Home » Health Tips: ನೀವು ಬೇಸಿಗೆಯಲ್ಲಿ ಹೆಚ್ಚೆಚ್ಚು ಬಿಯರ್​ ಕುಡಿಯುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ!

Health Tips: ನೀವು ಬೇಸಿಗೆಯಲ್ಲಿ ಹೆಚ್ಚೆಚ್ಚು ಬಿಯರ್​ ಕುಡಿಯುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ!

by ಹೊಸಕನ್ನಡ
0 comments
beer in summer

Beer in summer :ಒಂದು ಲೆಕ್ಕದಲ್ಲಿ ಸುರಪಾನಗಳ ಸಾಲಿಗೇ ಸೇರುವ ಬಿಯರ್(Beer) ಎಂದರೆ ಹಲವರಿಗೆ ಬಲು ಇಷ್ಟ. ಆದರಲ್ಲೂ ನಮ್ಮ ಯೂತ್ಸ್ ಗೆ ಅದರ ಮಚಲೆ ಸ್ವಲ್ಪ ಹೆಚ್ಚಿಗೆ ಪ್ರೀತಿ. ಇನ್ನು ಈ ಬಿಯರ್ ಒಂದು ಉತ್ತಮ ರಿಫ್ರೆಶಿಂಗ್​ ಡ್ರಿಂಕ್​ ಆಗಿದೆ ಎಂದು ಅದನ್ನು ಕುಡಿಯುವವರು ನಂಬಿದ್ದಾರೆ. ಇನ್ನು ಈ ಸಮ್ಮರ್ ಸಮಯದಲ್ಲಿ ಅಂದರೆ ಬೇಸಿಗೆ ಸಮಯದಲ್ಲಿ ಯತೇಚ್ಛವಾಗಿ ಈ ರಿಫ್ರೆಶಿಂಗ್ ಡ್ರಿಂಕ್ ಕುಡಿದರೆ ಏನಾಗುತ್ತದೆ ಗೊತ್ತಾ?

ಸಾಮಾನ್ಯವಾಗಿ ಬಿಯರ್ ಶೇ. 4.5 ರಿಂದ 8 ರಷ್ಟು ಆಲ್ಕೋಹಾಲ್(Alcohol) ಅಂಶವನ್ನು ಹೊಂದಿರುತ್ತದೆ. ಹೀಗಾಗಿ ಇದು ದೇಹದಲ್ಲಿ ನೀರಿಗಿಂತ ವೇಗವಾಗಿ ಹೀರಲ್ಪಡುತ್ತದೆ. ಆದ್ದರಿಂದ, ಬೇಸಿಗೆಯಲ್ಲಿ ಬಿಯರ್‌ನ (Beer in summer) ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹೀಗಾಗಿಯೇ ಬಿಯರ್ ಸೇವನೆಯ ನಂತರ ಸಾಕಷ್ಟು ನೀರು ಕುಡಿಯಬೇಕೆಂದು ವೈದ್ಯರು ಹೇಳುತ್ತಿರುತ್ತಾರೆ. ಆದರಲ್ಲೂ ಬೇಸಿಗೆಯಲ್ಲಿ ಸ್ವಲ್ಪ ಹೆಚ್ಚಿಗೆ ನೀರು ಸೇವಿಸಬೇಕು. ಸಾಧ್ಯವಾದರೆ ಈ ವೇಳೆ ಬಿಯರ್ ತಗೊಳ್ಳೋದನ್ನೂ ಕಡಿಮೆ ಮಾಡಬೇಕು.

ಜನರು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಮತ್ತು ತಣ್ಣಗಾಗಲು ಬಿಯರ್ ಅನ್ನು ಕುಡಿಯುತ್ತಾರೆ. ಆದರೆ ಬಿಯರ್ ವಾಸ್ತವವಾಗಿ ಬಾಯಾರಿಕೆಯನ್ನು ಉಂಟುಮಾಡಲಿದೆ ಮತ್ತು ಹೆಚ್ಚು ಬೆವರಿಗೆ ಕಾರಣವಾಗುತ್ತದೆ. ಬಿಯರ್​ ಕುಡಿದ ಮೇಲೆ ದೇಹವನ್ನು ಹೈಡ್ರೇಟ್​ ಆಗಿ ಇಟ್ಟುಕೊಳ್ಳಲು ಹೆಚ್ಚಿಗೆ ನೀರನ್ನು ಮತ್ತು ಸ್ವಲ್ಪ ಟೀ ಕುಡಿಯನ್ನು ಕುಡಿಯಬೇಕು.

ಇನ್ನು ಬಿಯರ್​ ಕುಡಿದ ಬಳಿಕ ಜ್ವರ(Fever) ಮತ್ತು ಇತರ ರೋಗಲಕ್ಷಣಗಳನ್ನು ಗಮನಿಸಿದರೆ, ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಿರಿ. ಬಿಯರ್ ಕುಡಿಯುವಾಗ ದೇಹಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಜನರು ಹಲವಾರು ವಿಷಯಗಳತ್ತ ಗಮನ ಹರಿಸಬೇಕು. ಅದರಲ್ಲೂ ಬಿಯರ್ ಕುಡಿದ ಬಳಿಕ ಸಾಕಷ್ಟು ನೀರು ಕುಡಿಯಿರಿ. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ ಮಾಡಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ನೀವು ತಿನ್ನುವ ಆಹಾರದೊಂದಿಗೆ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು.

You may also like

Leave a Comment