

Increase Fertility: ಪುರುಷರೇ ನೀವು ತಂದೆಯಾಗಲು ಬಯಸುವಿರಾ? ಈ ವಿಟಮಿನ್‌ಗಳ ಬಗ್ಗೆ ಗಮನ ಕೊಡಿ

0 comments
Increase Fertility

Increase fertility  : ಫಲವತ್ತತೆ ವಿಷಯದಲ್ಲಿ ಕೇವಲ ಮಹಿಳೆಗೆ (women) ಮಾತ್ರ ತೊಂದರೆ (problems ) ಇದೆ ಅಂದುಕೊಳ್ಳುವುದು ತಪ್ಪು. ಯಾಕೆಂದರೆ ಹೆಚ್ಚಿನ ಪುರುಷರಿಗೆ ತಮ್ಮ ದೇಹದಲ್ಲಿಯೇ ಜನನಾಂಗದ ಕಾರ್ಯ ವ್ಯವಸ್ಥೆಗೆ ಬೇಕಾದ ವಿವಿಧ ಬಗೆಯ ಪೋಷಕಾಂಶಗಳ ಕೊರತೆಯಿಂದಾಗಿ ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಸಾಮಾನ್ಯವಾಗಿ ಪುರುಷರಿಗೆ ಆರೋಗ್ಯಕರವಾದ ರೋಗ ನಿರೋಧಕ ಶಕ್ತಿ ಮತ್ತು ಉತ್ತಮವಾದ ದೇಹ ಇದ್ದರಷ್ಟೇ ಸಾಕಾಗುವುದಿಲ್ಲ. ಹೌದು ಫಲವತ್ತತೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆಗಳು ಇರದಂತೆ (increase fertility) ನೋಡಿಕೊಳ್ಳುವುದು ಸಹ ಮುಖ್ಯ ಅಂಶವಾಗಿದೆ.

ಪ್ರಮುಖವಾಗಿ ಲೈಂಗಿಕತೆಯಲ್ಲಿ ಆರೋಗ್ಯಕರ ಆಹಾರವನ್ನು (food ) ತಿನ್ನುವುದು ಮತ್ತು ಕೆಲವು ಅಭ್ಯಾಸಗಳನ್ನು ಬಿಡುವುದರಿಂದ ರಕ್ತದ ಹರಿವನ್ನು ಹೆಚ್ಚಿಸಲು ಮತ್ತು ಲೈಗಿಂಕ ತ್ರಾಣವನ್ನು ಸುಧಾರಿಸಲು ಸಹಾಯ (help) ಮಾಡುತ್ತದೆ. ಅಂತಹ ಕೆಲವು ಪೌಷ್ಟಿಕ ಆಹಾರವನ್ನು ಈ ಕೆಳಗೆ ತಿಳಿಸಲಾಗಿದೆ.

• ಫೋಲಿಕ್ ಆಮ್ಲವು ಪುರುಷರ ವೀರ್ಯಾಣುಗಳ ಗುಣಮಟ್ಟ ಹಾಗೂ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಇದು ಫಲವತ್ತತೆಯನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ವಿವಿಧ ಬಗೆಯ ಲೈಂಗಿಕ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತದೆ.

• ವಿಟಮಿನ್ ಇ ಇದೊಂದು ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಆಗಿದ್ದು, ಪುರುಷರ ಜನನಾಂಗದ ಕಾರ್ಯ ವ್ಯವಸ್ಥೆ ಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಅಡುಗೆಯಲ್ಲಿ ಆಲಿವ್ ಎಣ್ಣೆ ಬಳಸುವುದು, ಪ್ರತಿದಿನ ನೆನೆಸಿಟ್ಟ ಬಾದಾಮಿ ಮತ್ತು ಕಡಲೆಬೀಜಗಳನ್ನು ಸೇವಿಸಿ ಡೈರಿ ಉತ್ಪನ್ನಗಳು, ಹಸಿರೆಲೆ ಸೊಪ್ಪುಗಳನ್ನು ಆದಷ್ಟು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ.

• ಪುರುಷರ ದೇಹಕ್ಕೆ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ಸೇರಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಸೇವಿಸುವ ಯಾವುದೇ ಆಹಾರದಲ್ಲಿ ಕಂಡು ಬರುವ ಕಬ್ಬಿಣದ ಅಂಶ ದೇಹಕ್ಕೆ ಚೆನ್ನಾಗಿ ಹೀರಿ ಕೊಳ್ಳಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಜೀವಕೋಶಗಳ ಹಾನಿ ಆಗದಂತೆ ತಡೆಯುತ್ತದೆ. ಸಾಧ್ಯವಾದರೆ ವಿಟಮಿನ್ ಸಿ ಅಂಶ ಹೆಚ್ಚಿರುವ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೂಸಂಬಿ, ಸ್ಟ್ರಾಬೆರಿ ಹಣ್ಣು ಗಳನ್ನು ಸೇವನೆ ಮಾಡಿದರೆ ಒಳ್ಳೆಯದು. ​

• ವೈದ್ಯಕೀಯ ಸಂಶೋಧನೆ ಹೇಳುವ ಹಾಗೆ ಜಿಂಕ್ ಪ್ರಮಾಣ ಪುರುಷರ ದೇಹದಲ್ಲಿ ಜನನಾಂಗಗಳ ಭಾಗ ದಲ್ಲಿ ಕೆಲಸ ಮಾಡಲಿದ್ದು, ವೀರ್ಯಾಣುಗಳ ಉತ್ಪತ್ತಿ ಯಲ್ಲಿ ಸಹ ನೆರವಾಗುತ್ತದೆ.

• ಪೂರ್ಣಪ್ರಮಾಣದಲ್ಲಿ ವೀರ್ಯಾಣುಗಳ ಆರೋಗ್ಯ ವನ್ನು ವಿಟಮಿನ್ ಡಿ ರಕ್ಷಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ನಡೆಯುವ ಬೇರೆ ಬೇರೆ ಜೈವಿಕ ಕಾರ್ಯ ಚಟುವಟಿಕೆಗಳನ್ನು ಸಹ ಇದು ಅಭಿವೃದ್ದಿ ಪಡಿಸುತ್ತದೆ. ಆದಷ್ಟು ವಿಟಮಿನ್ ಡಿ ಉತ್ತಮ ವಾಗಿರುವ ಆಹಾರಗಳನ್ನು ಸೇವನೆ ಮಾಡಿ. ಅಂದರೆ ಮಶ್ರೂಮ್, ಮೊಟ್ಟೆ, ಡೈರಿ ಉತ್ಪನ್ನಗಳು, ಟ್ಯೂನಾ ಮೀನು ಇಂತಹ ಆಹಾರಗಳನ್ನು ಆದಷ್ಟು ಆಹಾರ ಪದ್ಧತಿ ಯಲ್ಲಿ ಸೇರಿಸಿಕೊಳ್ಳಿ.

• ಒಮೆಗಾ -3 ಕೊಬ್ಬಿನಾಮ್ಲಗಳು
ಈ ರೀತಿಯ ಕೊಬ್ಬು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಅತ್ಯುತ್ತಮ ಮೂಲಗಳಲ್ಲಿ ಒಂದು ಮೀನು, ಇದು AHAವಿಶ್ವಾಸಾರ್ಹ ಮೂಲ ಉತ್ತಮ ಹೃದಯದ ಆರೋಗ್ಯಕ್ಕಾಗಿ ವಾರಕ್ಕೆ ಎರಡು ಬಾರಿಯಾದರೂ ತಿನ್ನಲು ಶಿಫಾರಸು ಮಾಡುತ್ತದೆ. ಸಾಲ್ಮನ್, ಆಂಚೊವಿಗಳು, ಕಪ್ಪು ಕಾಡ್, ಹೆರಿಂಗ್, ಬಿಳಿ ಮೀನು, ಕೋಬಿಯಾ, ಬಲವರ್ಧಿತ ಮೊಟ್ಟೆಗಳು, ಅಗಸೆಬೀಜಗಳು ಮುಂತಾದವನ್ನು ಸೇವಿಸುವುದು ಉತ್ತಮ.

ಇನ್ನು ಕಾರ್ಬೋಹೈಡ್ರೇಟ್ ಒಳಗೊಂಡ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಶಕ್ತಿ ಉತ್ಪತ್ತಿ ಆಗುತ್ತವೆ. ಉದಾಹರಣೆಗೆ ಬೀಜಗಳು, ಕಾಳುಗಳು, ಇದರ ಜೊತೆಗೆ ಕಾರ್ಬೋಹೈಡ್ರೇಟ್ ಒಳಗೊಂಡಿರುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ.

ಹೆಚ್ಚಾಗಿ ಪುರುಷರಲ್ಲಿ ಕಂಡು ಬರುವ ಈ ಲೈಂಗಿಕ ಸಮಸ್ಯೆಗಳಿಗೆ ನೈಸರ್ಗಿಕವಾಗಿಯೇ ಪರಿಹಾರ ಕಂಡುಕೊಳ್ಳಬಹುದು. ಪುರುಷರು ಈ ಮೇಲಿನ ಪೌಷ್ಟಿಕ ಆಹಾರ ಸೇವಿಸುವುದರಿಂದ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಕಾಮಾಸಕ್ತಿಯನ್ನು ಮರಳಿ ಪಡೆಯಬಹುದು.

You may also like

Leave a Comment